ಮೇಟಿ ಪ್ರಕರಣವನ್ನು ಆತ್ಯಾಚಾರ ಎಂದ ಮಹಿಳಾ ಆಯೋಗದ ಅಧ್ಯಕ್ಷೆ!

ಮೇಟಿ ಆಗಲಿ ಶಾಸಕ ಅಥವಾ ಮಂತ್ರಿಗಳಾಗಲೀ ಯಾರೇ ಆಗಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದರೆ ಅದು ಅತ್ಯಾಚಾರವೇ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಲಕ್ಷ್ಮೀಬಾಯಿ ತಿಳಿಸಿದ್ದಾರೆ.meti-1

 ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅತ್ಯಚಾರ ಅಷ್ಟೇ ನಮ್ಮ ಕಣ್ಣಿಗೆ ಗೋಚರಿಸುತ್ತಿದೆ. ಸಂತ್ರಸ್ಥೆ ಮಹಿಳೆಯು ಇದುವರೆಗೆ ಯಾವುದೇ ಸಂಪರ್ಕಕ್ಕೆ ಸಿಕ್ಕಿಲ್ಲ.  ಆಯೋಗಕ್ಕೆ ಇದುವರೆಗೆ ಯಾವುದೇ ದೂರು ನೀಡಿಲ್ಲ. ಸಂತ್ರಸ್ತೆ ಮಹಿಳೆ ದೂರು ನೀಡಿದರೆ ಆಯೋಗದಿಂದ ರಕ್ಷಣೆ ನೀಡುತ್ತೇವೆ. ಮಹಿಳೆಗೆ ತೊಂದರೆ ಆಗಿದೆ ಎಂದು ದೂರು ನೀಡುವುದಕ್ಕೆ ಯಾರು ಮುಂದೆ ಬಂದಿಲ್ಲ. ಅವರು ಆಯೋಗ ಇದೆ ಎಂಬುದನ್ನು ಮರೆತಿದ್ದಾರೆ ಎಂದು ತಿಳಿಸಿದ್ದಾರೆ.
ಸಂತ್ರಸ್ಥೆಯ ಪರವಾಗಿ ಯಾರೇ ದೂರು ಕೊಟ್ಟರು ಆಯೋಗ ದೂರು ದಾಖಲಿಸಿ ಕ್ರಮಕೈಗಳ್ಳುತ್ತದೆ. ಸಿಐಡಿ ವರದಿ ಬಂದ ನಂತರ ಆಯೋಗ ಕ್ರಮ ಕೈಗೊಳಲಿದೆ ಎಂದು ತಿಳಿಸಿದ್ದಾರೆ.

Comments are closed.