ತೆಂಗಿನಕಾಯಿ ಕೀಳಲು ರೋಬೋಟ್ ಬಳಕೆ…!

ರೋಬೋಟನ್ನು ಮೊದಲು ತೆಂಗಿನ ಮರಕ್ಕೆ ಫಿಕ್ಸ್‌ ಮಾಡಬೇಕು. ನಂತರ ಕಂಟ್ರೋಲರ್‌ ಮೂಲಕ ಇದನ್ನು ಮೂವ್ ಮಾಡಬಹುದು. ರೋಬೋಟ್‌ ಮರ ಹತ್ತಿದ ಬಳಿಕ ನೀವು ಅದರ ಕೈಗಳನ್ನ ಮೂವ್‌ ಮಾಡಿ ತೆಂಗಿನ ಕಾಯಿ ಕೀಳಬಹುದಾಗಿದೆ. ಇದಕ್ಕಾಗಿ ಸಂಶೋಧಕರು ಬ್ಲೂಟೂತ್ ವೈರ್‌‌ಲೆಸ್ ತಂತ್ರಜ್ಞಾನ ಹಾಗೂ ವೈಫೈ ಆಧಾರಿತ ಕ್ಯಾಮರಾ ಅಳವಡಿಸಿದ್ದಾರೆ. ಈ ರೀತಿಯಾಗಿ ಇದು ಕೆಲಸವನ್ನು ಮಾಡುತ್ತದೆ. ಈಗಾಗಲೇ ಕೇರಳದಲ್ಲಿ ಇದನ್ನು ಉಪಯೋಗಿಸುತ್ತಿದ್ದು, ರೈತರು ಮೆಚ್ಚುಗೆ ವಹಿಸಿದ್ದಾರೆ. ತದ ನಂತರ ಈ ಒಂದು ರೋಬೋಟ್ ಗೆ ಮುಂಬರುವ ದಿನಗಳಲ್ಲಿ ದೇಶ್ಯಾದಂತ ಬೇಡಿಕೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.
ಸ್ಮಾರ್ಟ್ ಫೋನ್ ಆ್ಯಪ್‌ ಅಥವಾ ಜಾಯ್ ಸ್ಟಿಕ್ ಮೂಲಕ ಆಪರೇಟ್ ಮಾಡಬಹುದಾದ ರೋಬೋಟ್ ಇಂದಾಗಿದ್ದು, ಅದರ ಹೆಸರು ಕೋಕೋಬೋಟ್. ಕೇರಳದ ಅಮೃತ ವಿಶ್ವವಿದ್ಯಾನಿಲಯದಲ್ಲಿ ನಡೆದ ರೋಬೋಟಿಕ್ಸ್ & ಆಟೋಮೇಶನ್ ಫಾರ್ ಹ್ಯೂಮಾನಿಟೇರಿಯನ್ ಅಪ್ಲಿಕೇಷನ್ಸ್-2016 ಕಾನ್ಫರೆನ್ಸ್‌‌ನಲ್ಲಿ ಇದನ್ನು ಪ್ರದರ್ಶನಕ್ಕಿಡಲಾಗಿದೆ.

Comments are closed.

Social Media Auto Publish Powered By : XYZScripts.com