ಸರಣಿ ವಶಕ್ಕೆ ನಾಲ್ಕೇ ಮೆಟ್ಟಿಲು

ನಾಯಕ ವಿರಾಟ್ ಕೊಹ್ಲಿ ದ್ವಿಶತಕ ಹಾಗೂ ಮಧ್ಯಮ ಕ್ರಮಾಂಕದ ಜಯಂತ್ ಯಾದವ್ ಅವರ ಚೊಚ್ಚಲ ಶತಕದ ನೆರವಿನಿಂದ ಭಾರತ ನಾಲ್ಕನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಇನಿಂಗ್ಸ್ ಮುನ್ನಡೆಯನ್ನು ಸಾಧಿಸಿದೆ. ದ್ವಿತೀಯ ಇನಿಂಗ್ಸ್ ಆರಂಭಿಸಿದ ಕುಕ್ ಪಡೆ ೬ ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿದೆ.
virat
ವಾಂಖೇಡೆ ಅಂಗಳದಲ್ಲಿ ಹಲವು ಪ್ರಥಮಗಳನ್ನು ಸೃಷ್ಠಿಸಿದ ಭಾರತ, ಭಾನುವಾರ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕಿದೆ. ೭ ವಿಕೆಟ್‌ಗೆ ೪೫೧ ರನ್‌ಗಳಿಂದ ಮುಂದುವರಿಸಿ ೬೩೧ ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್‌ನಲ್ಲಿ ೬ ವಿಕೆಟ್ ನಷ್ಟಕ್ಕೆ ೧೮೨ ರನ್ ಕಲೆ ಹಾಕಿದೆ.  ಸೋಮವಾರ ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್ ಇನಿಂಗ್ಸ್ ಸೋಲಿನ ಭೀತಿಯಿಂದ ಪಾರಾಗಲು ಇನ್ನು ೪೯ ರನ್ ಕಲೆ ಹಾಕಬೇಕಿದೆ.
ಭಾರತ ತಂಡದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಪ್ರಸಕ್ತ ವರ್ಷ ಮೂರನೇ ಬಾರಿ ೨೦೦ ರನ್ ಗಡಿ ದಾಟಿ ಸಂಭ್ರಮಿಸಿದರು. ಈ ಮೂಲಕ ಹೊಸ ದಾಖಲೆ ಬರೆದರು.  ೮ನೇ ವಿಕೆಟ್‌ಗೆ ಕೊಹ್ಲಿ ಹಾಗೂ ಜಯಂತ್ ೨೪೧ ರನ್‌ಗಳನ್ನು ಕಲೆ ಹಾಕಿ ಭಾರತದ ಪರ ದಾಖಲೆ ಬರೆದರು. ೨೦ ವರ್ಷದ ಹಳೆಯ ದಾಖಲೆಯನ್ನು ಮೂಲೆಗುಂಪು ಮಾಡಿದರು.
ಜಯಂತ್ ೨೦೪ ಎಸೆತಗಳಲ್ಲಿ ೧೫ ಬೌಂಡರಿ ಸೇರಿದಂತೆ ೧೦೪ ರನ್ ಬಾರಿಸಿ ಸಂಭ್ರಮಿಸಿದರು. ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್‌ನ ಜೋ ರೂಟ್ (೭೭) ಮತ್ತು ಬೇರ್‌ಸ್ಟೋ (ಅಜೇಯ ೫೦) ಹೊರತು ಪಡಿಸಿದರೆ, ಉಳಿದ ಬ್ಯಾಟ್ಸ್‌ಮನ್‌ಗಳು ರನ್ ಕಲೆ ಹಾಕುವಲ್ಲಿ ಹಿಂದೆಬಿದ್ದರು. ಸ್ಪಿನ್ ಬೌಲರ್‌ಗಳಾದ ಅಶ್ವಿನ್, ಜಡೇಜಾ ತಲಾ ಎರಡು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಮೊದಲ ಇನಿಂಗ್ಸ್ ೪೦೦
ಭಾರತ ಮೊದಲ ಇನಿಂಗ್ಸ್ ೬೩೧
ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ೬ ವಿಕೆಟ್‌ಗೆ ೧೮೨

2 thoughts on “ಸರಣಿ ವಶಕ್ಕೆ ನಾಲ್ಕೇ ಮೆಟ್ಟಿಲು

  • October 21, 2017 at 4:33 AM
    Permalink

    I’m not that much of a online reader to be honest but your sites really nice, keep
    it up! I’ll go ahead and bookmark your website to come back in the future.
    Many thanks

Comments are closed.

Social Media Auto Publish Powered By : XYZScripts.com