ಕುರುಬ ಸಮುದಾಯಕ್ಕೆ ಸಚಿವ ಸ್ಥಾನ ನೀಡಿ!

ಲೈಂಗಿಕ ಹಗರಣದಲ್ಲಿ ಸಿಲುಕಿ ಹೆಚ್.ವೈ.ಮೇಟಿ ಸಚಿವ ಸ್ಥಾನ ಕಳೆದುಕೊಳ್ಳುತ್ತಿದ್ದಂತೆ.ಕುರುಬ ಸಮುದಾಯದ ಶಾಸಕರಿಂದ ಸಚಿವ ಸ್ಥಾನಕ್ಕಾಗಿ ಲಾಬಿ ಆರಂಭವಾಗಿದೆ.cm-1

ನಿನ್ನೆಯಿಂದಲೆ ಸಿಎಂ ಮೇಲೆ ಒತ್ತಡ ಹೇರುತ್ತಿರುವ ಕುರುಬ ಸಮುದಾಯದ ಶಾಸಕರುಗಳು. ಹೊಸದುರ್ಗದ ಶಾಸಕ ಗೋವಿಂದಪ್ಪ, ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್, ಎಂಎಲ್ ಸಿ ಮತ್ತು ಮಾಜಿ ಸಚಿವ ಹೆಚ್.ಎಂ.ರೇವಣ್ಣರಿಂದ ಸಚಿವ ಸ್ಥಾನಕ್ಕಾಗಿ ಬಾರಿ ಲಾಬಿ ನಡೆಯುತ್ತಿದೆ.

ಕೇವಲ ಕರುಬ ಸಮುದಾಯದವರು ಮಾತ್ರವಲ್ಲದೆ ಇತರೆ ಹಿಂದುಳಿದ ಹಾಗೂ ದಲಿತ ಶಾಸಕರುಗಳು ಸಹ ಇರುವ ಒಂದು ಸ್ಥಾನದಲ್ಲಿ ಸಚಿವರಾಗುವ ಪ್ರಯತ್ನ ಆರಂಭಿಸಿದ್ದಾರೆ. ಮಾಜಿ ಸಚಿವೆ ಮೋಟಮ್ಮ ಸಹಾ ಸಚಿವ ಸ್ಥಾನ ಗಿಟ್ಟಿಸಲು ಯತ್ನ ನಡೆಸುತ್ತಿದ್ದಾರೆ. ಹಿಂದುಳಿದ ಹಾಗೂ ದಲಿತ ಶಾಸಕರ ಯತ್ನದ ನಡುವೆಯೇ ಕುರುಬ ಸಮುದಾಯದಿಂದ ತೆರವಾದ ಸ್ಥಾನಕ್ಕೆ ಆ ಸಮುದಾಯದವರನ್ನೆ ಸಚಿವರನ್ನಾಗಿಸಬೇಕು ಎಂದು ಸಿಎಂ ಮೇಲೆ ಕುರುಬ ಸಮುದಾಯದ ಶಾಸಕರು ಒತ್ತಡ ಹೇರುತ್ತಿದ್ದಾರೆ. ಗೋವಿಂದಪ್ಪ, ಎಂಟಿಬಿ ನಾಗರಾಜು ಹಾಗೂ ರೇವಣ್ಣ ಮೂರು ಜನರಿಂದ ತೀವ್ರ ಲಾಬಿ ನಡೆಯುತ್ತಿದೆ ಎಂದು ತಿಳಿದುಬಂದಿದ್ದು ಮುಖ್ಯಮಂತ್ರಿಗಳು ತೆರವಾದ ಸಚಿವ ಸ್ಥಾನಕ್ಕೆ ಯಾರನ್ನು ನೇಮಕ ಮಾಡುತ್ತಾರೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

Comments are closed.

Social Media Auto Publish Powered By : XYZScripts.com