ದರ್ಶನ್ 49ನೇ ಚಿತ್ರಕ್ಕೆ ಮಿಲನ ಚಾಲೆಂಜ್!

ಚಕ್ರವರ್ತಿ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾವ ಸಿನಿಮಾದಲ್ಲಿ ನಟಿಸ್ತಾರೆ ಅನ್ನೋ ಕುತೂಹಲವಿತ್ತು. ಆ ಪ್ರಶ್ನೆಗೆ ಇದೀಗ ಫುಲ್ ಸ್ಟಾಪ್ ಬಿದ್ದಿದ್ದು, ಸದ್ಯ ದರ್ಶನ್ ಅಭಿನಯದ 49ನೇ ಚಿತ್ರ ಸೆಟ್ಟೇರಿದೆ. ಪಕ್ಕಾ ಆಕ್ಷನ್-ಸೆಂಟಿಮೆಂಟ್‍ಗೆ ಹೆಚ್ಚು ಒಲವು ತೋರುತ್ತಿದ್ದ ದರ್ಶನ್, ಈ ಬಾರಿ ಫ್ಯಾಮಿಲಿ ಎಂಟರ್ಟೈನರ್ ಕಡೆ ಮುಖ ಮಾಡಿದ್ದಾರೆ.

darshaaaaaan

ಮಿಲನ ಪ್ರಕಾಶ್, ದರ್ಶನ್ ಅಭಿನಯದ ಈ ಹೆಸರಿಡದ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಇದೇ ಮೊದಲ ಬಾರಿಗೆ ಇವರಿಬ್ಬರು ಒಂದಾಗಿದ್ದಾರೆ. ಲವ್ ಕಮ್ ಫ್ಯಾಮಿಲಿ ಸೆಂಟಿಮೆಂಟ್ ಸ್ಟೋರಿಗಳನ್ನ ಹೆಣೆಯೋದ್ರಲ್ಲಿ ಪ್ರಕಾಶ್ ನಿಸ್ಸೀಮರು. ಈ ಬಾರಿ ದರ್ಶನ್ ಮ್ಯಾನರಿಸಂಗೆ ತಮ್ಮ ಕಥೆಯನ್ನ ಹೇಗೆ ಹೊಂದಿಸಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.

ಈ ಹೊಸ ಚಿತ್ರ ಹೆಚ್ಎಸ್ಆರ್ ಲೇಔಟ್‍ನ ದೇವಸ್ಥಾನವೊಂದರಲ್ಲಿ ಸೆಟ್ಟೇರಿದೆ. ನಟ ಹಾಗೂ ರಾಜಕಾರಣಿ ಕುಮಾರ್ ಬಂಗಾರಪ್ಪ ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು. ಇಲ್ಲಿವರೆಗೆ ದರ್ಶನ್ ಅವರೊಂದಿಗೆ ಶೃತಿ ಹರಿಹರನ್ ಮತ್ತು ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸ್ತಾರೆ ಅನ್ನೋ ಮಾಹಿತಿಯಷ್ಟೇ ಸಿಕ್ಕಿದೆ. ಆದ್ರೀಗ ಕುಮಾರ್ ಬಂಗಾರಪ್ಪ ಕೂಡ ಈ ಚಿತ್ರದಲ್ಲಿ ನಟಿಸ್ತಾರಾ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಈಗಾಗಲೇ ಕುಮಾರ್ ಬಂಗಾರಪ್ಪ ಚಕ್ರವರ್ತಿ ಚಿತ್ರದಲ್ಲಿ ದರ್ಶನ್ ಜೊತೆ ನಟಿಸಿದ್ದಾರೆ.  ಒಟ್ಟಿನಲ್ಲಿ ದರ್ಶನ್ ಅಭಿಮಾನಿಗಳಿಗೆ ಚಕ್ರವರ್ತಿಯ ಬೆನ್ನಲ್ಲೇ ಮತ್ತೊಂದು ಚಾಲೆಂಜಿಂಗ್ ಸಿನಿಮಾ ಸಿಗೋದಂತೂ ಗ್ಯಾರೆಂಟಿ.

Comments are closed.

Social Media Auto Publish Powered By : XYZScripts.com