ಜಯದ ಲಯಕ್ಕೆ ಮರಳುವುದೇ ಕರ್ನಾಟಕ!

ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಸೋಲಿನ ಕಹಿಯನ್ನು ಉಂಡಿರುವ ಕರ್ನಾಟಕ ಪ್ರಸಕ್ತ ರಣಜಿ ಋತುವಿನ ಕೊನೆಯ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ  ಮೊಹಲಿಯಲ್ಲಿ ಬುಧವಾರ ನಡೆಯಲಿದೆ. ಇಲ್ಲಿಯಾದರೂ ರಾಜ್ಯ ತಂಡ ಗೆಲುವಿನ ಲಯ ಕಂಡುಕೊಳ್ಳುವ ವಿಶ್ವಾಸ ಹೊಂದಿದೆ.

ranaji2

ಪಂಜಾಬ್ ಕ್ರಿಕೆಟ್ ಸಂಸ್ಥೆಯ ಅಂಗಳದಲ್ಲಿ ನಡೆಯುವ ಪಂದ್ಯದಲ್ಲಿ ಕರ್ನಾಟಕ ಪಂದ್ಯವನ್ನು ಗೆಲ್ಲುವ ಫೇವರಿಟ್. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ವಿನಯ್ ಪಡೆ ಕೈ ಮೇಲಿದೆ. ಕರ್ನಾಟಕ ಆಡಿರುವ 12 ಪಂದ್ಯಗಳಲ್ಲಿ 6 ಜಯ ಹಾಗೂ 3 ಸೋಲು, 3 ಡ್ರಾ ಸಾಧಿಸಿದೆ.

2016ರ ರಣಜಿ ಋತುವಿನ 7 ಪಂದ್ಯಗಳಲ್ಲಿ 4 ಜಯ, 1 ಸೋಲು ಮತ್ತು 2 ಪಂದ್ಯಗಳಲ್ಲಿ ಕರ್ನಾಟಕ ಡ್ರಾ ಸಾಧಿಸಿದ್ದು, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ 21 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.

ಬೌಲಿಂಗ್ ಬಲಿಷ್ಠ

ಕರ್ನಾಟಕ ತಂಡದ ಬೌಲಿಂಗ್ ಉತ್ತಮವಾಗಿದೆ. ಸ್ಪಿನ್ ಹಾಗೂ ವೇಗದ ಬೌಲರ್ ಗಳು ತಂಡದ ನೆರವಿಗೆ ಬರುತ್ತಿದ್ದಾರೆ. ಸ್ಪಿನ್ ವಿಭಾಗದಲ್ಲಿ ಕೆ. ಗೌತಮ್ 26 ವಿಕೆಟ್ ಪಡೆದಿದ್ದಾರೆ. ವೇಗಿಗಳಾದ ವಿನಯ್ ಕುಮಾರ್ 21, ಎಸ್. ಅರವಿಂದ್ 23 ವಿಕೆಟ್ ಉರುಳಿಸಿದ್ದಾರೆ.
ರಾಜ್ಯ ತಂಡದ ಬ್ಯಾಟಿಂಗ್ ಗೆ ಆರ್. ಸಮರ್ಥ್ ಆಧಾರ. ಈ ಋತುವಿನಲ್ಲಿ ಆರಂಭಿಕ ಸಮರ್ಥ್  7 ಪಂದ್ಯಗಳಿಂದ 592 ರನ್ ಕಲೆ ಹಾಕಿದ್ದಾರೆ. ಉಳಿದಂತೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ಅನುಭವ ಹೊಂದಿರುವ ಮಧ್ಯಮ ಕ್ರಮಾಂಕದ ಸ್ಟುವರ್ಟ್  ಬಿನ್ನಿ 425 ರನ್ ಸಿಡಿಸಿದ್ದಾರೆ. ಕಳೆದ ಪಂದ್ಯಗಳಲ್ಲಿ ಮಾಡಿದ ತಪ್ಪುಗಳಿಂದ ಬ್ಯಾಟ್ ಮಾಡುವ ಉತ್ಸಾಹದಲ್ಲಿ ರಾಬಿನ್ ಉತ್ತಪ್ಪ, ಸಿ.ಎಂ ಗೌತಮ್ ಇದ್ದು ದೊಡ್ಡ ಇನಿಂಗ್ಸ್ ಕಟ್ಟುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.

ಸಂಘಟಿತ ಆಟ

ಮಹಾರಾಷ್ಟ್ರ ತಂಡ ಸಂಘಟಿತ ಆಟ ಪ್ರದರ್ಶಿಸುತ್ತಿದೆ. ಅಂಕಿತ್ ಭವಾನೆ (661), ಎಸ್.ಎಂ ಗುಗಲಾ (438), ಎನ್.ಎಸ್ ಶೇಖ್ (407) ಬ್ಯಾಟಿಂಗ್ ನಲ್ಲಿ ತಂಡಕ್ಕೆ ಆಧಾರವಾಗಬಲ್ಲ ಆಟಗಾರರು. ಬೌಲಿಂಗ್ ನಲ್ಲಿ ಅನುಮಪ್ ಸಾಕ್ಲೆಂಚಾ ಸದ್ಯ 40 ವಿಕೆಟ್ ಪಡೆದಿದ್ದಾರೆ.

ಪಂದ್ಯ ಆರಂಭ: ಮುಂಜಾನೆ 9.30ಕ್ಕೆ
ಸಂಭಾವ್ಯ ಮುಂಬೈ ತಂಡ
ಸ್ವಪ್ನಿಲ್ ಗೂಗ್ಲೆ, ಹರ್ಷದ ಖಡೇವಾಲೆ, ನೌಶದ್, ಅಂಕಿತ್ ಭವಾನೆ, ರಾಹುಲ್ ತ್ರಿಪಾಠಿ, ಚಿರಾಗ್ ಖುರಾನ್, ವಿಶಾಂತ್ ಮೊರೆ, ಶ್ರೀಕಾಂತ್ ಮುಂಡೆ, ಅನುಪಮ್ ಸಕ್ಲೇನಚಾ, ಅಕ್ಷಯ ದರೇಕರ್, ಮೋಶಿನ್ ಸೈಯ್ಯದ್.
ಸಂಭಾವ್ಯ ಕರ್ನಾಟಕ ತಂಡ
ಆರ್.ವಿನಯ್ ಕುಮಾರ್ (ನಾಯಕ), ಸಿ.ಎಂ.ಗೌತಮ್, ಮನೀಶ್ ಪಾಂಡೆ, ಆರ್.ಸಮರ್ಥ, ಮಯಾಂಕ ಅಗರವಾಲ್, ರಾಬಿನ್ ಉತ್ತಪ್ಪ, ಸ್ಟುವರ್ಟ್ ಬಿನ್ನಿ, ಶ್ರೇಯಸ್ ಗೋಪಾಲ್, ಎಸ್.ಅರವಿಂದ್, ಅಬ್ರಾರ್ ಖಾಜಿ, ಮೀರ್ ಕೌನೇನ್ ಅಬ್ಬಾಸ್, ಕೆ.ಗೌತಮ್

Comments are closed.

Social Media Auto Publish Powered By : XYZScripts.com