300ರರ ಕ್ಲಬ್ ಗೆ ಸೇರಿದ ಕನ್ನಡಿಗ ಕರುಣ್!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತಂಡೂಲ್ಕರ್, ಗೋಡೆ ಖ್ಯಾತೆಯ ರಾಹುಲ್ ದ್ರಾವಿಡ್, ದಾದಾ ಸೌರವ್ ಗಂಗೂಲಿ, ಡ್ಯಾಶಿಂಗ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ವಿ.ವಿ.ಎಸ್ ಲಕ್ಷ್ಮಣ್  ಅವರು ಮಾಡದ ಅಪರೂಪದ ಸಾಧನೆಯನ್ನು ಕರ್ನಾಟಕದ ಹೆಮ್ಮೆಯ ಪುತ್ರ ಕರುಣ್ ನಾಯರ್ ಮಾಡಿ ವಿಶ್ವದ ಗಮನ ಸೆಳೆದಿದ್ದಾರೆ.
nair-5
ಚೆನ್ನೈನ ಚಿಪಾಕ ಅಂಗಳದಲ್ಲಿ ಕರುಣ್ ನಾಯರ್ ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತ್ರಿಶತಕ ಬಾರಿಸಿದ ಎರಡನೇ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ವಿಶ್ವದಲ್ಲಿ ತ್ರಿಶತಕ ಬಾರಿಸಿದ 30ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿರೇಂದ್ರ ಸೆಹ್ವಾಗ್ ಅವರು ಇದೇ ಅಂಗಳದಲ್ಲಿ ಸಿಡಿಲ ಮರಿ ದಕ್ಷಿಣ ಆಫ್ರಿಕಾ ವಿರುದ್ಧ ತ್ರಿವಿಕ್ರಮ ಸಾಧಿಸಿದ್ದರು.
ಕರ್ನಾಟಕದ ಪರ ರಾಹುಲ್ ದ್ರಾವಿಡ್ 270 ರನ್‌ಗಳಿಸಿ ಅಬ್ಬರಿಸಿದ್ದರು. ಅವರ ಸಾಧನೆಯನ್ನು ಹಿಂದಿಕ್ಕಿದ ಕರುಣ್ ಕರ್ನಾಟಕದ ಪರ ಗರಿಷ್ಠ ರನ್ ಸಾಧನೆಯನ್ನು ಮಾಡಿದ್ದಾರೆ.
ಕವರ್ ಡ್ರೈವ್, ಆನ್ ಡ್ರೈವ್, ಪುಲ್, ಹೊಡೆತಗಳ ಮೂಲಕ ರನ್ ಗಳನ್ನು ಕಲೆ ಹಾಕಿದ ಕರುಣ್ ತ್ರಿಪಲ್ ಸಾಧನೆಯ ಮಾಡಿದ ಗರಿಯನ್ನು  ತಮ್ಮದಾಗಿಸಿಕೊಂಡರು.
ವಿಶ್ವದಲ್ಲಿ ಡಾನ್ ಬ್ರಾಡ್ಮನ್, ಕ್ರಿಸ್ ಗೇಲ್, ಬ್ರೇನ್ ಲಾರಾ, ವೀರೇಂದ್ರ ಸೆಹ್ವಾಗ್ ತಲಾ ಎರಡು ಬಾರಿ ಈ ಸಾಧನೆಯನ್ನು ಮಾಡಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Comments are closed.

Social Media Auto Publish Powered By : XYZScripts.com