ಸೆಮೀಸ್ ನಲ್ಲಿ ಸೋತ ಸಿಂಧುಗೆ ಫೈನಲ್ ಕನಸು ನುಚ್ಚು ನೂರು

ದುಬೈ ವಿಶ್ವ ಬ್ಯಾಡ್ಮಿಟನ್ ಸೀರಿಸ್ ಫೈನಲ್ ನ ಸೆಮಿಫೈನಲ್ ಹೋರಾಟದಲ್ಲಿ ಪಿ.ವಿ. ಸಿಂಧು ಸೋತು ಆಘಾತ ಅನುಭಿಸಿದರು. ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು ಅವರು ೧೫-೨೧, ೨೧-೧೮, ೨೧-೧೫ ಅಂಕಗಳಿಂದ ಕೊರಿಯಾದ ಸುಂಗ್ ಜಿ ಹಯಾನ್ ವಿರುದ್ಧದ ಪಂದ್ಯದಲ್ಲಿ ಪರಾಜಯ ಹೊಂದಿದರು.
ಮೊದಲ ಸೆಟ್‌ನಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿದ ಉಭಯ ಆಟಗಾರ್ತಿಯರು ಅಭಿಮಾನಿಗಳನ್ನು ರಂಜಿಸಿದರು.
sindhu-lost-semis-no-final
ಅಂಕಗಳಿಕೆಯಲ್ಲಿ ಇಬ್ಬರೂ ಆಟಗಾರರು ಕಷ್ಟ ಪಟ್ಟರು. ಮೊದಲ ಎದುರಾಳಿ ಆಟಗಾರ್ತಿ ಸಿಂಧು ಅವರ ರಣ ತಂತ್ರವನ್ನು ಭೇದಿಸಿ ಅಂಕಗಳನ್ನು ಕಲೆ ಹಾಕಿದರು. ಆದರೆ ನಂತರ ಪುಟಿದೇದ್ದ ಸಿಂಧು ಆಕರ್ಷಕ ಆಟವನ್ನು ಆಡಿದರು. ಗ್ಯಾಪ್ ಶಾಟ್‌ಗಳು ಹಾಗೂ ಸ್ಕ್ಯಾಷ್‌ಗಳ ಮೂಲಕ ಅಂಕದ ಬೇಟೆಯನ್ನು ನಡೆಸಿದ ಸಿಂಧು ಅಂಕಗಳಿಕೆಯಲ್ಲಿ ಚೇತರಿಕೆ ಕಂಡರು. ಆದರೆ ಕೊನೆಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿದ ಎದುರಾಳಿ ಆಟಗಾರ್ತಿ ೨೧-೧೫ ಅಂಕಗಳಿಂದ ಸೆಟ್ ಗೆದ್ದು ಬೀಗಿದರು.
ಎರಡನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಮೊದಲಿನಿಂದಲೂ ಅಂಕಗಳಿಯಲ್ಲಿ ಮುನ್ನಡೆ ಸಾಧಿಸಿದ್ದ ಸಿಂಧು ಸುಲಭವಾಗಿ ಅಂಕಗಳನ್ನು ನೀಡಲಿಲ್ಲ. ಅಲ್ಲದೆ ಅಂಕಗಳಿಕೆಯಲ್ಲಿ ಕೊಂಚ ಮುನ್ನಡೆ ಸಾಧಿಸಿದ್ದ ಸಿಂಧು ಸೊಗಸಾದ ಆಟವನ್ನು ಆಡಿದರು. ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಸಿಂಧು ಕೊರಿಯಾ ಆಟಗಾರ್ತಿಯ ರಣತಂತ್ರವನ್ನು ಛಿಧ್ರಗೊಳಿಸಿ ಅಂಕದ ಬೇಟೆ ನಡೆಸಿದರು. ಕೊನೆಯಲ್ಲಿ ಚೇತೋಹಾರಿ ಆಟ ಆಡಿದ ಸಿಂಧು  ಅಂಕಗಳಿಸುವಲ್ಲಿ ಸಫಲವರಾದರು. ಫಲವಾಗಿ ಸಿಂಧು ೨೧-೧೮ ಅಂಕಗಳಿಂದ ಸೆಟ್ ಗೆದ್ದು ಬೀಗಿದರು.
ಮೂರನೇ ಸೆಟ್‌ನಲ್ಲಿ ಮೊದಲಿನಿಂದಲೂ ಕೊರಿಯಾ ಆಟಗಾರ್ತಿ ಮುಂಚೂಣಿ ಸಾಧಿಸಿದ್ದರು, ಫಲವಾಗಿ ಫೈನಲ್‌ಗೆ ಅರ್ಹತೆಯನ್ನು ಪಡೆಯುವ ಸಿಂಧು ಆಸೆ ಫಲಿಸಲಿಲ್ಲ.

Comments are closed.

Social Media Auto Publish Powered By : XYZScripts.com