ಹಾಕಿ: ಕೆನಡಾ ಮಣಿಸಿದ ಭಾರತ

ಮಂದೀಪ್ ಸಿಂಗ್ ಹರ್ಮನ್ ಪ್ರೀತ್ ಸಿಂಗ್ ಬಾರಿಸಿದ ಗೋಲಿನ ಸಹಾಯದಿಂದ ಭಾರತ ತಂಡ ಕಿರಿಯರ ವಿಶ್ವ ಕಪ್ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ ಜಯ ಸಾಧಿಸಿದೆ.
haki
ಗುರುವಾರ ನಡೆದ ಪಂದ್ಯದಲ್ಲಿ ಭಾರತ ೪-೦ ಗೋಲುಗಳಿಂದ ಕೆನಡಾ ತಂಡವನ್ನು ಮಣಿಸಿತು. ಭಾರತದ ಪರ ಮಂದೀಪ್ ಸಿಂಗ್ (೩೫ನೇ ನಿಮಿಷ), ಹರ್ಮನ್ ಪ್ರೀತ್ ಸಿಂಗ್ (೪೬ನೇ ನಿಮಿಷ), ವರುಣ್ ಕುಮಾರ್ (೬೦ನೇ ನಿಮಿಷ), ಅಜಿತ್ ಕುಮಾರ್ ಪಾಂಡೆ (೬೬ನೇ ನಿಮಿಷ) ಗೋಲು ದಾಖಲಿಸಿ ಜಯದಲ್ಲಿ ಮಿಂಚಿದರು.
ಉಳಿದ ಪಂದ್ಯದಲ್ಲಿ ನ್ಯೂಜಿಲೆಂಡ್ ೧-೦ ಗೋಲುಗಳಿಂದ ಜಪಾನ್ ತಂಡವನ್ನು, ಜರ್ಮನಿ ೨-೧ ಗೋಲುಗಳಿಂದ ಸ್ಪೇನ್ ತಂಡವನ್ನು, ಇಂಗ್ಲೆಂಡ್ ೪-೨ ಗೋಲುಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತು.

Comments are closed.

Social Media Auto Publish Powered By : XYZScripts.com