ಮೇಟಿ ವಿಡಿಯೋದಿಂದ ಮಹಿಳಾ ಸಿಬ್ಬಂದಿ ರಾಜೀನಾಮೆ ನೀಡಲು ಮುಂದಾಗಿದ್ದೇಕೆ?.

ಸುದ್ದಿವಾಹಿನಿಗಳಿಗೆ ಸುದ್ದಿ ಸಿಕ್ಕರೆ ಸಾಕು ದಿನವಿಡಿ ಅದೇ ಸುದ್ದಿಯನ್ನು ಪ್ರಸಾರ ಮಾಡುವುದನ್ನು ನಾವು ನೋಡಿದ್ದೇವೆ. ಇತ್ತೀಚಿಗೆ ಅಬಕಾರಿ ಸಚಿವ ಮೇಟಿರವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಖಾಸಗಿ ವಾಹಿನಿಗಳು ದಿನವಿಡೀ ಅದೇ ವಿಡೊಯೋವನ್ನು ಪ್ರಸಾರ ಮಾಡಿದ್ದಾರೆ. ಆದರೆ ಈ ವಿಡಿಯೊ ಪ್ರಸಾರದಿಂದ ಖಾಸಗಿ ಸಿದ್ದಿವಾಹಿನಿಯಲ್ಲಿ ಕೆಲಸ ನಿರ್ವಹಿಸುವ ಮಹಿಳೆಯೊಬ್ಬರು ರಾಜೀನಾಮೆ ನೀಡಲು ಮುಂದಾದ ಘಟನೆ ಬುಧವಾರ ಬೆಂಗಳೂರಿನಲ್ಲಿ ನಡೆದಿದೆ.

ಬುಧವಾರ ಮೇಟಿಯವರ ರಾಸಲೀಲೆ ಪ್ರಕರಣದ ವಿಡಿಯೊವನ್ನು ಆರ್ ಟಿಐ ಕಾರ್ಯಕರ್ತ ರಾಜಶೇಖರ್ ಬಿಡುಗಡೆ ಮಾಡಿದರು. ಆ ನಂತರ ಕೆಲವು ಸುದ್ದಿವಾಹಿಗಳು ಕೆಲ ದೃಶ್ಯಗಳು ಕಾಣದಂತೆ ಮಾಡಿ ಪ್ರಸಾರ ಮಾಡಿದರು.  ಇನ್ನೂ ಕೆಲವು ಸುದ್ದಿವಾಹಿನಿಗಳು ವಿಡಿಯೊ ಹೇಗಿತ್ತೋ ಹಾಗೆ ಬಿತ್ತರಣೆ ಮಾಡಿದವು. ಇದಕ್ಕೆ ತಕ್ಕಂತೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಅಂತಹ ಚಾನಲ್ ಗಳ ವಿರುದ್ದ ಎಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡರು.

ಈ ಘಟನೆಗೆ ಸಂಬಂಧಿಸಿದಂತೆ ಖಾಸಗಿ ವಾಹಿನಿಯೊಂದರಲ್ಲಿ ನಡೆದ ಘಟನೆ ನಿಜಕ್ಕೂ ಕುತೂಹಲ ಮೂಡಿಸಿದೆ. ಖಾಸಗಿ ಸುದ್ಧಿ ವಾಹಿನಿಯ ಮಹಿಳಾ ಸಿಬ್ಬಂದಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಅಭಿಪ್ರಾಯದಿಂದ ಎಚ್ಚೆತ್ತು, ವಾಹಿನಿ ಮುಖ್ಯಸ್ಥರಿಗೆ ದೃಶ್ಯ ಪ್ರಸಾರ ಮಾಡುವ ವೇಳೆ ` ಎಡಿಟ್’ ಮಾಡುವುದರ ಜತೆಗೆ `ಬ್ಲರ್ ‘ ಮಾಡುವಂತೆ ವಿನಂತಿಸಿಕೊಂಡರು. ಆದರೆ ಆ ವಾಹಿನಿ ಸಂಪಾದಕ ಮಾತ್ರ ಈ ಸಲಹೆಗೆ ಒಪ್ಪದೆ ಇಂಥ ಸುದ್ಧಿಗಳಿಂದಲೇ ನಮ್ಮ ವಾಹಿನಿ ಟಿ.ಆರ್.ಪಿ ಹೆಚ್ಚುವುದು ಎಂದು ಮಹಿಳಾ ಸಿಬ್ಬಂದಿ ಸಲಹೆಯನ್ನು ತಿರಸ್ಕರಿಸಿದರು. ಇದರಿಂದ ಮನನೊಂದ ಆ ಮಹಿಳಾ ಸಿಬ್ಬಂದಿ ಸ್ಥಳದಲ್ಲೇ ಹುದ್ದೆಗೆ ರಾಜೀನಾಮೆ ನೀಡಲು ಮುಂದಾದರು. ಇದನ್ನು ಅರಿತ ಸುದ್ದಿವಾಹಿನಿ ಮುಖ್ಯಸ್ಥ ಸುದ್ದಿವಾಹಿನಿಯ ಹೆಸರಿಗೆ ಮತ್ತಷ್ಟು ಧಕ್ಕೆಯಾಗುತ್ತದೆ ಎಂದು ತಿಳಿದು ಆತುರದ ನಿರ್ಧಾರ ಬೇಡ ಎಂದು ಹೇಳಿ ಮಹಿಳಾ ಅಧಿಕಾರಿಗಳನ್ನು ಸಮಾಧಾನಪಡಿಸಿದರು.

Comments are closed.