ಮೇಟಿ ಪ್ರಕರಣ ಸಿಐಡಿ ವರದಿ ಬಂದ ನಂತರ ತೀರ್ಮಾನ- ಸಿಎಂ

ಎಚ್.ವೈ ಮೇಟಿ ರಾಸಲೀಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಸಿಐಡಿ ವರದಿ ಬಂದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
meti-sex
ನಂಜನಗೂಡಿನ ಹುಲ್ಲಹಳ್ಳಿ ಹೆಲಿಪ್ಯಾಡ್‌ನಲ್ಲಿ ಮಾತನಾಡಿ,  ಮೇಟಿಯವರು ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ‌. ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ನಾವು ತನಿಖೆ ನಡೆಸಲು ಸಿಐಡಿಗೆ ಸೂಚನೆ ನೀಡಿದ್ದೇವೆ. ಸಂತ್ರಸ್ತ ಮಹಿಳೆ ಇದರ ಬಗ್ಗೆ ಯಾವುದೇ ದೂರು ನೀಡಿಲ್ಲ ಎಂದು ತಿಳಿಸಿದರು.
ನೈತಿಕತೆ ಇಲ್ಲದ ಬಿಜೆಪಿ ಪಕ್ಷದ ಮಾತು ಕೇಳುವ ಅಗತ್ಯವಿಲ್ಲ. ಬಿ.ಎಸ್.ಯಡಿಯೂರಪ್ಪ ಆಧಾರವಿಲ್ಲದೆ ಆರೋಪ ಮಾಡುತ್ತಿದ್ದಾರೆ. ಸಾಕ್ಷ್ಯ ಇದ್ದರೆ ಸಿಡಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದರು.

4 thoughts on “ಮೇಟಿ ಪ್ರಕರಣ ಸಿಐಡಿ ವರದಿ ಬಂದ ನಂತರ ತೀರ್ಮಾನ- ಸಿಎಂ

Comments are closed.

Social Media Auto Publish Powered By : XYZScripts.com