ಸಿಎಂ ಆಪ್ತ ಸಚಿವರೊಬ್ಬರ sex scandal!

ಸಚಿವ ತನ್ವೀರ್ ಸೇಠ್ ಟಿಪ್ಪುಸ್ತುಲಾನ್ ಜಯಂತಿಯಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣ ಹಸಿಯಾಗಿರುವಾಗಲೇ ಸಿಎಂ ಸಿದ್ರಾಮಯ್ಯ ಸಚಿವ ಸಂಪುಟದ ಹಿರಿಯ, ಪ್ರಭಾವಿ ಸಚಿವರೊಬ್ಬರು ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ.

ಮಹಿಳೆಯೊಂದಿಗೆ ಸಚಿವರು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುವ ವೀಡಿಯೋ ದಾಖಲೆಗಳು ಸಚಿವರು ಖಾಸಗಿ ಅಥವಾ ಸರ್ಕಾರಿ ಅತಿಥಿ ಗೃಹದಲ್ಲಿ ಇಂಥ ನಾಚಿಗೆಗೇಡು ಕೃತ್ಯ ನಡೆಸಿರುವುದು ದೊರೆತಿರುವ ವೀಡಿಯೋ ಮೂಲಕ ಗೊತ್ತಾಗುತ್ತೆ. ಮುಖ್ಯಮಂತ್ರಿ ಪರಾಮಾಪ್ತ ಸಚಿವರೇ ಇಂಥ ನಾಚಿಕೆಗೇಡಿನ ಕೆಲಸಕ್ಕೆ ಕೈ ಹಾಕಿದ್ದಾರೆ. ಒಬ್ಬ ಉದ್ಯೋಗಸ್ಥ ಮಹಿಳೆಯೊಂದಿಗೆ ಕೊಠಡಿಯೊಂದರಲ್ಲಿ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ದಾಖಲೆಗಳು ಲಭ್ಯವಾಗಿದ್ದು, ಇದು ರಾಜ್ಯ ಸರಕಾರದ ನೈತಿಕತೆಯನ್ನು ಪ್ರಶ್ನಿಸುವಂತಿದೆ.

BANGALORE, OCTOBER 02, 2013 : Karnataka Chief Minister Siddaramaiah is seen in a Walk the Talk shoot with the chief editor of Indian Express, Shekhar Gupta at the Vidhana Soudha, Bangalore, for NDTV. (PHOTO BY JYOTHY KARAT)

ವೀಡಿಯೋದಲ್ಲಿರುವುದಾದ್ರೂ ಏನು?
ರಾಜ್ಯದ ಪ್ರಭಾವಿ ಸಚಿವರು ಓರ್ವ ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕದಲ್ಲಿ ತೊಡಗಿರುವ ವೀಡಿಯೋ ಇದೆ. ಸಚಿವರು ಲೈಂಗಿಕ ಸಂಪರ್ಕದಲ್ಲಿ ತೊಡಗಿರುವ 3.23 ನಿಮಿಷಗಳ ವೀಡಿಯೋ ದೃಶ್ಯಾವಳಿಯಲ್ಲಿ ಸಚಿವರ ಘನಂದಾರಿ ಕೆಲಸವನ್ನು ನೋಡಬಹುದು. ವೃದ್ಧಾಪ್ಯದಲ್ಲೂ ಸಚಿವರು ಚಪಲ ಚನ್ನಿಗರಾಯನಂತೆ ವರ್ತಿಸಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ.
ಸಚಿವರು ಖಾಸಗಿ ಅಥವಾ ಸರಕಾರಿ ಅತಿಥಿ ಗೃಹ ಇಲ್ಲವೇ ಗೃಹಕಚೇರಿಯಲ್ಲಿ ಇಂಥ ಅನೈತಿಕ ಕೃತ್ಯವೆಸಗಿದ್ದಾರೆ ಎಂದು ಊಹಿಸಬಹುದು. ತಮ್ಮ ಉಸ್ತುವಾರಿ ಹೊಂದಿರುವ ಜಿಲ್ಲೆಯಲ್ಲಿ ಇಂಥ ಕೃತ್ಯ ನಡೆಸಿರುವ ಸಾಧ್ಯತೆಯಿದೆ.

ಸೆಕ್ಸ್ ವೇಳೆ ನಡೆದ ಸಂಭಾಷಣೆಯಲ್ಲೇನಿದೆ…?
ಲೈಂಗಿಕತೆಯಲ್ಲಿ ತೊಡಗಿರುವ ಸಚಿವರು ಮಹಿಳೆಯೊಂದಿಗೆ ಸಂಭಾಷಣೆ ನಡೆಸಿದ್ದಾರೆ. ಯಾವುದೇ ಉದ್ಯೋಗಸ್ಥ ಮಹಿಳೆ ಎನ್ನುವ ಅನುಮಾನವೂ ಸಂಭಾಷಣೆ ಕೇಳಿದರೆ ಗೊತ್ತಾಗುತ್ತೆ. ಸಂಭಾಷಣೆ ಅಸ್ಪಷ್ಟತೆಯಿಂದ ಕೂಡಿದ್ದು, ಒಂದು ಕೋಣೆಯಲ್ಲಿ ಮಹಿಳೆಯನ್ನು ತಬ್ಬಿಕೊಂಡು ಇದು ಸೆಕ್ಸ್ ಎಂದು ಸಚಿವರು ಹೇಳುವುದು ಹೇಸಿಗೆ ಮೂಡಿಸುತ್ತದೆ.
ಎರಡು ದಿನಗಳ ಹಿಂದೆ ನೀನು (ಮಹಿಳೆ) ಬಂದಾಗ ನಮ್ಮ ಸ್ನೇಹಿತ ಇದ್ದ. ನನಗೆ ತಡೆದುಕೊಳ್ಳಲು ಆಗಲಿಲ್ಲ ಎನ್ನುವ ಮಾತು ಇದೆ. ರಜೆ ಕೊಡುವುದಿಲ್ಲ ಎಂದು ಮಹಿಳೆಯ ಧ್ವನಿ ಮತ್ತು ಯಾರೂ ಜನರು ಹೊರಗಡೆ ಬಂದಿದ್ದಾರೆಂದು ಸಚಿವರು ಮಾತನಾಡುವ ಧ್ವನಿಯೂ ಅಸ್ಪಷ್ಟವಾಗಿ ಕೇಳಿಬರುತ್ತದೆ.

