ಮೆಗಾಸ್ಟಾರ್ ಚಿರಂಜೀವಿ ಡೈರೆಕ್ಟ್ ಮಾಡಿದ್ದು ನೋಡಿದ್ದೀರಾ ?

ಹೀರೋ ಆಕ್ಟಿಂಗ್ ಮಾಡೋದು, ಡೈರೆಕ್ಟರ್ ಆಕ್ಷನ್ ಕಟ್ ಹೇಳೊದೆಲ್ಲಾ ಮಾಮೂಲು. ಆದ್ರೆ ಅದೇ ಕ್ಯಾಪ್ಟನ್ ಛೇರಲ್ಲಿ ಹೀರೊ ಕೂತು ನಿರ್ದೇಶಕರಿಗೆ  ಆಕ್ಷನ್ ಕಟ್ ಹೇಳೋದು ತುಂಬಾ ರೇರ್. ಇಂಥಾ ಸ್ಷೆಷಲ್ ಮೊಮೆಂಟ್ ಖೈದಿ ನಂಬರ್ ೧೫೦ ಸೆಟ್ಟಿನಲ್ಲಿ ಸೆರೆ ಸಿಕ್ಕಿದೆ. ಅಷ್ಟಕ್ಕೂ ಹೀಗೆ ಕೆಲ ಕ್ಷಣಗಳಿಗೆ ಡೈರೆಕ್ಟರ್ ಆದ ಸೂಪರ್ ಸ್ಟಾರ್ ಯಾರ್ ಗೊತ್ತಾ..? ಮೆಗಾಸ್ಟಾರ್ ಚಿರಂಜೀವಿ.

chiranjeevi-khaidi-150-direction2
ಮೆಗಾಸ್ಟಾರ್ ೯ ವರ್ಷಗಳ ನಂತ್ರ ಅಭಿನಯಿಸ್ತಿರೋ ಬಹುನಿರೀಕ್ಷಿತ ಖೈದಿ ನಂಬರ್ ೧೫೦ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ವಿಶೇಷ ಅಂದ್ರೆ ಚಿತ್ರದಲ್ಲಿ ನಿರ್ದೇಶಕ ವಿ.ವಿ ವಿನಾಯಕ್ ಪುಟ್ಟ ಪಾತ್ರ ಪ್ಲೇ ಮಾಡ್ತಿದ್ದಾರೆ. ಆ ದೃಶ್ಯದ ನಿರ್ದೇಶನದ ಜವಾಬ್ದಾರಿಯನ್ನು ಖುದ್ದು ಚಿರು ವಹಿಸಿದ್ರು. ಹೈದರಾಬಾದಿನ ಸಾರಥಿ ಸ್ಟುಡಿಯೋದಲ್ಲಿ ಇಂದು ಬೆಳಿಗ್ಗೆ  ಈ ದೃಶ್ಯವನ್ನು ಸೆರೆಹಿಡಿಯಲಾಯಿತು. ಇಷ್ಟು ದಿನ ಆಕ್ಷನ್ ಅಂದಾಕ್ಷಣ ಅಭಿನಯಿಸುತ್ತಿದ್ದ ಚಿರು ಇಂದು ತಾವೇ ಆಕ್ಷನ್ ಹೇಳಿ ಡೈರೆಕ್ಟರ್ ಆದ್ರು. ಮುಂದೊಂದು ದಿನ ಮೆಗಾಸ್ಟಾರ್ ಇಡೀ ಸಿನಿಮಾ ನಿರ್ದೇಶಿಸಿದ್ರೆ ಅಚ್ಚರಿ ಪಡ್ಬೇಕಿಲ್ಲ.

Comments are closed.

Social Media Auto Publish Powered By : XYZScripts.com