ತ್ರಿಮೂರ್ತಿಗಳ ಮೇಲೆ ತಮಿಳರ ಕಣ್ಣು!

ಸ್ಟಾರ್ ಆಟಗಾರರನ್ನು ಒಳಗೊಂಡ ಕರ್ನಾಟಕ ಹಾಗೂ ತಮಿಳುನಾಡು ನಡುವಣ ರಣಜಿ ಕ್ವಾರ್ಟರ್ ಫೈನಲ್ ಹಣಾಹಣಿ ನಾಳೆಯಿಂದ ವಿಶಾಖಪಟ್ಟಣದಲ್ಲಿ ನಡೆಯಲಿದ್ದು ಕುತೂಹಲ ಮೂಡಿಸಿದೆ.
ಇತ್ತೀಚಿಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆದಿದ್ದ ರಾಜ್ಯದ ಕರುಣ್ ನಾಯರ್, ಕೆ.ಎಲ್.ರಾಹುಲ್ ಮನೀಶ್ ಪಾಂಡೆ ಮತ್ತೆ ರಣಜಿ ತಂಡವನ್ನು ಸೇರಿಕೊಂಡಿದ್ದಾರೆ. ಐದನೇ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ದಾಖಲಿಸಿದ ಕರುಣ್ ಪಂದ್ಯದ ಪ್ರಮುಖ ಆಕರ್ಷಣೆ. ಪ್ರವಾಸಿ ಬಲಿಷ್ಠ ಬೌಲಿಂಗ್ ಶಕ್ತಿಯನ್ನು ಸಮರ್ಥವಾಗಿ ಎದುರಿಸಿದ ಕರುಣ್ ಕನ್ನಡಿಗರು ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಇನ್ನು ಕೆ.ಎಲ್ ರಾಹುಲ್ ದ್ವಿಶತಕದ ಅಂಚಿನಲ್ಲಿ ಔಟಾಗಿ ನಿರಾಸೆಯನ್ನು ಅನುಭವಿಸಿದರೂ, ತಮ್ಮ ಬ್ಯಾಟಿಂಗ್ ಕ್ಷಮತೆಯನ್ನು ವಿಶ್ಚಕ್ಕೆ ಪರಿಚಯಿಸಿದ್ದಾರೆ. ಅವಕಾಶಕ್ಕಾಗಿ ಕಾಯುತ್ತಿರುವ ಇನ್ನೋರ್ವ ಕರ್ನಾಟಕ ದ ಮನೀಶ್ ಪಾಂಡೆ ಸಿಮಿತ್ ಓವರ್‌ಗಳ ಆಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಈ ಮೂವರು ತಂಡಕ್ಕೆ ಮರಳಲಿರುವುದೆ ಕರ್ನಾಟಕ ತಂಡದ ಬ್ಯಾಟಿಂಗ್ ಬಲ ತುಂಬಿದೆ.
ಪ್ರಸಕ್ತ ರಣಜಿ ಟೂರ್ನಿಯಲ್ಲಿ ಸತತ ರನ್ ಬರವನ್ನು ಎದುರಿಸುತ್ತಿದ್ದ ರಾಬಿನ್ ಉತ್ತಪ್ಪಗೆ ಕೋಕ್ ನೀಡಲಾಗಿದೆ. ಇನ್ನು ತಮಿಳುನಾಡು ತಂಡದ ಸ್ಟಾರ್ ಆಟಗಾರರಾದ ಆರ್.ಅಶ್ವಿನ್ ಹಾಗೂ ಮುರಳಿ ವಿಜಯ್ ತಂಡದಿಂದ ದೂರ ಉಳಿಯಲಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವಿಜಯ್ ಕರ್ನಾಟಕ ವಿರುದ್ಧದ ರಣಜಿ ಟೂರ್ನಿಯ ಪಂದ್ಯದಲ್ಲಿ ಅಖಾಡಕ್ಕೆ ಇಳಿಯುತ್ತಿಲ್ಲ. ಮೊದಲು ತಮಿಳುನಾಡು ಕ್ರಿಕೆಟ್ ಸಂಸ್ಥೆ ಹೊರಡಿಸಿದ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಬಳಿಕ ಹೊರಡಿಸಿದ ತಂಡದಲ್ಲಿ ಇವರಿಗೆ ವಿಶ್ರಾಂತಿ ನೀಡಲಾಗಿದೆ.

One thought on “ತ್ರಿಮೂರ್ತಿಗಳ ಮೇಲೆ ತಮಿಳರ ಕಣ್ಣು!

  • October 18, 2017 at 2:22 PM
    Permalink

    We have been in enterprise for over thirty years criticism-free with the Better Business Bureau.

Comments are closed.

Social Media Auto Publish Powered By : XYZScripts.com