ರಜನಿ ಹುಟ್ಟುಹಬ್ಬಕ್ಕೆ ಗಣ್ಯರಿಂದ ಶುಭಾಷಯಗಳ ಮಹಾಪೂರ

ಸೂಪರ್ ಸ್ಟಾರ್ ರಜಿನಿಕಾಂತ್ ಅವರಿಗೆ ಇಂದು  66ನೇ ಹುಟ್ಟುಹಬ್ಬದ ಸಡಗರ ಆದರೆ, ಜೆ. ಜಯಲಲಿತಾ ನಿಧನದ ಹಿನ್ನೆಲೆಯಲ್ಲಿ ರಜಿನಿಕಾಂತ್ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ, ಶಾರೂಖ್ ಖಾನ್, ವೀರೇಂದ್ರ ಸೆಹ್ವಾಗ್ ಸೇರಿ ಸಾಕಷ್ಟು ಗಣ್ಯರು ಟ್ವಿಟ್ಟರ್ನಲ್ಲಿ ತಲೈವಾಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

rajini-amithab

ಅಭಿಮಾನಿಗಳನ್ನ ರಂಜಿಸೋದೇ ಕಾಯಕ ಅಂದುಕೊಂಡಿರೋ ರಜಿನಿಕಾಂತ್ ಸದ್ಯ 2.0 ಸಿನಿಮಾ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಇನ್ನೂ ಮತ್ತೊಂದು ಕಡೆ ರಜಿನಿಕಾಂತ್ ರಾಜಕೀಯರಂಗಕ್ಕೆ ಬರ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಕುರಿತು ರಜಿನಿಕಾಂತ್ ಈವರೆಗೆ ಮಾತನಾಡಿಲ್ಲ. ಇನ್ನೂ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

ರಜಿನಿಕಾಂತ್ ಕನ್ನಡ, ತಮಿಳು, ಹಿಂದಿ, ಬೆಂಗಾಳಿ, ಮಲಯಾಳಂ, ತೆಲುಗು ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ತಮ್ಮದೇ ಆದ ವಿಭಿನ್ನ ಸ್ಟೈಲ್, ಮ್ಯಾನರಿಸಂ, ಡ್ಯಾನ್ಸ್, ಆಕ್ಟಿಂಗ್ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನ ಸಂಪಾದಿಸಿರೋ ರಜಿನಿಕಾಂತ್, ತಮ್ಮ ಸರಳತೆಯಿಂದಲೂ ಸಾಕಷ್ಟು ಮಂದಿಗೆ ಮಾದರಿಯಾಗಿದ್ದಾರೆ. ಎಷ್ಟೋ ಸ್ಟಾರ್ಗಳೇ ರಜಿನಿಗೆ ಅಭಿಮಾನಿಗಳು ಅನ್ನೋದು ವಿಶೇಷ  ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಶಿವಾಜಿರಾವ್ ಗಾಯಕ್ವಾಡ್, ಸೂಪರ್ ಸ್ಟಾರ್ ರಜಿನಿಕಾಂತ್ ಆಗಿ ಬೆಳೆದ ರೀತಿಯೇ ರೋಚಕ.

10 thoughts on “ರಜನಿ ಹುಟ್ಟುಹಬ್ಬಕ್ಕೆ ಗಣ್ಯರಿಂದ ಶುಭಾಷಯಗಳ ಮಹಾಪೂರ

Comments are closed.

Social Media Auto Publish Powered By : XYZScripts.com