ಮಹಾರಾಷ್ಟ್ರವನ್ನು ಮಣಿಸಿದ ಕರ್ನಾಟಕ ತಂಡ!

ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಅಂಗಳದಲ್ಲಿ ಶುಕ್ರವಾರ ನಡೆದ ಕೊನೆಯ ದಿನದ ಪಂದ್ಯದಲ್ಲಿ ಮಹಾರಾಷ್ಟ್ರ 218  ರನ್‌ಗಳಿಗೆ ಆಲೌಟ್ ಆಯಿತು. ಈ ಅಲ್ಪ ಗುರಿಯನ್ನು ಬೆನ್ನತ್ತಿದ ವಿನಯ್ ಪಡೆ ವಿಕೆಟ್ ನಷ್ಟವಿಲ್ಲದೆ 39 ರನ್ ಕಲೆ ಹಾಕಿ ಗೆಲುವಿನ ನಗೆ ಬೀರಿತು. ಈ ಮೂಲಕ ಕರ್ನಾಟಕ ತಂಡವು ಒಂದು ಬೋನಸ್ ಅಂಕವನ್ನು ಪಡೆಯಿತು. ಆಡಿರುವ 8 ಪಂದ್ಯಗಳಲ್ಲಿ 5 ಗೆಲುವು, 1 ಸೋಲು ಮತ್ತು ಎರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದು, 37 ಅಂಕ ಕಲೆ ಹಾಕಿದೆ.
vinaykumar
ಮಹಾರಾಷ್ಟ್ರ ತಂಡವನ್ನು ಅಲ್ಪ ಮುನ್ನಡೆಗೆ ಕಟ್ಟಿಹಾಕುವಲ್ಲಿ ಕರ್ನಾಟಕದ ವೇಗಿಗಳ ಪಾತ್ರ ತುಂಬಾನೆ ಮುಖ್ಯ. ಡೇವಿಡ್ ಮಥಾಯಿಸ್ ಮೂರು ವಿಕೆಟ್ ಪಡೆದರೆ, ಅಭಿಮನ್ಯು ಮಿಥುನ್ ಎರಡು ವಿಕೆಟ್ ಕಬಳಿಸಿ ಮಿಂಚಿದರು.
ಎರಡನೇ ಇನಿಂಗ್ಸ್‌ನಲ್ಲಿ ಅನುಭವಿ ಕೆದಾರ್ ಜಾದವ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 59 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 85 ರನ್ ಕಲೆ ಹಾಕಿ ತಂಡದ ಮುನ್ನಡೆಯನ್ನು ಹೆಚ್ಚಿಸಿದರು. ಚುಟುಕು ಪಂದ್ಯದ ಮಾದರಿಯಲ್ಲಿ ಬ್ಯಾಟ್ ಬೀಸಿದ ಕೇದಾರ್ ನೆರದ ಅಭಿಮಾನಿಗಳನ್ನು ರಂಜಿಸಿದರು.
ಸಂಕ್ಷಿಪ್ತ ಸ್ಕೋರ್
ಮಹಾರಾಷ್ಟ್ರ ಮೊದಲ ಇನಿಂಗ್ಸ್ 163
ಕರ್ನಾಟಕ ಮೊದಲ ಇನಿಂಗ್ಸ್ 345
ಮಾಹಾರಾಷ್ಟ್ರ ದ್ವಿತೀಯ ಇನಿಂಗ್ಸ್ 218
ಕರ್ನಾಟಕ ದ್ವಿತೀಯ ಇನಿಂಗ್ಸ್ ವಿಕೆಟ್ ನಷ್ಟವಿಲ್ಲದೆ 39

Comments are closed.