ಹೇಜಲ್ ಜೊತೆ ಆರಂಭವಾದ ಯುವಿ ಜೊತೆಯಾಟ…

ಟೀಮ್ ಇಂಡಿಯಾದ ಆಲ್‍ರೌಂಡರ್ ಯುವರಾಜ್ ಸಿಂಗ್ ತನ್ನ ಗೆಳತಿ ಹೇಜಲ್ ಕೀಚ್ ರನ್ನು  ಮದುವೆ ಆಗುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿತ್ತು. ಅದರಂತೆ ಇಂದು ಸಿಖ್ ಸಂಪ್ರಾಯದಂತೆ ಗೃಹಸ್ತಾಶ್ರಮಕ್ಕೆ ಕಾಲಿಟಿದ್ದಾರೆ. ಆಗೆ ಡಿಸೆಂಬರ್ 2ಕ್ಕೆ ಗೋವಾದಲ್ಲಿ ಹಿಂದೂ ಸಂಪ್ರದಾಯದಂತೆ ಮತ್ತೊಮ್ಮೆ ವಿವಾಹವಾಗುತ್ತಿದ್ದು, ಯುವಿ  ವಯಕ್ತಿಕ  ಜೀವನದಲ್ಲೂ ದಾಖಲೆ ಮಾಡೋಕೆ ಮುಂದಾಗಿದ್ದಾರೆ.

yuvi-party-photo-1

ಇದೇ ಡಿಸೆಂಬರ್ 12 ಕ್ಕೆ ಯುವಿ ಹುಟ್ಟುಹಬ್ಬ ಇದ್ದು ಅದಕ್ಕಾಗಿ ಮದುವೆ ಕೆಲಸಗಳನ್ನು ಬೇಗ ಮುಗಿಸುವ ಯೋಚನೆಯಲ್ಲಿದ್ದಾರಂತೆ ಯುವಿ. ಹಾಗಾಗಿ ಡಿಸೆಂಬರ್ 7 ರಂದು ಅರತಕ್ಷತೆ ಕಾರ್ಯಕ್ರಮವನ್ನು ದೆಹಲಿಯಲ್ಲಿ ಏರ್ಪಾಡು ಮಾಡಲಾಗಿದೆ. ಇನ್ನು ಈ ಯುವಿಯ ವಿವಾಹ ಸಂಭ್ರಮದಲ್ಲಿ ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ, ಕೋಚ್ ಅನಿಲ್ ಕುಂಬ್ಳೆ, ಸೇರಿದಂತೆ ಭಾರತ ತಂಡದ ಆಟಗಾರರು ವಿಶ್ ಮಾಡುವ ಮೂಲಕ ಆ ನವ ಜೋಡಿಯ ಜೊತೆ ಹೆಜ್ಜೆ ಕೂಡ ಹಾಕಿದರು.

ಕಳೆದ ವರ್ಷ ನವೆಂಬರ್‍ನಲ್ಲಿ ಬಾಲಿಯಲ್ಲಿ ಯುವರಾಜ್ ಹಾಗೂ ಹೇಜಲ್ ಕೀಚ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿರೀಕ್ಷೆಯಂತೆ ಯುವರಾಜ್ ಹೇಜಲ್ ಕೀಚ್‍ರನ್ನ ಇಂದು ಮದುವೆ ಆಗಿದ್ದಾರೆ. ವಿಶೇಷ ಅಂದರೆ, ಹೇಜಲ್ ಕೀಚ್ ಬಂಗಾರದ ಬಣ್ಣದ ಲೆಹಂಗಾ, ಆಭರಣಗಳೊಂದಿಗೆ ಕಂಗೊಳಿಸುತ್ತಿದ್ದರೆ, ಯುವಿ ಟಿಪ್ ಡಾಪ್ ಡ್ರೆಸ್‍ನಲ್ಲಿ ಪಕ್ಕಾ ಪಂಜಾಬಿ ಲುಕ್ಕಿನಲ್ಲಿ ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

Comments are closed.