ಮದುವೆ ಫಿಕ್ಸ್ ಆಗಿ ಮುರಿದು ಬಿದ್ದಿದ್ದೇಕೆ?.

ನಿಶ್ಚಿತಾರ್ಥ ಮುಗಿಸಿ, ಡಿಸೆಂಬರ್ 22ರಂದು ಮದುವೆ ದಿನಾಂಕವನ್ನು ನಿಗದಿಪಡಿಸಿಯಾಗಿತ್ತು. ಆದರೆ ವಧುವಿನ ಕಡೆಯವರು ಮದುವೆಗೆ ನಿರಾಕರಣೆ ಮಾಡಿದ್ದಾರೆ. ಇದರಿಂದ ಮನನೊಂದ ವರನು ವಧುವಿನ ಮನೆ ಮುಂದೆ ತನ್ನ ನಿಶ್ಚಿತಾರ್ಥದ ಪೋಟೊಗಳನ್ನಿಟ್ಟು ಪ್ರತಿಭಟನೆ ಮಾಡುತ್ತಿರುವ ಘಟನೆ ಧಾರವಾಡದ ಚನ್ನಬಸವೇಶ್ವರ ನಗರದಲ್ಲಿ ನಡೆದಿದೆ.

ಸಚಿನ್ ಯುವತಿ ಮನೆ ಮುಂದೆ ಪ್ರತಿಭಟನೆ ಮಾಡುತ್ತಿರುವವರು. ಸಚಿನ್ ಹಾಗೂ ಯುವತಿ ಕಳೆದ 7 ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಸುದ್ದಿ ಎರಡೂ ಮನೆಯವರೆಗೂ ತಿಳಿದಿದೆ. ಆ ನಂತರ ಹಿರಿಯರು ಮತ್ತು ಪೋಷಕರು ಒಪ್ಪಿಗೆ ಪಡೆದು ಸಚಿನ್ ತಮ್ಮ ಮನೆಯಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥದಲ್ಲಿ  ತೆಗೆದ ಫೊಟೊಗಳನ್ನು ಹಿಡಿದು ಯುವತಿ ಮನೆ ಮುಂದೆ ಸಚಿನ್ ಪ್ರತಿಭಟನೆ ಮಾಡುತ್ತಿದ್ದಾನೆ.

ನಿಶ್ಚಿತಾರ್ಥ ಮುಗಿಸಿದ ಇವರ ಪೋಷಕರು ಮದುವೆಯನ್ನು ಡಿಸೆಂಬರ್ 22 ರಂದು ನಿಗದಿಪಡಿಸಿ, ಧಾರವಾಡದ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಮದುವೆ ಹಾಲ್ ಬುಕ್ ಮಾಡಿದ್ದರು. ಅಲ್ಲದೇ ಮದುವೆ ಕಾರ್ಡ್ ಮಾಡಿಸಿ ನೆಂಟರಿಸ್ಟರಿಗೆ ಹಂಚಿದ್ದರು. ಇಷ್ಟೆಲ್ಲಾ ಆದ ನಂತರ ಯುವತಿ ಕಡೆಯವರು ಏಕಾಏಕಿ ಮದುವೆಗೆ ನಿರಾಕರಿಸಿದ್ದರಿಂದ ಯುವಕ ಮನನೊಂದು ಧರಣಿಗೆ ಕುಳಿತಿದ್ದಾರೆ.

ಇದನ್ನು ಕೆಲ ಕಾಲ ಯುವತಿ ಪೋಷಕರು ಸಚಿನ್ ರನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಯುವತಿಯು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಸಚಿನ್ ಗುಣ ಸರಿಯಿಲ್ಲ. 7 ವರ್ಷದಿಂದ ನನಗೆ ತೊಂದರೆ ಕೊಡುತ್ತಿದ್ದನು. ಆದರೆ ಆತ ಮುಂದೆ ಸರಿ ಆಗಬಹುದು ಎಂದು ಮದುವೆಗೆ ಒಪ್ಪಿಕೊಂಡಿದ್ದೆ. ಆದರೆ ಆತ ದಿನವೂ ಕಂಠಪೂರ್ತಿ ಕುಡಿದು ಕರೆ ಮಾಡುತ್ತಾನೆ. ನಾನು ಕರೆಗೆ ಸಿಗಲಿಲ್ಲವಾದರೆ ಸ್ನೇಹಿತರಿಗೆ ಕರೆ ಮಾಡಿ ತೊಂದರೆ ಕೊಡುತ್ತಾನೆ. ಇದರಿಂದ ನಾನೇ ಮದುವೆಗೆ ಬೇಡ ಎಂದು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.

ನಿಶ್ಚಿತಾರ್ಥ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿ, ಇದೆಲ್ಲಾ ನಕಲಿ. ಹೂ ಹಾರ ಹಾಗೂ ತಾಳಿಯನ್ನು ಬಲವಂತವಾಗಿ ಹಾಕಿಸಿ ಫೋಟೋ ತೆಗೆಸಿಕೊಂಡಿದ್ದಾನೆ ಅಂತಾ ಆಕೆ ಸಚಿನ್ ವಿರುದ್ಧ ಆರೋಪಿಸಿದ್ದಾಳೆ.

Comments are closed.