ನಾಯರ್ ತ್ರಿಶತಕ- ಕ್ರಿಕೆಟ್ ಜನಕರಿಗೆ ಕರುಣಾಜನಕ!

ಚೆನ್ನೈನಲ್ಲಿ  ಮಧ್ಯಮಕ್ರಮಾಂಕದ ಕರುಣ್ ನಾಯರ್ ಬಾರಿಸಿದ ಚೊಚ್ಚಲ ತ್ರಿಶತಕದ ನೆರವಿನಿಂದ ಭಾರತ 5ನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ಗೆ ಭರ್ಜರಿ ತಿರುಗೇಟು ನೀಡಿತು. ಈ ಮೂಲಕ ಭಾರತ ಇನ್ನಿಂಗ್ಸ್ ಮುನ್ನಡೆಯನ್ನು ಸಾಧಿಸಿತು.

nair-2

ಚೆನ್ನೈನ ಚೆಪಾಕ್ ಅಂಗಳದಲ್ಲಿ 4ನೇ ದಿನ ಕರ್ನಾಟಕದ ಕರುಣ್ ನಾಯರ್ ಐತಿಹಾಸಿಕ ಸಾಧನೆ ಮಾಡುವ ಮೂಲಕ ಗಮನ ಸೆಳೆದರು. ಭಾರತದ ಪರ 300ರನ್ ಪೇರಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಕುರುಣ್ ನಾಯರ್ ಸೊಗಸಾದ ಇನ್ನಿಂಗ್ಸ್ ಸಹಾಯದಿಂದ ಭಾರತ 757 ರನ್ ಗಳಿಗೆ 7ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

2014ರ ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 300ರನ್ ಬಾರಿಸಿ ಕರುಣ್ ನಾಯರ್ ಗಮನ ಸೆಳೆದಿದ್ದರು. ಸೋಮವಾರ ಆಂಗ್ಲರ ವಿರುದ್ಧ 303ರನ್ ಪೇರಿಸುವ ಮೂಲಕ ಮತ್ತೊಮ್ಮೆ ಅಂತಹದೆ ಸಾಧನೆ ಮಾಡಿದ್ದಾರೆ. ಈ ಮೂಲಕ ಕುರುಣ್, ಕೋಚ್ ಅನಿಲ್ ಕುಂಬ್ಳೆ, ನಾಯಕ ವಿರಾಟ್ ಕೊಹ್ಲಿ ತಮ್ಮ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.

79.53ರ ಸರಾಸರಿಯಲ್ಲಿ 381ಎಸೆತಗಳಲ್ಲಿ 303ರನ್ ಪೇರಿಸಿದ ಕುರುಣ್, 32ಬೌಂಡರಿ ಹಾಗೂ 4 ಸಿಕ್ಸರ್ ಗಳನ್ನು ಸಿಡಿಸಿದರು. ಈ ಮೂಲಕ ಚೆಪಾಕ್ ಅಂಗಳದ ಮೂಲೆ ಮೂಲೆಗೆ ಚೆಂಡಿನ ದರ್ಶನ ಮಾಡಿಸಿದರು.

ಮತ್ತೊಬ್ಬ ಕನ್ನಡಿಗ ಕೆ.ಎಲ್. ರಾಹುಲ್ 199ರನ್ ಪೇರಿಸಿ, ಪೆವಿಲಿಯನ್ ಸೇರಿಸಿದರೆ, ಪಾರ್ಥಿವ್ ಪಾಟೇಲ್ 71, ರವಿಚಂದ್ರನ್ ಅಶ್ವಿನ್ 67, ರವೀಂದ್ರ ಜಡೇಜಾ 51 ರನ್ ಬಾರಿಸಿ ಭಾರತದ ಮೊತ್ತವನ್ನು ಹೆಚ್ಚಿಸುವಲ್ಲಿ ಸಹಕಾರಿಯಾದರು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಪ್ರಥಮ ಇನಿಂಗ್ಸ್ 477

ಭಾರತ ಪ್ರಥಮ ಇನಿಂಗ್ಸ್ 759-7

ಕರುಣ್ ನಾಯರ್ 303, ಕೆ.ಎಲ್.ರಾಹುಲ್ 199, ಪಾರ್ಥಿವ್ ಪಾಟೇಲ್ 71, ಅಶ್ವಿನ್  67, ಜಡೇಜಾ 51

ಸ್ಟುವರ್ಟ್ ಬ್ರಾಡ್ 80ಕ್ಕೆ2, ಲಿಯಾಮ್  ಡಾಸನ್ 129ಕ್ಕೆ2

ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ 12ಕ್ಕೆ0

Comments are closed.