ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಮಂಜುಳಾ ರಾಜೀನಾಮೆ..!

ಮೇಟಿ ರಾಸಲೀಲೆ ಪ್ರಕರಣ ಜಗಜ್ಜಾಹಿರಾಗಿದ್ದು, ಇದರಿಂದ ಮನನೊಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಮಂಜುಳಾ ರವರು ರಾಜಿನಾಮೆಯನ್ನು ನೀಡಿದ್ದಾರೆ. ಇಂದು  ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯುತ್ತಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗಮಿಸಿದ್ದು ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರು ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಮಂಜುಳಾ ಅವರ ರಾಜೀನಾಮೆ ಕಾಂಗ್ರೆಸ್ ಪಾಳಯದಲ್ಲಿ ಮತ್ತಷ್ಟು ಮುಜುಗರ ಉಂಟುಮಾಡಿದೆ.

manjula-kpcc-resign-letter

ಈ ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ  ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರ ಸ್ಥಾನ ಮತ್ತು ಪ್ರಾಥಮಿಕ ಸ್ಥಾನಕ್ಕೆ ರಾಜಿನಾಮೆಯನ್ನು ನೀಡುತ್ತಿದ್ದು, ಪ್ರಸ್ತುತ ಸರ್ಕಾರದ ಪ್ರಭಾವಿ ಅಬಕಾರಿ ಸಚಿವರಾದ  ಎಚ್ ವೈ ಮೇಟಿರವರ ರಾಸಲೀಲೆಗೆ ಹಾಗೂ ಪಕ್ಷದಲ್ಲಿ ಮಹಿಳೆಯರಿಗೆ ತೋರುತ್ತಿರುವ ಅಗೌರವದಿಂದ ಮನನೊಂದು ರಾಜೀನಾಮೆಯನ್ನು ನೀಡಿರುತ್ತೇನೆ ಎಂದು ಪತ್ರದಲ್ಲಿ ಮಂಜುಳ ಉಮೇಶ್ ಉಲ್ಲೇಖಿಸಿದ್ದಾರೆ.

Comments are closed.

Social Media Auto Publish Powered By : XYZScripts.com