ಮುರುಳಿ ವಿಜಯ್ ಆಕರ್ಷಕ ಅರ್ಧಶತಕ!

ಮುಂಬೈನ ವಾಂಖೇಡೆ ಅಂಗಳದಲ್ಲಿ ನಡೆಯುತ್ತಿರುವ ಎರಡನೇ ದಿನದಾವದ ಶುಕ್ರವಾರದ ಪಂದ್ಯದಲ್ಲಿ 5 ವಿಕೆಟ್ ನಷ್ಟಕ್ಕೆ 288 ರನ್‌ಗಳಿಂದ ಆಟ ಮುಂದುವರಿಸಿದ ಇಂಗ್ಲೆಂಡ್, 400 ರನ್‌ಗೆ ಸರ್ವಪತನ ಕಂಡಿತು. ಬಳಿಕ ಇನಿಂಗ್ಸ್ ಆರಂಭಿಸಿದ ಭಾರತ 1 ವಿಕೆಟ್‌ಗೆ 146 ರನ್ ಕಲೆ ಹಾಕಿ ಸುಸ್ಥಿತಿಯಲ್ಲಿದೆ. ಆರಂಭಿಕ ಮುರುಳಿ ವಿಜಯ್ (70) ಹಾಗೂ ಚೇತೇಶ್ವರ್ ಪೂಜಾರ (41) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
aswin-1
ಭಾರತದ ಪರ ಇನಿಂಗ್ಸ್ ಆರಂಭಿಸುವ ಹೊಣೆಯನ್ನು ಹೊತ್ತ ಕನ್ನಡಿಗ ಕೆ.ಎಲ್ ರಾಹುಲ್ ಆಕರ್ಷಕ ಹೊಡೆತಗಳನ್ನೂ ಬಾರಿಸಿದರೂ, ದೊಡ್ಡ ಮೊತ್ತ ಕಲೆ ಹಾಕಲಿಲ್ಲ. ಆಕ್ರಮಣಕಾರಿ ಆಟವನ್ನು ಆಡುವ ಭರಾಟೆಯಲ್ಲಿ ವಿಕೆಟ್ ಒಪ್ಪಿಸಿದರು. ಇದಕ್ಕೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಜೋಸ್ ಬಟ್ಲರ್ 76 ರನ್ ನೆರವಿನಿಂದ 400ರ ಗಡಿ ದಾಟಲು ಕಾರಣವಾಯಿತು.
ಮಧ್ಯಮ ಕ್ರಮಾಂಕದ ಜಾನಿ ಬೇರ್‌ಸ್ಟೋ (14) ಮತ್ತು ಬೆನ್ ಸ್ಟೋಕ್ಸ್ (36) ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು.
ಭಾರತದ ಪರ ಸ್ಪಿನ್ ಮಾಂತ್ರಿಕ ಅಶ್ವಿನ್ ಟೆಸ್ಟ್‌ನಲ್ಲಿ 23ನೇ ಬಾರಿ 5ಕ್ಕೂ ಹೆಚ್ಚು ವಿಕೆಟ್ ಪಡೆದು ಸಾಧನೆ ಮಾಡಿದರು. 119 ರನ್‌ಗಳಿಗೆ ಅಶ್ವಿನ್ 6 ವಿಕೆಟ್ ಪಡೆದರು. ಜಡೇಜಾ 4 ವಿಕೆಟ್ ಕಬಳಿಸಿ ಗಮನ ಸೆಳೆದರು. ವೇಗದ ಬೌಲರ್ ಗಳು ವಿಕೆಟ್ ಪಡೆಯಲು ಪರದಾಡಿದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಮೊದಲ ಇನಿಂಗ್ಸ್ 400
ಭಾರತ ಮೊದಲ ಇನಿಂಗ್ಸ್ 1 ವಿಕೆಟ್‌ಗೆ 146. 

Comments are closed.

Social Media Auto Publish Powered By : XYZScripts.com