ರೇಸ್ ಟ್ರ್ಯಾಕ್ ನಿಂದ ದೂರ ಸರಿದ ಚಾಂಪಿಯನ್ ರೋಸ್‌ಬರ್ಗ್

ಹಾಲಿ ವಿಶ್ವಚಾಂಪಿಯನ್ ಜರ್ಮನಿಯ ನಿಕೋ ರೋಸ್‌ಬರ್ಗ್ ಶುಕ್ರವಾರ ಹಠಾತನೆ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇದರಿಂದ ರೇಸ್ ಅಭಿಮಾನಿಗಳಿಗೆ ತೀವ್ರ ನಿರಾಸೆ ಆಗಿದೆ.
ಪ್ರಸಕ್ತ ವರ್ಷ ಭರ್ಜರಿ ಫಾರ್ಮ್‌ನಲ್ಲಿದ್ದ ಮರ್ಸಿಡೀಸ್ ತಂಡದ ಚಾಲಕ ರೋಸ್‌ಬರ್ಗ್ 21 ರೇಸ್‌ಗಳಲ್ಲಿ 9 ಪ್ರಶಸ್ತಿಯನ್ನು ಪಡೆದು ಬೀಗಿದ್ದರು. ಅಲ್ಲದೆ ಕೇವಲ ಐದು ಅಂಕಗಳ ಅಂತರದಲ್ಲಿ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದ್ದ ಬ್ರೀಟನ್‌ನ ಲೂಯಿಸ್ ಹ್ಯಾಮಿಲ್ಟನ್ ಶಾಕ್ ನೀಡಿ ಮೊದಲ ಬಾರಿಗೆ ಪ್ರಶಸ್ತಿ ಎತ್ತಿ ಸಂಭ್ರಮಿಸಿದ್ದರು.
niko-roseberg25 ವರ್ಷದ ವೃತ್ತಿ ಬದುಕಿನಲ್ಲಿ ವಿಶ್ವದ ನಂಬರ್ 1 ಪಟ್ಟವನ್ನು ಅಲಂಕರಿಸುವುದು ನನ್ನ ಗುರಿಯಾಗಿತ್ತು. ಅದನ್ನ ಸಾಧಿಸಿದ ತೃಪ್ತಿ ನನಗಿದೆ. 
ನಿಕೋ ರೋಸ್‌ಬರ್ಗ್, ಎಫ್-೧ ಚಾಂಪಿಯನ್
ರೋಸ್‌ಬರ್ಗ್ ನಿವೃತ್ತಿ ನಿರ್ಧಾರವನ್ನು ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟಿಸಿದ್ದಾರೆ. ಭಾನುವಾರ ಅಬುದಾಭಿಯಲ್ಲಿ ನಡೆದ ಕೊನೆಯ ಗ್ರ್ಯಾನ್ ಪ್ರಿ ರೇಸ್‌ನಲ್ಲಿ ಎರಡನೇಯವರಾಗಿ ಗುರಿ ಮುಟ್ಟಿದರೂ ಚಾಂಪಿಯನ್ ಆಗಲು ಬೇಕಿದ್ದ ಅಗತ್ಯ ಅಂಕ ಕಲೆ ಹಾಕುವಲ್ಲಿ ಯಶಸ್ವಿಯಾಗುವ ಮೂಲಕ ತಮ್ಮ ದೀರ್ಘ ಕಾಲದ ಕನಸು ನನಸು ಮಾಡಿಕೊಂಡಿದ್ದರು. ಈ ಮೂಲಕ ಹ್ಯಾಟ್ರಿಕ್ ಸಾಧನೆಯ ಹೊಸ್ತಿಲಲ್ಲಿದ್ದ ಬ್ರಿಟನ್‌ನ ಲೂಯಿಸ್ ಹ್ಯಾಮಿಲ್ಟನ್ ಕನಸು ಭಗ್ನಗೊಳಿಸಿದ್ದರು.nico-rosberg-champion
ಕೆಕ್ ರೋಸ್ಬರ್ಗ್ ಹಾಗೂ ಸೀನಾ ಅವರಿಗೆ ನಿಕೋ ೧೯೮೨ ರಲ್ಲಿ ಜನಿಸಿರುವ ನಿಕೋ, ತಮ್ಮ ಆರನೇ ಒಯಸ್ಸಿನಲ್ಲಿ ಕಾರು ಚಾಲನೆಯನ್ನು ಆರಂಭಿಸುತ್ತಾರೆ. ೨೦೧೬ರಲ್ಲಿ ನಿಕೋ ವರ್ಷದ ಆರಂಭದಿಂದಲೂ ನಂಬರ್ ಒನ್ ಸ್ಥಾನದ ಮೇಲೆ ಕಣ್ಣಿಟ್ಟಂತೆ ಕಂಡು ಬಂದಿತ್ತು. ಅದರಂತೆ ಆಸ್ಟ್ರೇಲಿಯನ್, ಬಹರೇನ್, ಚೀನಾ, ರಷ್ಯಾ ಮುಂತಾದ ರೇಸ್‌ಗಳಲ್ಲಿ ಪ್ರಶಸ್ತಿ ಜಯಸಿದ್ದರು.
ಫಾರ್ಮುಲಾ ಒನ್ ಲೋಕದ ಅಧಿಪತಿ ನಿಕೋ ಜರ್ಮನಿ ಅವರು. ಇದೇ ದೇಶದ ಮೈಕಲ್ ಶೂಮಾಕರ್ ೭ ಬಾರಿ ಹಾಗೂ ಸೆಬಾಸ್ಟಿಯನ್ ವೆಟಲ್ ೪ ಬಾರಿ ಈ ಸಾಧನೆಯನ್ನು ಮಾಡಿದ್ದಾರೆ. ಹ್ಯಾಮಿಲ್ಟನ್ ಈ ಸಾಲಿನಲ್ಲಿ ಮೂರನೇಯವರಾಗಿ ನಿಲ್ಲುತ್ತಾರೆ.
 ಪ್ರಸಕ್ತ ವರ್ಷ ಭರ್ಜರಿ ಫಾರ್ಮನಲ್ಲಿದ್ದ ನಿಕೋ ರೋಸ್ಬರ್ಗ್ ಲೂಯಿಸ್ ಹ್ಯಾಮಿಲ್ಟನ್ ಅವರನ್ನು ಸಾಕಷ್ಟು ರೇಸ್‌ಗಳಲ್ಲಿ ಹಿಂದಿಕ್ಕಿದ್ದಾರೆ. ಕೊನೆಯ ರೇಸ್ ನ ಅಂತ್ಯಕ್ಕೆ ನಿಕೋ ರೋಸ್‌ಬರ್ಗ್ ೩೮೫ ಅಂಕ ಕಲೆ ಹಾಕಿದರೆ, ಪ್ರತಿ ಸ್ಪರ್ಧಿ ಲೂಯಿಸ್ ಹ್ಯಾಮಿಲ್ಟನ್ ೩೮೦ ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದರು.

Comments are closed.

Social Media Auto Publish Powered By : XYZScripts.com