ಸಿಎಂ ಸಿದ್ದರಾಮಯ್ಯಗೆ ಅಧಿಕಾರದ ಮದ- ಎಚ್ ಡಿಕೆ ವಾಗ್ದಾಳಿ

ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಕುಮಾರ ಸ್ವಾಮಿ ಇಂದು ಬೆಳಗಾವಿಗೆ ಆಗಮಿಸಿದ್ದರು. ಸಿ ಎಂ ಸಿದ್ದರಾಮಯ್ಯ ಅವರಿಗೆ 25 ವರ್ಷ ಜೆಡಿಎಸ್ ಪಕ್ಷದ ಶಕ್ತಿಯನ್ನು ದೇವೇಗೌಡರು ಸಿದ್ಧರಾಮಯ್ಯಗೆ ಅವರಿಗೆ ಗುತ್ತಿಗೆ ನೀಡಿದ್ದರು. ಇಡೀ ಪಕ್ಷವನ್ನು ಹೈಜ್ಯಾಕ್ ಮಾಡಿಕೊಂಡು ಕಾಂಗ್ರೆಸ್ ಗೆ ಸಿದ್ದರಾಮಯ್ಯ ಹೋಗಿದ್ದು, ಈಗ ಅವರಿಗೆ ಅಧಿಕಾರದ ಮಧ ಹಿಡಿದಿದೆ  ಎಂದು ಕುಮಾರಸ್ವಾಮಿ ಸಿಎಂ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

kumaraswamy-2

ಬೆಳಗಾವಿಯಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ  ನಿನ್ನೆ ನಂಜನಗೂಡಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲ್ಲ ಎಂದು ಹೇಳಿಕೆ ನೀಡಿದ್ದರು.  ಇದಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬೆಳಗಾವಿಯಲ್ಲಿ ಖಾರವಾಗಿ ತಿರುಗೇಟು ನೀಡಿದ್ದಾರೆ. ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ಅವರಿಗೆ 25 ವರ್ಷ ಜೆಡಿಎಸ್ ಪಕ್ಷದ ಶಕ್ತಿಯನ್ನು ದೇವೇಗೌಡರು ಗುತ್ತಿಗೆ ನೀಡಿದ್ದರು. ಇಡೀ ಪಕ್ಷವನ್ನು ಹೈಜಾಕ್ ಮಾಡಿಕೊಂಡು ಸಿದ್ದರಾಮಯ್ಯ ಕಾಂಗ್ರೆಸ್ ಗೆ ಹೋದರು. ನಂತರ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರ ಯೋಗ್ಯತೆ 200 ಮತಗಳಿಂದ ಮಾತ್ರ ಗೆಲವು ಸಾಧಿಸಲು ಸಾಧ್ಯವಾಯಿತು. ಇದೀಗ ಅಧಿಕಾರದ ಮದದಲ್ಲಿ ನಮ್ಮ ಪಕ್ಷದ ಬಗ್ಗೆ ಸಿಎಂ ಸಿದ್ದರಾಮಯ್ಯ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ನಂತರ ಕೆಪಿಎಸ್ ಸಿ ಕಾರ್ಯದರ್ಶಿ ಸುಭೋದ ಯಾದವ ದಿಢೀರ ವರ್ಗಾವಣೆ ವಿಚಾರವಾಗಿ  ಮಾತನಾಡಿದ ಕುಮಾರಸ್ವಾಮಿ ಕೆಪಿಎಸ್ಸಿ ನಲ್ಲಿ ಶ್ಯಾಂ ಭಟ್ ಹಗೂ ಕಾರ್ಯದರ್ಶಿ ನಡುವೆ ಹೊಂದಾಣಿಕೆಯಾಗಿಲ್ಲ. ಇತ್ತೀಚಿಗೆ ನಡೆದ ಆರ್ ಟಿ ಓ ಅಧಿಕಾರಿಗಳ ಭರ್ತಿ ಮಾನದಂಡ ವೇನು ಎಂದು ಪ್ರಶ್ನಿಸಿದರು. ಅಕ್ರಮ ತಡೆಯಲು ಯತ್ನಿಸಿದ ಅಧಿಕಾರಿಯನ್ನು ಎತ್ತಗಂಡಿ ಮಾಡಲಾಗಿದೆ. ಕೆಪಿಎಸ್ಸಿ ಕ್ಲೀನ್ ಮಾಡಲು ಶ್ಯಾಂ ಭಟ್ ಅವರನ್ನು ನೇಮಿಸಲಾಗಿದ ಎಂದು ವ್ಯಂಗವಾಡಿದರು.

Comments are closed.

Social Media Auto Publish Powered By : XYZScripts.com