360 ಕೋಟಿ ರುಪಾಯಿಯ ‘ಎಲೆಕ್ಟ್ರಿಕ್’ ಹಗರಣ ಏನು ಗೊತ್ತಾ ?

ಕರ್ನಾಟಕ ರಾಜ್ಯ ಸರಕಾರ 150 ಎಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿಸಲು ಮುಂದಾಗಿದೆ. ಈಗಾಗಲೇ ತನ್ನ ಒಪ್ಪಿಗೆಯನ್ನೂ ಕೊಟ್ಟಿದೆ. ಪ್ರಾಥಮಿಕ ಹಂತದಲ್ಲಿ 150 ಬಸ್ಸುಗಳನ್ನು ತಂದು, ನಂತರದ ದಿನಗಳಲ್ಲಿ ಹಂತ ಹಂತವಾಗಿ ಅವುಗಳ ಸಂಖ್ಯೆ ಹೆಚ್ಚಿಸುವುದು, ಡೀಸೆಲ್ ಮತ್ತು CNG ಬಸ್ಸುಗಳ ಸಂಖ್ಯೆ ತಗ್ಗಿಸುವುದು ಈ ಯೋಜನೆಯ ಉದ್ದೇಶ.

ದೆಹಲಿ ಸರಕಾರ ಕೂಡ ಎಲೆಕ್ಟ್ರಿಕ್ ಬಸ್ಸುಗಳನ್ನು ಕೊಳ್ಳುತ್ತಿದೆ. ಇತ್ತೀಚೆಗೆ ಸ್ಮಾಗ್ ನಂಥ ಪರಿಸರ ಸಮಸ್ಯೆಗಳಿಂದ ಕಂಗೆಟ್ಟಿರುವ ದೆಹಲಿಗೆ ಎಲೆಕ್ಟ್ರಿಕ್ ವಾಹನಗಳು ಅನಿವಾರ್ಯ ಎನ್ನೋಣ. ಪ್ರತಿ ಬಸ್ಸನ್ನು ಅದು 1 ಕೋಟಿ ರುಪಾಯಿ ಕೊಟ್ಟು ಕೊಳ್ಳುತ್ತಿದೆ.

electric_bus_bmtc_karnataka-1
ಮುಂಬಯಿ ಕೂಡ ವಾಯುಮಾಲಿನ್ಯದ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಅದಕ್ಕೂ ಎಲೆಕ್ಟ್ರಿಕ್ ವಾಹನಗಳೇ ಬೇಕು. ಆದರೆ ಮಹಾರಾಷ್ಟ್ರ ಸರಕಾರ ಸ್ವಲ್ಪ ಶಾಣ್ಯಾತನ ಮೆರೆದು, ತನ್ನ ಹಳೆಯ ಡೀಸೆಲ್/CNG ಬಸ್ಸುಗಳನ್ನೇ ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುತ್ತಿದೆ. ಮುಂದೆ ಎಲೆಕ್ಟ್ರಿಕ್ ಬಸ್ಸುಗಳೇ ರಸ್ತೆಯನ್ನು ಆಳತೊಡಗುವಾಗ, ಡೀಸೆಲ್ ಬಸ್ಸುಗಳನ್ನು ಮಾಡುವುದೇನು? ಅವನ್ನು ಸೆಕೆಂಡ್ ಹ್ಯಾಂಡ್ ರೇಟಿಗೆ ಯಾರು ಕೊಳ್ಳುತ್ತಾರೆ? ಹಾಗಾಗಿ ಇರುವ ಬಸ್ಸುಗಳಿಗೇ ಬ್ಯಾಟರಿ ಫಿಕ್ಸ್ ಮಾಡಿ ಅವನ್ನು ಎಲೆಕ್ಟ್ರಿಕ್ ಬಸ್ಸುಗಳಾಗಿ ಅಪ್’ಗ್ರೇಡ್ ಮಾಡುವುದು ಬುದ್ಧಿವಂತಿಕೆ. ಇಂಥ ಅಪ್’ಗ್ರೆಡೇಶನ್ನಿಗೆ ಅದಕ್ಕೆ ಖರ್ಚಾಗುವುದು ಪ್ರತಿ ಬಸ್ಸಿಗೆ 30 ಲಕ್ಷ. ಅಂದರೆ, ಮಹಾರಾಷ್ಟ್ರ ಸರಕಾರ ಪ್ರತಿ ಬಸ್ಸಿಗೆ 70 ಲಕ್ಷ ಉಳಿಸುತ್ತಿದೆ.

