ರಾಸಲೀಲೆ ಪ್ರಕರಣ- ಸಿಎಂಗೆ ಮೊದಲೇ ಗೊತ್ತಿತ್ತು!

ಒಂದು ತಿಂಗಳ ಹಿಂದೆಯೆ ಎಚ್.ವೈ.ಮೇಟಿ ರಾಸಲೀಲೆ ಪ್ರಕರಣ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ್ ಸೇರಿದಂತೆ ಕೆಲವು ಮಂತ್ರಿಗಳಿಗೆ ಗೊತ್ತಿತ್ತು. ಆದರೆ ಮುಖ್ಯಮಂತ್ರಿಗಳು ಮೇಟಿಗೆ ಸೆಟಲ್ ಮೆಂಟ್ ಮಾಡಿ ಮುಚ್ಚಿ ಹಾಕುವಂತೆ ಹೇಳಿದ್ದರು ಎಂದು ವಿಪಕ್ಷ ನಾಯಕ್ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.jagadhish-shettar

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಮೇಟಿಗೆ ರಾಸಲೀಲೆ ಪ್ರಕರಣ ಮುಚ್ಚಿ ಹಾಕುವಂತೆ ಸೂಚನೆ ನೀಡಿದ್ದರು. ಇದೊಂದು ದೊಡ್ಡ ಅಪರಾಧ ಮುಖ್ಯಮಂತ್ರಿಗೆ ನೈತಿಕತೆ ಇದ್ರೆ ಕೂಡಲೇ ರಾಜೀನಾಮೆ ನೀಡಬೇಕು. ಇನ್ನು ಮೇಟಿಗೆ ರಾಸಲೀಲೆ ಬಗ್ಗೆ ಎಲ್ಲಾ ವಿಚಾರ ತಿಳಿದಿದ್ದರೂ ಮುಖ್ಯಮಂತ್ರಿಗಳು ಸೆಟಲ್ ಮೆಂಟ್ ಮಾಡಲಿ ಎಂದು ಸುಮ್ಮನಿದ್ದರು ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿಗಳು ಸೆಟಲ್ ಮೆಂಟ್ ಮಾಡಿ ಎಂದು ಮೇಟಿಯವರಿಗೆ ಹೇಳಿದ ಪರಿಣಾಮ ಮೇಟಿಯವರ ಮಾನ, ಮರ್ಯಾದೆ, ಅಧಿಕಾರ ಎಲ್ಲ ಹೋಯ್ತು ಎಂದು ಶೆಟ್ಟರ್ ಕುಟುಕಿದರು. ರಾಸಲೀಲೆ ಪ್ರಕರಣ ಮೊದಲೇ ಗೊತ್ತಿದ್ದು ಸುಮ್ಮನಾದ ಸಿದ್ದರಾಮಯ್ಯ ಹಾಗೂ ಅಬಕಾರಿ ಸಚಿವ ಮೇಟಿ ಇಡೀ ವ್ಯವಸ್ಥೆಯನ್ನು ಮಣ್ಣುಪಾಲು ಮಾಡಿದ್ದಾರೆ ಎಂದು ತಿಳಿಸಿದರು.

ರಾಸಲೀಲೆ ಪ್ರಕರಣವನ್ನು ಸಿ.ಐ.ಡಿ ತನಿಖೆಗೆ ವಹಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಶೆಟ್ಟರ್ ಸಿಐಡಿ ಮೇಟಿಗೆ ಕ್ಲೀನ್ ಚೀಟ್ ನೀಡಿದ್ರೂ ಅಚ್ಚರಿಯಿಲ್ಲ. ಯಾಕಂದ್ರೆ ಸಿಐಡಿ ಕೇವಲ ಒಂದೂವರೆ ತಿಂಗಳಲ್ಲಿ ಗಣಪತಿನ ಕೇಸ್ ನಲ್ಲಿ ಜಾರ್ಜ್ ಗೆ ಕ್ಲೀನ್ ಚೀಟ್ ನೀಡಿದ್ದು ನಮ್ಮ ಕಣ್ಣ ಮುಂದಿದೆ. ಸಿಐಡಿ ತನಿಖೆ ಮೂಲಕ ರಾಜಶೇಖರ್, ಸುಭಾಷ್ ಹಾಗೂ ಮಹಿಳೆ ಮೇಲೆ ಭಯದ ವಾತವರಣ ಸೃಷ್ಟಿ ಮಾಡೋ ಯತ್ನ ನಡೆದಿದೆ ಎಂದು ಶೆಟ್ಟರ್ ಆರೋಪಿಸಿದರು.

ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕೆಟ್ಟು ಹೋಗಿದೆ, ಮಂತ್ರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರಾಜ್ಯ ಸರ್ಕಾರದ ವಿರುದ್ದ ವ್ಯಂಗ್ಯವಾಡಿದರು.

Comments are closed.