ಐಟಿ ಅಧಿಕಾರಿಗಳಿಂದ ಬೃಹತ್ ಮೊತ್ತ ಜಪ್ತಿ!

ಚೆನ್ನೈನಲ್ಲಿ ಅದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ 90 ಕೋಟಿ ನಗದು ಮತ್ತು 100 ಕೆಜಿ ಬಂಗಾರವನ್ನು ವಶಕ್ಕೆ ಪಡೆದಿದ್ದಾರೆ. ಕೇಂದ್ರ ಸರ್ಕಾರ ಬೃಹತ್ ಮೊತ್ತದ ನೋಟುಗಳನ್ನು ಬ್ಯಾನ್ ಮಾಡಿದ ನಂತರ ನಡೆಸಿರುವ ಬೃಹತ್ ದಾಳಿ ಇದಾಗಿದೆ.
money
ಚೆನ್ನೈನಲ್ಲಿ ಗುರುವಾರ ಏಕಕಾಲಕ್ಕೆ ಎಂಟು ಕಡೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು ಕಾನೂನು ಬಾಹಿರವಾಗಿ ಸಂಗ್ರಹಿಸಿದ್ದ 2000 ರೂ. ಮುಖಬೆಲೆಯ 70 ಕೋಟಿ ರೂಪಾಯಿ ಸೇರಿದಂತೆ ಒಟ್ಟು 90 ಕೋಟಿ ನಗದು ಹಾಗೂ ಅಪಾರ ಪ್ರಮಾಣದ ಸಂಪತ್ತನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ ಸುಮಾರು 30 ಕೋಟಿ ಮೌಲ್ಯದ 100 ಕೆ.ಜಿ.ಬಂಗಾರವನ್ನು ವಶಕ್ಕೆ ಪಡೆದಿದ್ದಾರೆ.
ಚೆನ್ನೈನ ಆರ್ ಟಿನಗರದಲ್ಲಿರುವ ಮೂರು ಚಿನ್ನದ ಅಂಗಡಿಗಳು ಮತ್ತು ಅವುಗಳ ಮಾಲಿಕರ ಮೇಲೆ ದಾಳಿ ಮಾಡಿರುವ ಆದಾಯ ತೆರಿಗೆ ಅಧಿಕಾರಿಗಳು ಈ ಬೃಹತ್ ಮೊತ್ತದ ನಗದು ಮತ್ತು ಆಭರಣವನ್ನು ವಶಕ್ಕೆ ಪಡೆದಿದ್ದಾರೆ.

ಶೇಖರ್ ರೆಡ್ಡಿ, ಶ್ರೀನಿವಾಸ್ ರೆಡ್ಡಿ ಹಾಗೂ ಪ್ರೇಮ್ ಎಂಬ ವ್ಯಾಪಾರಿಗಳಿಗೆ ಸೇರಿದ, ಲೆಕ್ಕ ನೀಡದ ಮೊತ್ತ ಇದಾಗಿದೆ. ಕೆಲವು ಆಸ್ತಿ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸಲಾಗುತ್ತದೆ.

Comments are closed.

Social Media Auto Publish Powered By : XYZScripts.com