ನಿರ್ಲಕ್ಷಿಸಬೇಡಿ ಆರು ಸಾಮಾನ್ಯ ಆರೋಗ್ಯ ಸಮಸ್ಯೆಯನ್ನ!

ದಿನನಿತ್ಯ ನಗರ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಾದಂತೆ ಅನಾರೋಗ್ಯದ ಸಮಸ್ಯೆಯೂ ಕೂಡಾ ಕಾಡುತ್ತಿದೆ. ದಿನನಿತ್ಯ ವಿವಿಧ ಕೆಲಸ ಕಾರ್ಯ ಮತ್ತು ಉದ್ಯೋಗಗಳಲ್ಲಿ ಎಲ್ಲರೂ ತಲ್ಲೀನರಾಗಿ ತಮ್ಮ ಆರೋಗ್ಯದ ಬಗ್ಗೆ  ಗಮನಹರಿಸುವುದನ್ನೇ ಮರೆತಿದ್ದಾರೆ. ಆರೋಗ್ಯ ಎಲ್ಲರಿಗೂ ಮುಖ್ಯವಾದುದು ಆದ್ದರಿಂದ ನಾವು ದಿನನಿತ್ಯ ಆರೋಗ್ಯದ ಬಗ್ಗೆ ಗಮನಹರಿಸಬೇಕಿದೆ. ದಿನನಿತ್ಯ ನಮ್ಮನ್ನು ಕಾಡುವ ಕೆಲವು ಅನಾರೋಗ್ಯಗಳನ್ನು ನಾವು ನಿರ್ಲಕ್ಷಿಸುತ್ತಿದ್ದೇವೆ. ಸ್ವಯಂ ಔಷಧಿಯ ಮೂಲಕ ರೋಗ ನಿಯಂತ್ರಿಸಲು ಪ್ರಯತ್ನಿಸುತ್ತೇವೆ. ಇದರಿಂದ ಮುಂದಿನ ದಿನಗಳಲ್ಲಿ ದೊಡ್ಡ ಆಘಾತ ಎದುರಿಸಬೇಕಾದ ಸಮಸ್ಯೆ ಎದುರಾಗುತ್ತದೆ. ಇಂತಹ ಕೆಲವು ಸಾಮಾನ್ಯ ಅನಾರೋಗ್ಯವನ್ನು ನಾವು ನಿರ್ಲಕ್ಷಿಸುವಂತಿಲ್ಲ.

1 ಸಾಮಾಜಿಕ ಪ್ರತ್ಯೇಕತೆ ಮತ್ತು ಆಸಕ್ತಿ ಕುಗ್ಗುವಿಕೆ.

depretion

ಸಾಮಾನ್ಯವಾಗಿ ನಗರ ಪ್ರದೇಶಗಲ್ಲಿ ಸುಮಾರು ಜನರು ತನ್ನದೇ ಆದ ಸೀಮಿತ ವ್ಯಾಪ್ತಿಯಲ್ಲಿ ಮಾತ್ರ ಕಾಲ ಕಳೆಯುತ್ತಾರೆ. ಇದರಿಂದ ಇತರರೊಂದಿಗೆ ಮಾತನಾಡುವುದಕ್ಕೂ ನಿರ್ಲಕ್ಷ ಮಾಡುತ್ತಾರೆ. ಇದರಿಂದ ವ್ಯಕ್ತಿಯು ಒಬ್ಬಂಟಿಯಾಗಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಾನೆ.  ಇದಕ್ಕೆ ತಕ್ಷಣ ಚಿಕಿತ್ಸೆ ನೀಡದಿದ್ದರೆ ಗಂಭೀರ ಮಾನಸಿಕ ಸಮಸ್ಯೆಗಳಿಗೂ ಕಾರಣವಾಗಬಹುದು.

2 ನಿಧಾನವಾದ ಮತ್ತು ಅಸ್ಪಷ್ಟ ಮಾತು

2

ಮನುಷ್ಯನಿಗೆ ಒಂದು ಸಂದರ್ಭದಲ್ಲಿ ಆಲಸ್ಯ ಕಾಣಬಹುದು. ಆದರೆ ಇದನ್ನು ನಿರಾಕರಿಸಿದರೆ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಇದರಿಂದ ಬ್ರೈನ್ ಸ್ಟ್ರೋಕ್ ಹಾಗೂ ಬ್ರೈನ್ ಟ್ರೂಮರ್ ತೊಂದರೆ ಅನುಭವಿಸಬಹುದು. ಮೆದುಳಿನ ಸಂಕೇತಗಳು ಸರಿಯಾಗಿ ಕಳುಹಿಸಲು ಸಾಧ್ಯವಾಗದೆ ಮಾತಿನಲ್ಲಿ ಅಸ್ಪಷ್ಟತೆ  ಕಂಡುಬರುತ್ತದೆ. ಇದರಿಂದ ಇದನ್ನು ಪ್ರಾಥಮಿಕ ಶಿಕ್ಷಣ ಮತ್ತು ಆದ್ಯತೆಯ ಮೇಲೆ ಉಪಚರಿಸಬೇಕು.

3) ನಿಧಾನವಾಗಿ ನಡೆಯುವುದು

walk

ದಿನವೂ ಕೆಲಸದ ಒತ್ತಡ, ಸೋಮಾರಿತನ ಹಾಗೂ ಕೆಲಸದ ಕಾಳಜಿ ಸೇರಿದಂತೆ ಮತ್ತಿತರ ಕಾರಣಗಳಿಂದ ಜಡ ಯಾವಾಗಲೂ ನಮ್ಮನ್ನು ಬಾಧಿಸುತ್ತಿದ್ದರೆ ಇದು ನರರೋಗದ ಮೇಲೆ ಪರಿಣಾಮ ಬೀರಬಹುದು. ಹಾಗೂ  Amyotrophic Lateral Sclerosis ರೋಗದ ಲಕ್ಷಣವೂ ಆಗಿರಬಹುದು.

