ಹಿರಿಯ ಪತ್ರಕರ್ತ ಚೋ.ಎಸ್.ರಾಮಸ್ವಾಮಿ ಇನ್ನಿಲ್ಲ

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನದಿಂದ ತಮಿಳುನಾಡಿನ ಜನತೆ ಹೊರ ಬಂದಿಲ್ಲ. ಈ ಬೆನ್ನಲ್ಲೇ ಜಯಲಲಿತಾರವರ ಆಪ್ತರು ಹಾಗೂ ಹಿರಿಯ ಪತ್ರಕರ್ತರಾದ ಚೋ.ಎಸ್ ರಾಮಸ್ವಾಮಿ ಬುಧವಾರ ನಸುಕಿನ ಜಾವ ವಿಧಿವಶರಾಗಿದ್ದಾರೆ.
jayalalitha
ಚೋ.ಎಸ್.ರಾಮಸ್ವಾಮಿರವರು ಹಿರಿಯ ಪತ್ರಕರ್ತರು ಹಾಗೂ ತಮಿಳುನಾಡಿನ ಅನೇಕ ರಾಜಕೀಯ ನಾಯಕರಿಗೆ ಆಪ್ತರಾಗಿದ್ದರು. ಅಷ್ಟೇ ಅಲ್ಲದೆ ರಾಜಕೀಯ ವಿಡಂಬನಕಾರ, ನಟ, ಖ್ಯಾತ ಪತ್ರಕರ್ತ, ಮಾಜಿ ಸಂಸದರೂ ಆಗಿದ್ದರು.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರಾಮಸ್ವಾಮಿ ಕಳೆದ ವಾರ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಕೆಲವು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಬುಧವಾರ ನಸುಕಿನ ಜಾವ ಕೊನೆಯುಸಿರೆಳೆದಿದ್ದಾರೆ.

Comments are closed.

Social Media Auto Publish Powered By : XYZScripts.com