ಅಕ್ರಮ ಹಣ ಸಾಗಿಸುತ್ತಿದ್ದವರು ಪೋಲಿಸರ ಬಲೆಗೆ

ದಾಖಲೆ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ ೨೩ ಲಕ್ಷ ರೂಪಾಯಿಯನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.  ಈ ಒಂದು ಘಟನೆ  ಹುಬ್ಬಳ್ಳಿ ಜಿಲ್ಲೆಯ ಕುಂದಗೋಳ ತಾಲೂಕಿನ ಬೇಟದೂರ ಬಳಿ ನಡೆದಿದೆ.   ಕಳೆದ ರಾತ್ರಿ ಹುಬ್ಬಳ್ಳಿಯಿಂದ ಗದಗ ಜಿಲ್ಲೆಯ‌ ಲಕ್ಷ್ಮೇಶ್ವರಕ್ಕೆ ಒಯ್ಯುವಾಗ ಈ ಘಟನೆ ನಡೆದಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.hubli-money

ಬಂಧಿತರಿಂದ  2೦೦೦ ಮುಖಬೆಲೆಯ 2೦ ಲಕ್ಷ ಹಾಗೂ 1೦೦ ರೂಪಾಯಿಯ 3 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದು,  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ  ಅಮೀರರಾಮ್, ಅರವಿಂದ ಹಾಗೂ ಪ್ರೇಮಸಿಂಗ್ ನನ್ನು  ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ  ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Comments are closed.