ಮಹಿಳೆ ಯಾರು?
ವೀಡಿಯೋದಲ್ಲಿರುವ ಮಹಿಳೆ ಯಾರು ಎನ್ನುವುದು ಇದುವರೆಗೂ ತಿಳಿದುಬಂದಿಲ್ಲ. ಆ ಮಹಿಳೆಯ ಯಾಕೆ ಸಚಿವರ ಬಳಿ ಹೋಗಿದ್ದರು ಎನ್ನುವುದು ಗೊತ್ತಾಗಬೇಕಿದೆ. ಸಂಭಾಷಣೆ ಆಧಾರದ ಮೇಲೆ ಉದ್ಯೋಗಸ್ಥ ಮಹಿಳೆ ಎಂಬುದು ಖಚಿತವಾಗುತ್ತದೆ. ಹಿರಿಯ ಸಚಿವರಾಗಿ ಮಹಿಳೆಯನ್ನು ಬಳಸಿಕೊಂಡು, ಲೈಂಗಿಕ ಕೃತ್ಯವನ್ನು ದುರ್ಬಳಕೆ ಮಾಡಿಕೊಂಡಿರಬಹುದು. ಸಚಿವರ ಅಧಿಕಾರಿ ದರ್ಪಕ್ಕೆ ಹೆದರಿ ಆ ಮಹಿಳೆ ಸುಮ್ಮನಾಗಿರುವ ಸಾಧ್ಯತೆ.

ವಿಡಿಯೋ ಬಿಡುಗಡೆ ಮಾಡಿದವರು ಯಾರು?
ಮೂಲತಃ ಬಳ್ಳಾರಿಯವರಾದ ರಾಜಶೇಖರ್ ಮಲಾಲಿ, ಅಣ್ಣಾ ಫೌಂಡೇಶನ್ ಸಂಸ್ಥಾಪಕರು, ಭ್ರಷ್ಟಾಚಾರ ವಿರೋಧ ಹೋರಾಟಗಾರರಾಗಿದ್ದಾರೆ. ಈ ಹಿಂದೆ ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ವರ್ಗಾವಣೆ, ರಾಜೀನಾಮೆ ಪ್ರಕರಣದಲ್ಲಿ ರಾಜಶೇಖರ್ ಬೆಂಬಲವಾಗಿ ನಿಂತವರು. ತಮಗೆ ದೊರೆತಿರುವ ಸಚಿವರ ರಾಸಲೀಲೆಯ 3.23 ನಿಮಿಷದ ವೀಡಿಯೋವನ್ನು ಬಹಿರಂಗಗೊಳಿಸಿದ್ದಾರೆ.
ಸಚಿವರ ರಾಸಲೀಲೆ ವೀಡಿಯೋ ಇದೆಯೆಂಬ ವಿಷಯ ತಿಳಿಯುತ್ತಿದ್ದಂತೆ ಪ್ರಭಾವಿ ಸಚಿವರ ಹಿಂಬಾಲಕರು ರಾಜಶೇಖರ್ ಅವರಿಗೆ ನೇರವಾಗಿ ಬಳ್ಳಾರಿಯಲ್ಲಿಯೇ ಬೆದರಿಕೆ ಹಾಕಿದ್ದಾರೆ. (ಈ ಕುರಿತು ಆಡಿಯೋ ರೆಕಾರ್ಡ್ ಇದೆ.) ನಿರಂತರ ಫೋನ್ ಮೂಲಕ ಬೆದರಿಕೆ ಹಾಕುವುದು ಮುಂದುವರೆಸಿದ್ದಾರೆ. ನಿಮ್ಮ ಬೇಡಿಕೆಗಳೇನಾದ್ರೂ ಇದ್ರೆ ಅದನ್ನೂ ಪೂರೈಸಲು ಸಿದ್ಧ ಎಂದು ಆಮಿಷ ಒಡ್ಡುತ್ತಿದ್ದಾರೆ. ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡಬೇಡಿ ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದು ಅಣ್ಣಾ ಫೌಂಡೇಷನ್ ಸಂಸ್ಥಾಪಕ ರಾಜಶೇಖರ್ ಹೇಳುತ್ತಾರೆ.

Comments are closed.

Social Media Auto Publish Powered By : XYZScripts.com