ಜೈಲಿನಿಂದ ನೇರ ಸಿಬಿಐ ವಶಕ್ಕೆ ಜಯಚಂದ್ರ

jayachandra-1
ಸರ್ಕಾರದಿಂದ ಅಮಾನತ್ತಾಗಿರುವ ರಾಜ್ಯ ಹೆದ್ದಾರಿ ಯೋಜನೆಗಳ ಮುಖ್ಯಾಧಿಕಾರಿ ಜಯಚಂದ್ರ ಅವರನ್ನು ಎರಡು ಸಾವಿರ ರೂ.ಗಳ ನೋಟುಗಳನ್ನು ಹೊಂದಿದ್ದ ಆರೋಪದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಜಯಚಂದ್ರ ನಂತರ ನ್ಯಾಯಾಂಗ ಬಂಧನಲ್ಲಿದ್ದರು.

ನಿನ್ನೆ ಹೈಕೋರ್ಟ್ ಜಾಮೀನು ಪಡೆದು  ಜಾಮೀನು ಷರತ್ತುಗಳನ್ನು ಪೂರೈಸದೆ ಜೈಲಿನಲ್ಲೇ ಜಯಚಂದ್ರ ಉಳಿದುಕೊಂಡಿದ್ದರು. ಈ ಹಿನ್ನಲೆಯಲ್ಲಿ ಇಂದು ಪರಪ್ಪನ ಅಗ್ರಹಾರದಿಂದ ಸಿಬಿಐ ಕೋರ್ಟ್ ಗೆ ಹಾಜರುಪಡಿಸಿ, ನಂತರ ಸಿಬಿಐ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.

One thought on “ಜೈಲಿನಿಂದ ನೇರ ಸಿಬಿಐ ವಶಕ್ಕೆ ಜಯಚಂದ್ರ

Comments are closed.

Social Media Auto Publish Powered By : XYZScripts.com