ಈ ವೀಡಿಯೋ ನೋಡಿದ್ರೆ ಶಶಿಕಲಾ ಪವರ್ ಅರ್ಥವಾಗುತ್ತೆ!

ಜೆ. ಜಯಲಲಿತಾ ಅವರ ನಿಧನದ ನಂತರ ಓ. ಪನ್ನೀರು ಸೆಲ್ವಂ ತಮಿಳುನಾಡು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ಎಐಎಡಿಎಂಕೆ ಪಕ್ಷದ ಸಂಪೂರ್ಣ ಹಿಡಿತ ಜಯಲಲಿತಾ, ಆಪ್ತ ಸ್ನೇಹಿತೆ ಶಶಿಕಲಾ ನಟರಾಜನ್ ಕೈಲಿದೆ ಅನ್ನೋದು ನಿಧಾನವಾಗಿ ಅರ್ಥವಾಗ್ತಿದೆ. ಶೀಘ್ರದಲ್ಲೇ ಶಶಿಕಲಾ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಲಿದ್ದಾರೆ ಅನ್ನಲಾಗ್ತಿದೆ. ಕೆಲ ಶಾಸಕರಂತೂ ಈಗಾಗಲೇ ಚಿಕ್ಕಮ್ಮ ಶಶಿಕಲಾ ಕಾಲಿಗೆ ಬೀಳುವ ಮೂಲಕ ಅವರೇ ತಮ್ಮ ಮುಂದಿನ ನಾಯಕಿ ಅಂತ ಮುಲಾಜಿಲ್ಲದೆ ಒಪ್ಪಿಕೊಂಡಿದ್ದಾರೆ.

sasikala-natarajan-759ryrytytytyt

ಈ ವೀಡಿಯೋದಲ್ಲಿ ದಿವಂಗತ ಜಯಲಲಿತಾ ಅವರ ಸಮಾಧಿ ಬಳಿ ಜಯಲಲಿತಾ ಫೋಟೋಗೆ ನಮಸ್ಕರಿಸಿದ ನಂತರ ಕೆಲ ಶಾಸಕರು ಶಶಿಕಲಾ ಅವರ ಕಾಲಿಗೆ ಬಿದ್ದು ಆಶೀವರ್ಾದ ಪಡೆದುಕೊಳ್ಳೋದನ್ನ ನೋಡಬಹುದು. ಈ ಹಿಂದೆ ಜಯಲಲಿತಾ ಅವರಿಗೆ ಎಐಎಡಿಎಂಕೆ ಶಾಸಕರು ಇದೇ ರೀತಿ ಗೌರವ ಸೂಚಿಸುತ್ತಿದ್ದರು. ಇದರಿಂದಲೇ ಗೊತ್ತಾಗುತ್ತೆ ಶಶಿಕಲಾ ಕೇವಲ 4 ದಿನಗಳಲ್ಲಿ ಹೇಗೆ ಪಕ್ಷ ಮತ್ತು ಶಾಸಕರ ಮೇಲೆ ಹಿಡಿತ ಸಾಧಿಸಿದ್ದಾರೆ ಅನ್ನೋದು.

ಪಕ್ಷದ ಸುಪೀರಿಯರ್ ಪವರ್ ಅಂತಲೇ ಹೇಳಲಾಗುವ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನ ಶಶಿಕಲಾ ಶೀಘ್ರದಲ್ಲೇ ಅಲಂಕರಿಸಲಿದ್ದಾರೆ. ಅಲ್ಲಿಗೆ ಪಕ್ಷದ ಸಂಪೂರ್ಣ ಜವಾಬ್ದಾರಿ ಅವರ ಕೈ ಸೇರಲಿದೆ. ಹಾಗಾಗಿನೇ ಶಾಸಕರು ಈಗಿನಿಂದಲೇ ಶಶಿಕಲಾ ಅವರಿಗೆ ನಿಷ್ಠೆಯಿಂದಿರಲೂ ಪ್ರಾರಂಭಿಸಿದ್ದಾರೆ. ಒಟ್ಟಾರೆ ನೇರವಾಗಿ, ಪರೋಕ್ಷವಾಗಿ ಶಶಿಕಲಾ ಎಐಎಡಿಎಂಕೆ ಪಕ್ಷ ಮತ್ತು ಸಕರ್ಾರವನ್ನ ನಿಧಾನವಾಗಿ ಆವರಿಸಿಕೊಳ್ತಿದ್ದಾರೆ.

Comments are closed.