ಸೆಕ್ಸ್ ಸೀಡಿ ಪ್ರಸಾರ ಬೇಡ, ಕೈ ಶಾಸಕರಿಂದ ಹೈಕೋರ್ಟ್ ಮೊರೆ!

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಅಬಕಾರಿ ಸಚಿವ ಮೇಟಿಯವರ ರಾಸಲೀಲೆ ಪ್ರಕರಣದ ಬಿಸಿ ಇನ್ನೂ ಸಮಾಜದಲ್ಲಿ ಇರುವಾಗಲೇ ಮತ್ತೊಬ್ಬ ಶಾಸಕರು ನನ್ನ ಸೆಕ್ಸ್ ಸಿಡಿ ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಆರ್ ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿಯವರು ದೆಹಲಿಯಲ್ಲಿ ಅಬಕಾರಿ ಸಚಿವ ಮೇಟಿಯವರ ರಾಸಲೀಲೆ ಪ್ರಕರಣದ ಸೀಡಿ ಬಿಡುಗಡೆ ಮಾಡುತ್ತಿದ್ದಂತೆ, ಮೇಟಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜೀನಾಮೆ ನೀಡಿದ್ದರು. ಮೇಟಿಯವರ ರಾಸಲೀಲೆಯ ಸಿಡಿಯನ್ನು ಎಲ್ಲಾ ಮಾಧ್ಯಮಗಳು ಪ್ರಸಾರ ಮಾಡಿದ್ದವು. ಇದರಿಂದ ಹೆದರಿದ ಕಾಂಗ್ರೆಸ್ ನ ಮತ್ತೊಬ್ಬ ಶಾಸಕರು ನನಗೆ ಸಂಬಂಧಿಸಿದ ಯಾವುದೇ ಸೆಕ್ಸ್ ಸಿಡಿಯನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ಹೈ ಕೋರ್ಟ್ ನಿಂದ ತಡೆಯಾಜ್ಞೆ ತಂದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಕಾಂಗ್ರೆಸ್ ಪಕ್ಷದ ಬೀಳಗಿ ಶಾಸಕ ಜಗದೀಶ್ ತಿಮ್ಮನಗೌಡ ಪಾಟೀಲ್  (ಜೆ.ಟಿ.ಪಾಟೀಲ್) ತನಗೆ ಸಂಬಂಧಿಸಿದ ಯಾವುದೇ ಸೆಕ್ಸ್ ಸೀಡಿಯನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ತಡೆ ನೀಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠವು, ಜೆಟಿ ಪಾಟೀಲ್ ವಿರುದ್ಧದ ಯಾವುದೇ ಅಶ್ಲೀಲ ಸೀಡಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ತಡೆಯಾಜ್ಞೆ ನೀಡಿದೆ ಎಂದು ವರದಿಯಾಗಿದೆ.

ಮೇಟಿ ರಾಸಲೀಲೆ ಪ್ರಕರಣದ ಸೀಡಿ ಬಿಡುಗಡೆ ಮಾಡಿದ ಆರ್ ಟಿಐ ಕಾರ್ಯಕರ್ತ  ರಾಜಶೇಖರ್  ಮುಲಾಲಿ ಅವರು ತಮ್ಮ ಬಳಿ ಇನ್ನೂ ಮೂವರು ಶಾಸಕರ ರಾಸಲೀಲೆ ಸೀಡಿಗಳಿವೆ. ಸದ್ಯದಲ್ಲೇ ಒಂದೊಂದಾಗಿ ಬಿಡುಗಡೆ ಮಾಡುತ್ತೇನೆ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿಯೇ ಮತ್ತೊಬ್ಬ ಬೀಳಗಿ ಶಾಸಕ ಜಿಟಿ ಪಾಟೀಲ್ ಕೋರ್ಟ್ ಮೊರೆ ಹೋಗಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

Comments are closed.

Social Media Auto Publish Powered By : XYZScripts.com