ಈಗ ಕರ್ನಾಟಕದ ವಿಷಯಕ್ಕೆ ಬರೋಣ. ಇಲ್ಲಿ, ನಮ್ಮವರು ಈ ಬಸ್ಸುಗಳನ್ನು ಕೊಳ್ಳುತ್ತಿರುವುದು ಎಷ್ಟಕ್ಕೆ ಗೊತ್ತೆ? ಪ್ರತಿ ಬಸ್ಸಿಗೆ 2.7 ಕೋಟಿ ರುಪಾಯಿಗೆ! ಅಂದರೆ ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ ಅತ್ಯುತ್ತಮ ಬಸ್ಸಿಗಿಂತಲೂ ಈ ಹೈಟೆಕ್ ಶಕಟಾಸುರನಿಗೆ 1.7 ಕೋಟಿ ರುಪಾಯಿಯಷ್ಟು ಹೆಚ್ಚು ಖರ್ಚು! 150 ಬಸ್ಸುಗಳ ಖರೀದಿಯ ಮೂಲಕ ಇವರು ಮಾಡುತ್ತಿರುವ ಭ್ರಷ್ಟಾಚಾರದ ಪ್ರಮಾಣ 255 ಕೋಟಿ ರುಪಾಯಿ!! ಇನ್ನು ಮಹಾರಾಷ್ಟ್ರದ ಜೊತೆ ಹೋಲಿಸಿ ನೋಡಿದರೆ ಇವರು 150 ಎಲೆಕ್ಟ್ರಿಕ್ ಬಸ್ಸುಗಳಿಗಾಗಿ ಮಾಡುತ್ತಿರುವ ಹೆಚ್ಚುವರಿ ಖರ್ಚು 360 ಕೋಟಿ ರುಪಾಯಿ! ಮಹಾರಾಷ್ಟ್ರದವರು 150 ಬಸ್ಸುಗಳನ್ನು ಎಲೆಕ್ಟ್ರಿಕ್ ಆಗಿ ಅಪ್’ಗ್ರೇಡ್ ಮಾಡಲು ಜಸ್ಟ್ 45 ಕೋಟಿ ರುಪಾಯಿ ವ್ಯಯಿಸುತ್ತಿದ್ದರೆ ಕರ್ನಾಟಕ ಬರೋಬ್ಬರಿ 405 ಕೋಟಿ ರುಪಾಯಿ ಸುರಿಯುತ್ತಿದೆ! ಇದರಲ್ಲಿ ಯಾರಿಗೆಲ್ಲ ಎಷ್ಟೆಷ್ಟು ಪಾಲಿದೆಯೋ ಹುಂಡಿಯ ಸಿದ್ದರಾಮನೇ ಬಲ್ಲ!

ಸ್ಟೀಲ್ ಫ್ಲೈ ಓವರ್ ಬೇಡ ಎಂದು ಬೀದಿಗಿಳಿದ ಬಿಜೆಪಿ ಈಗ ಏನು ಮಾಡುತ್ತಿದೆ?? ಕಾಂಗ್ರೆಸ್ಸಿಗರು ರಾಸಲೀಲೆಯಲ್ಲಿ ತೊಡಗಿದ್ದರೆ ಬಿಜೆಪಿಗರು ನಿದ್ರಾಲೋಕದಲ್ಲಿ ಮುಳುಗಿದ್ದಾರೆ. ಒಟ್ಟಾರೆ ಇಬ್ಬರೂ ತಂತಮ್ಮ ಹಾಸಿಗೆ ಬಿಟ್ಟು ಏಳುವ ಲಕ್ಷಣಗಳು ಮಾತ್ರ ಕಾಣುತ್ತಿಲ್ಲ!!

Comments are closed.

Social Media Auto Publish Powered By : XYZScripts.com