ನಟ ದೊಡ್ಡಣ್ಣನವರ ಅಳಿಯನ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ!

ಕನ್ನಡದ ಖ್ಯಾತ ಹಾಸ್ಯನಟ ದೊಡ್ಡಣ್ಣನವರ ಅಳಿಯ ವೀರೇಂದ್ರ ಹಾಗೂ ಅಣ್ಣ ನಾಗರಾಜ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

doddanna1

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದಲ್ಲಿರುವ ದೊಡ್ಡಣ್ಣನವರ ಅಳಿಯ ವೀರೇಂದ್ರ ಹಾಗೂ ಅವರ ಅಣ್ಣ ನಾಗರಾಜ ಮನೆ ಮೇಲೆ ದಾಳಿ ನಡೆಸಿದ್ದಾರೆ. ಮೂರು ಕಾರುಗಳಲ್ಲಿ ಬಂದಿರುವ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಬ್ಲ್ಯಾಕ್ ಅಂಡ್ ವೈಟ್ ದಂಧೆ ನಡೆಸುತ್ತಿರುವ ಕಾರಣ ಬೆಂಗಳೂರು, ಹುಬ್ಬಳ್ಳಿ, ಸೇರಿದಂತೆ ದೇಶಾದ್ಯಂತ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Comments are closed.

Social Media Auto Publish Powered By : XYZScripts.com