ದತ್ತ ಪೀಠಕ್ಕೆ ಶರಣಾದ ಬಿಎಸ್ ವೈ

ಚುನಾವಣೆ ಬಂತೆದೆರೆ ಸಾಕು  ದೇವಾಲಯಗಳು, ಮಠಗಳು, ಯಾತ್ರಾಸ್ಥಳಗಳಿಗೆ ರಾಜಕಾರಣಿಗಳು ಭೇಟಿ ನೀಡುವುದು ಸಹಜವಾಗಿದ್ದು, ಇಂದು  ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪ ದತ್ತಮಾಲಾಧಾರಿಯಾಗಿ ದತ್ತಪೀಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

chikamangalore

ಇನ್ನೇನು ವಿಧಾನಸಭೆ ಚುಣಾವಣೆ ಸಮೀಪಿಸುತ್ತಿದ್ದಂತೆ ಹಲವು ರಾಜಕೀಯ ನಾಯಕರು ತಮ್ಮ ಇಷ್ಟಾರ್ಥ ದೇವಾಲಯಗಳು, ಮಠಮಾನ್ಯಗಳು, ಯಾತ್ರಾ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ  ಕುಮಾರಸ್ವಾಮಿ ಶಬರಿಮಲೈಗೆ ಭೇಟಿ ನೀಡಿದ್ದರು. ಅದರಂತೆ ಇಂದು ಚಿಕ್ಕಮಂಗಳೂರಿನ ದತ್ತಪೀಠಕ್ಕೆ ಯಡಿಯೂರಪ್ಪ, ಶೋಭಾಕರಂದ್ಲಾಜೆ ಹಾಗೂ ಸಿಟಿ. ರವಿ ಭೇಟಿ ನೀಡಿದ್ದರು.

Comments are closed.