ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಶಾಸಕರಿಂದಲೇ ಅಸಹಕಾರ!

ರಾಜ್ಯ ಕಾಂಗ್ರೆಸ್ ಕಚೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ ಕಾಂಗ್ರೆಸ್ ಶಾಸಕರು, ಪರಿಷತ್ ಸದಸ್ಯರ ಅಸಹಕಾರ ಎದ್ದು ಕಾಣುತ್ತಿದೆ. ಆರ್ಥಿಕ ನೆರವು ನೀಡುವ ವಿಚಾರದಲ್ಲಿ ಶಾಸಕರ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

 

ಕೈ ಶಾಸಕರು ನೂತನ ಕಟ್ಟಡ ನಿರ್ಮಾಣಕ್ಕೆ ಹಣವನ್ನು ನೀಡಲು ನಿರಾಕರಿಸಿದಾಗ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರತಿಯೊಬ್ಬ ಶಾಸಕರು ಹಾಗೂ ಪರಿಷತ್ತಿನ ಸದಸ್ಯರು ನೂತನ ಕಟ್ಟಡ ನಿರ್ಮಾಣಕ್ಕೆ ತಲಾ ಒಂದು  ಲಕ್ಷ ನೀಡಬೇಕು. ಸಚಿವರುಗಳು ತಲಾ 5 ಲಕ್ಷ ನೀಡಬೇಕು ಎಂದು ಸೂಚನೆ ನೀಡಿದ್ದರು. ಸೂಚನೆಯಂತೆ 11 ಜನ ಸಚಿವರುಗಳು,8 ಜನ ಶಾಸಕರುಗಳು ಹಾಗೂ 9 ಜನ ಪರಿಷತ್ ಸದಸ್ಯರು ಸೇರಿದಂತೆ ಒಟ್ಟು 28 ಜನ ನೂತನ ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿಲ್ಲ.

ನವೆಂಬರ್ 19 ರ 2014 ರಂದು ಕೆಪಿಸಿಸಿಯ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯ ಹಿಂಭಾಗದಲ್ಲಿ 14 ಕೋಟಿ ವೆಚ್ಚದಲ್ಲಿ ನೂತನ ಕಚೇರಿ ನಿರ್ಮಾಣವಾಗುತ್ತಿದೆ. ಕಾಮಗಾರಿ ಆರಂಭವಾಗಿ 2 ವರ್ಷ ಕಳೆದರು 28 ಶಾಸಕರುಗಳು ಇನ್ನೂ ಆರ್ಥಿಕ ನೆರವು ನೀಡಿಲ್ಲ.ಹಣ ಕೇಳಿದರೆ ತಮ್ಮದೆ ಕಥೆ ಹೇಳುತ್ತಿದ್ದಾರೆ. ಜಮ್ಮು ಕಾಶ್ಮೀರದ ಪ್ರವಾಹಕ್ಕೆ ಹಣ ಕೊಟ್ಟಿದ್ದೇವೆ ಇದಕ್ಕೂ ಕೊಡಬೇಕು ಎಂದು ಕೆಲವು ಶಾಸಕರುಗಳು ಗೊಣಗುತ್ತಾರೆ. ಇನ್ನು ಕೆಲವು ಶಾಸಕರುಗಳು ಕೊಡುತ್ತೇವೆ ಎಂದು ದಿನ ದೂಡುತ್ತಿದ್ದಾರೆ. ಮತ್ತೆ ಕೆಲವರು ಹೊಸ ರಾಗ ತಗೆದಿದ್ದು ನೋಟ್ ಬ್ಯಾನ್ ಆಗಿದೆ. ದುಡ್ಡಿಗೆ ಟೈಟ್ ಆಗಿದೆ ಎನ್ನುತ್ತಿದ್ದಾರಂತೆ.

ಕಟ್ಟಡ ನಿರ್ಮಾಣಕ್ಕೆ ಹಣ ನೀಡದ 11 ಜನ ಸಚಿವರುಗಳ ಹೆಸರು.

ಆರ್.ವಿ.ದೇಶಪಾಂಡೆ, ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್, ಕೃಷ್ಣಬೈರೇಗೌಡ, ರುದ್ರಪ್ಪ ಲಮಾಣಿ, ರಮಾನಾಥ್ ರೈ, ಎ.ಮಂಜು, ರಮೇಶ್ ಜಾರಕಿಹೊಳೆ, ಹೆಚ್.ಆಂಜನೇಯ, ಪ್ರಮೋದ್ ಮದ್ವರಾಜ್, ಪ್ರಿಯಾಂಕ್ ಖರ್ಗೆ,

ಆರ್ಥಿಕ ನೆರವು ನೀಡದ 8 ಜನ ಶಾಸಕರುಗಳು.

ಸಿದ್ದುನ್ಯಾಮಗೌಡ, ಸಿ.ಎಸ್.ನಾಡಗೌಡ, ಗಣೇಶ್ ಹುಕ್ಕೇರಿ, ಮುನಿರತ್ನ, ಶಕುಂತಲ ಶೆಟ್ಟಿ, ಜಿ.ಆರ್.ಲೋಬೋ, ಸಿ.ಪಿ.ಯೋಗೇಶ್ವರ್, ಡಾ.ಸುಧಾಕರ್,

ಕೆಪಿಸಿಸಿಗೆ ಹಣ ನೀಡದ 9 ಜನ ಪರಿಷತ್ ಸದಸ್ಯರುಗಳು.

ಎಸ್.ಆರ್.ಪಾಟೀಲ್, ಕೆ.ಸಿ.ಕೊಂಡಯ್ಯ, ಜಯಮಾಲಾ, ಧರ್ಮಸೇನ, ಎಸ್.ರವಿ, ಆರ್.ಬಿ.ತಿಮ್ಮಾಪುರ್, ಘೋಟ್ನೇಕರ್ ಶ್ರೀಕಾಂತ್, ರಿಜ್ವಾನ್ ಅರ್ಷದ್, ವೀಣಾ ಅಚ್ಚಯ್ಯ

4 thoughts on “ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಶಾಸಕರಿಂದಲೇ ಅಸಹಕಾರ!

 • October 18, 2017 at 12:11 PM
  Permalink

  Hello! I’ve been following your blog for a long time now and finally got the courage to go ahead and give you a shout out from Houston Texas! Just wanted to say keep up the great job!|

 • October 20, 2017 at 7:45 PM
  Permalink

  I do consider all of the ideas you have presented on your post.

  They’re really convincing and can certainly
  work. Nonetheless, the posts are too short for novices.
  May you please prolong them a little from next time?
  Thanks for the post.

 • October 20, 2017 at 8:00 PM
  Permalink

  Hello to every one, the contents existing at this web page are genuinely remarkable for people experience, well, keep up the nice work fellows.|

 • October 24, 2017 at 2:03 PM
  Permalink

  Hi there would you mind letting me know which web
  host you’re utilizing? I’ve loaded your blog in 3 different web browsers and
  I must say this blog loads a lot faster then most. Can you suggest a good web hosting provider at a fair price?
  Thanks, I appreciate it!

Comments are closed.