4) ಕೈನಡುಕ ಹಾಗೂ ಬೆವರು

tremor-hands

ಸಾಮಾನ್ಯವಾಗಿ ಟೆನ್ಷನ್ ಮತ್ತು ನರ್ವಸ್ ಕಾರಣದಿಂದಾಗಿ ಭಾಷಣ ಹಾಗೂ ಸಂದರ್ಶನದ ವೇಳೆ ಆರಂಭದಲ್ಲಿ ನಮ್ಮ ಕೈ ನಡುಗುತ್ತದೆ ಅಲ್ಲದೆ ಬೆವರು ಬರುತ್ತದೆ. ಇದು ಪದೇ ಪದೇ ಸಂಭವಿಸುತ್ತಿದ್ದರೆ ಮುಂಜಾಗ್ರತಾ ಕ್ರಮವಾಗಿ ಡಾಕ್ಟರ್ ಗೆ ತೋರಿಸುವುದು ಉತ್ತಮ. ಇದು ಥೈರಾಯ್ಡ್ ಗ್ರಂಥಿಯ ಅಸ್ವಸ್ಥತೆಯನ್ನು ಸೂಚನೆಯಾದರೂ ಆಗಿರಬಹುದು.

5. ದೀರ್ಘಕಾಲದ ಕೆಮ್ಮು
bigstock-senior
ವಾತಾವರಣ ಬದಲಾವಣೆ, ಮಾಲಿನ್ಯ ಇತ್ಯಾದಿ ಕಾರಣಗಳಿಂದಾಗಿ ಕೆಮ್ಮು ಉಂಟಾಗುತ್ತದೆ. ಇದು ದೀರ್ಘಕಾಲ ಕೆಮ್ಮು ಅಸ್ತಮಾದಂತಹ ಕಾಯಿಲೆಗಳಿಗೂ ಕಾರಣವಾಗಬಹುದು. ಇದರಿಂದ ಇಂತಹ ಸಮಸ್ಯೆಗಳು ಕಂಡುಬಂದಲ್ಲಿ ವೈದ್ಯರಿಂದ ಚೆಕಪ್ ಮಾಡಿಸಿಕೊಳ್ಳುವುದನ್ನು ಮರೆಯಬೇಡಿ.
6. ಇದ್ದಕ್ಕಿಂದ್ದಂತೆ ತೂಕ ಕಡಿಮೆಯಾಗುವಿಕೆ.

6

ಕೆಲವೇ ದಿನಗಳಲ್ಲಿ ನಿಮ್ಮ ದೇಹದಲ್ಲಿ ಕೆಲವೊಂದು ಬದಲಾವಣೆಗಳು ಕಂಡುಬಂದು ದಿನೇ ದಿನೇ ತೂಕದಲ್ಲಿ ಕಡಿಮೆಯಾಗುತ್ತಿದ್ದರೆ ಲೇಜಿ ಮಾಡಬೇಡಿ.  (ಡಯಟ್ ಹಾಗೂ ವರ್ಕೌಟ್ ಮಾಡುತ್ತಿದ್ದರೆ ಹೊರತುಪಡಿಸಿ) ಕೆಲವೇ ದಿನಗಳಲ್ಲಿ ತೂಕ ಕಡಿಮೆಯಾಗುವುದು ಕ್ಯಾನ್ಸರ್ ರೋಗದ ಗುಣವೂ ಹೌದು ಆದ್ದರಿಂದ ಯಾವುದಕ್ಕೂ ಒಮ್ಮೆ ವೈದ್ಯರನ್ನು ಸಂಪರ್ಕಿಸಿ.

ಮಾಲಿನ್ಯ ಮತ್ತು ನಮ್ಮ ಆಹಾರ ವ್ಯವಸ್ಥೆಯಿಂದಾಗಿ ಕೆಲವು ರೋಗಗಳು ನಮ್ಮಲ್ಲಿ ಕಾಣಿಸಿಕೊಳ್ಳುತ್ತಿವೆ. ಇದರಿಂದ ನಮ್ಮ ಆರೋಗ್ಯವನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕಿದೆ. ಯಾವುದೇ ರೋಗಗಳು ನಮಗೆ ಅರಿವಿಲ್ಲದೆ ನಮ್ಮನ್ನು ಆವರಿಸಿಕೊಳ್ಳುತ್ತವೆ. ನಮ್ಮ ವಾತಾವರಣದಲ್ಲಿ ಶೇ 70ರಿಂದ 80 ರಷ್ಟು ಕ್ಯಾನ್ಸರ್ ಕಾರಕಗಳು ಇವೆ. ಕೆಲವೊಂದು ರೋಗಗಳು ನಮ್ಮನ್ನು ಆವರಿಸಿದರೆ ನಮ್ಮಲ್ಲಿರುವ ಹಣ ಮತ್ತು ಜೀವ ಎರಡನ್ನು ಬಲಿ ಪಡೆಯುತ್ತವೆ.

One thought on “ನಿರ್ಲಕ್ಷಿಸಬೇಡಿ ಆರು ಸಾಮಾನ್ಯ ಆರೋಗ್ಯ ಸಮಸ್ಯೆಯನ್ನ!

  • October 20, 2017 at 6:40 PM
    Permalink

    There’s noticeably a bundle to learn about this. I assume you made certain nice points in features also.

Comments are closed.

Social Media Auto Publish Powered By : XYZScripts.com