ಓಕೆ ಜಾನು ಅಂತಿದೆ ಆಶಿಕಿ-೨ ಜೋಡಿ!

ಸತತ ಸೋಲುಗಳಿಂದ ಕಂಗೆಟ್ಟು ಹೋಗಿದ್ದ ನಿರ್ದೇಶಕ ಮಣಿರತ್ನಂಗೆ ಮತ್ತೆ ಸಕ್ಸಸ್ ಕೊಟ್ಟ ಚಿತ್ರ ಓಕೆ ಕಣ್ಮಣಿ. ಇದರಲ್ಲಿ ದುಲ್ಕರ್ ಸಲ್ಮಾನ್ ಹಾಗು ನಿತ್ಯ ಮೆನನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಈಗ ಇದೇ ಚಿತ್ರವನ್ನ ಬಾಲಿವುಡ್ ಗೆ ರಿಮೇಕ್ ಮಾಡಲಾಗಿದೆ. ಇದಕ್ಕೆ ಓಕೆ ಜಾನು ಅಂತ ಟೈಟಲ್ ಇಟ್ಟಿದ್ದು, ಶ್ರದ್ಧ ಕಪೂರ್ ಹಾಗು ಅದಿತ್ಯ ರಾಯ್ ಕಪೂರ್ ನಟಿಸಿದ್ದಾರೆ. ಶಾಹದ್ ಅಲಿ ನಿರ್ದೇಶಿಸಿದ್ರೆ, ಎ.ಆರ್. ರಹಮಾನ್ ಸಂಗೀತ ಸಂಯೋಜಿಸಿದ್ದಾರೆ. ಮಣಿರತ್ನಂ ಹಾಗು ಕರಣ್ ಜೋಹಾರ್ ಸಿನಿಮಾವನ್ನ ನಿರ್ಮಿಸಿದ್ದಾರೆ.