ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ!

ರಾಜ್ಯ ಸರ್ಕಾರ ಖಾಸಗಿ ಉದ್ಯಮ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ  ಶೇ 100 ರಷ್ಟು ಅವಕಾಶ ಕಲ್ಪಿಸುವ   ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯದ ಹಲವಾರು ಕಂಪನಿಗಳಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದು ಯುವಕರು ಉದ್ಯೋಗವನ್ನು ಮಾಡುತ್ತಿದ್ದರು. ತಮ್ಮ ರಾಜ್ಯದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಆದ್ದರಿಂದ  ರಾಜ್ಯದ ಭೂಮಿ, ಜಮೀನು ಮತ್ತು ನೀರನ್ನು ಬಳಕೆ ಮಾಡಿಕೊಂಡಿರುವ ಎಲ್ಲಾ ಕಂಪನಿಗಳು ಇನ್ನೂ ಮುಂದೆ ಡಿ ಮತ್ತು ಸಿ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕೆಂದು ಕರ್ನಾಟಕ ಇಂಡಸ್ಟ್ರೀಯಲ್ ಎಂಪ್ಲಾಯ್ ಮೆಂಟ್ ಕಾಯ್ದೆ ತಿದ್ದುಪಡಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಆದೇಶದ ಪ್ರಕಾರ ಕ್ಲರ್ಕ್, ಗುಮಾಸ್ಥ, ಹಾಗೂ ಜವಾನ ಸೇರಿದಂತೆ ಎಲ್ಲಾ ಹುದ್ದೆಗಳನ್ನು ಕನ್ನಡಿಗರಿಗೆ ನೀಡಲೇಬೇಕು ಎಂದು ಈಗಾಗಲೇ ಕರಡು ಅಧಿಸೂಚನೆ ಹೊರಡಿಸಿದ್ದು, 30 ದಿನಗಳ ಒಳಗೆ ಅಂತಿಮ ಅಧಿಸೂಚನೆ ಜಾರಿಗೆ ಬರಲಿದೆ. ಈ ಒಂದು ತಿದ್ದುಪಡಿಯ ಕಾಯ್ದೆಯ ಅಡಿಯಲ್ಲಿ ಐಟಿ ಹಾಗೂ ಬಿಟಿ ಕಂಪನಿಗಳು ಬಾರದ ಹಿನ್ನೆಲೆಯಲ್ಲಿ ಮೀಸಲಾತಿ ಸಿಗುವುದಿಲ್ಲ.

ಈ ಒಂದು ಮೀಸಲಾತಿ ಪಡೆಯುವವರು ಮೂಲತಃ ಕರ್ನಾಟಕದವರಾಗಿರಬೇಕು. ಕಡ್ಡಾಯವಾಗಿ ಕನ್ನಡವನ್ನು ಓದಲು, ಬರೆಯಲು ಹಾಗೂ ಮಾತನಾಡಲು ಬರುವಂತಿರಬೇಕು. ಅಲ್ಲದೇ ಸುಮಾರು 15 ವರ್ಷ ಕರ್ನಾಟಕದಲ್ಲಿ ವಾಸಮಾಡಿರಬೇಕು. ಅಂತವರಿಗೆ ಮಾತ್ರ ಅವಕಾಶ ನೀಡಲು ರಾಜ್ಯ ಸರ್ಕಾರ ಆದೇಶಿಸಿದೆ.

 

Comments are closed.