ಕಿಚ್ಚನ ಹೆಬ್ಬುಲಿ ಈಗ ದೇಶದ ಟಾಪ್ 10 ಅಂತೆ..!

ಅಭಿನಯ ಚಕ್ರವರ್ತಿ  ಕಿಚ್ಚ ಸುದೀಪ್ ಅಭಿನಯದ  ಭಾರಿ ನೀರೀಕ್ಷಿತ ಹೆಬ್ಬುಲಿ ಚಿತ್ರ ಬಿಡುಗಡೆಗೂ ಮುನ್ನ   ಕನ್ನಡ ಚಿತ್ರರಂಗದ ಹಲವು ದಾಖಲೆಗಳನ್ನು ಮುರಿದು ಮತ್ತೊಂದು ದಾಖಲೆಯನ್ನು ತನ್ನ ಕಡೆಗೆ  ಸೇರಿಸಿಕೊಂಡಿದೆ.

ಹೌದು, ಕಿಚ್ಚ ಸುದೀಪ್‌ ಅಭಿನಯದ, ಎಸ್ ಕೃಷ್ಣ ನಿರ್ದೇಶನದ ಹಾಗೂ ರಘುನಾಥ್ ಉಮಾಪತಿ ಶ್ರೀನಿವಾಸ್ ನಿರ್ಮಾಣದ ಹೆಬ್ಬುಲಿ ಚಿತ್ರವು ಕನ್ನಡ ಚಿತ್ರರಂಗವಲ್ಲದೆ ಭಾರತದಾದ್ಯಂತ ಕ್ರೇಜ್‌ ಸೃಷ್ಟಿಸಿರುವ ಚಿತ್ರ. ಈಗಾಗಾಲೇ ಆಡಿಯೋ ರೈಟ್ಸ್‌ ಹಾಗೂ ಟಿವಿ ರೈಟ್ಸ್‌ ನಲ್ಲಿ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದ್ದು, ಬಿಡುಗಡೆಗೂ ಮುನ್ನವೇ ಭಾರಿ ಕುತೂಹಲವನ್ನು ಮೂಡಿಸಿದೆ.

 

ಇನ್ನೂ ಇದೇ ಡಿಸೆಂಬರ್ 25 ರಂದು ದಾವಣಗೆರೆಯಲ್ಲಿ ಜಿ.ಕನ್ನಡ ವಾಹಿನಿಯ ಸಹಯೋಗದಲ್ಲಿ ಹೆಬ್ಬುಲಿಯ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದ್ದು, ಸುದೀಪ್ ಸೇರಿದಂತೆ ಚಿತ್ರ ತಂಡ ಭಾಗವಹಿಸಲಿದೆ.

ಇದೆಲ್ಲದರ ನಡುವೆ ಈಗ ಮತ್ತೊಂದು ದಾಖಲೆಯನ್ನು ಸೃಷ್ಟಿಸಿರುವ ಹೆಬ್ಬುಲಿ ಚಿತ್ರ imdb (internet movie data base )ನ “ಭಾರತದ ಬಹು ನಿರೀಕ್ಷಿತ ಚಿತ್ರಗಳ ಟಾಪ್ 10 ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ.

ಮೊದಲ ಸ್ಥಾನದಲ್ಲಿ ಅಮೀರ್‌ ಖಾನ್‌ ಅಭಿನಯದ ‘ದಂಗಲ್‌’ ಚಿತ್ರ ಹಾಗೂ ದ್ವಿತೀಯ ಸ್ಥಾನದಲ್ಲಿ ಶಾರುಕ್‌ ಖಾನ್‌ರ ‘ರಯೀಸ್‌’ ಚಿತ್ರಗಳಿವೆ. ಟಾಪ್‌ 10 ಚಿತ್ರಗಳ ಈ ಪಟ್ಟಿಯಲ್ಲಿ ಕನ್ನಡ, ತೆಲುಗು, ಹಿಂದಿ ಚಿತ್ರಗಳು ಸೇರಿವೆ. ಹೆಬ್ಬುಲಿ ಕನ್ನಡ ಚಿತ್ರ ಮೂರನೇ ಸ್ಥಾನದಲ್ಲಿದೆ. ಒಟ್ಟಾರೆ ಬಿಡುಗಡೆಗೂ ಮುನ್ನ ಭಾರಿ ಸದ್ದು ಮಾಡುತ್ತಿರುವ ಈ ಚಿತ್ರದಲ್ಲಿ ಎಸ್. ಕೃಷ್ಣರವರ ನಿರ್ದೇಶನ  ಹೇಗಿದೆ ಅದರಲ್ಲಿ ಸುದೀಪ್ ಅಭಿನಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.

Social Media Auto Publish Powered By : XYZScripts.com