ಮೋದಿಯ ನೋಟಿನಾಟ ಗೋಲ್ಡನ್‍ಸ್ಟಾರ್‍ಗೆ ಪೀಕಲಾಟ ?

ಮುಂಗಾರು ಮಳೆ ಮಿಂದೆದ್ದ ಮೇಲೆ ಗೋಲ್ಡನ್ ಸ್ಟಾರ್ ಗಾಳಿಪಟ ಹಾರಿಸಿ ಗೆದ್ದಿದ್ರು. ಈ ಎರಡೂ ಚಿತ್ರಗಳು ಯೋಗ್ ರಾಜ್ ಭಟ್ ಹಾಗು ಗಣೇಶ್ ಕಾಂಬಿನೇಷನ್ ನಲ್ಲಿ ಪ್ರೇಕ್ಷಕರನ್ನ ರಂಜಿಸಿದ್ವು. ಆ ಬಳಿಕ ಮತ್ತೆ ಇವರಿಬ್ರೂ ಒಟ್ಟಿಗೆ ಕೆಲಸ ಮಾಡಲೇ ಇಲ್ಲ. ಅದಕ್ಕೆ ಕಾರಣ ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಅಂತ್ಲೇ ಗುಸುಗುಸು ಹಬ್ಬಿತ್ತು. ಅದಾದ ಎಂಟು ವರ್ಷಗಳ ನಂತರ ಮತ್ತೆ ಒಂದೇ ಸಿನಿಮಾಗಾಗಿ ಕೆಲಸ ಮಾಡ್ತಿದ್ದಾರೆ.

yograj-bhat-new-movie ganesh-golden-star-new-film

 

ಇದು ಹಳೆಯ ಸುದ್ದಿನೇ ಆದ್ರೂ, ಗಾಂಧಿನಗರದಲ್ಲಿ ಮತ್ತೇನು ಗಾಳಿಸುದ್ದಿ ಹರಿದಾಡೋಕೆ ಶುರುಮಾಡಿದೆ. ಅದೇಪ್ಪಾ ಅಂದ್ರೆ, ಯೋಗರಾಜ್ ಭಟ್ ನಿರ್ದೇಶಿಸ್ತಿರೋ ಹೊಸ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ನಟಿಸೋದು ಪಕ್ಕಾ ಆಗಿತ್ತು. ಹಾಗೆ ಈ ಚಿತ್ರವನ್ನ ಸ್ವತ: ಗಣೇಶ್ ಅವರೇ ನಿರ್ಮಾಣ ಮಾಡೋಕೆ ಒಪ್ಪಿಕೊಂಡಿದ್ರು. ಇದರ ಮಧ್ಯೆನೇ ಹೊಸ ಸುದ್ದಿಯೊಂದು ಓಡಾಡ್ತಿದೆ.

lifeu-ishtene-syed-salam

ಮೋದಿ ನೋಟುಗಳನ್ನ ದಿಢೀರನೇ ಬ್ಯಾನ್ ಮಾಡಿದ್ದು ಗೋಲ್ಡನ್ ಸ್ಟಾರ್ ನಿರ್ಮಾಣದಿಂದ ಹಿಂದೆ ಸರಿಯುವಂತೆ ಮಾಡಿದೆಯಂತೆ. ಹಾಗಾಗಿ ಈ ಜಾಗಕ್ಕೆ ಲೈಫು ಇಷ್ಟೇನೆ ಚಿತ್ರ ನಿರ್ಮಿಸಿದ್ದ   ಸೈಯ್ಯದ್ ಸಲಾಮ್ ಬಂದಿದ್ದಾರಂತೆ. ಇಷ್ಟೊತ್ತಿಗಾಗ್ಲೇ ಸೆಟ್ಟೆರಬೇಕಿದ್ದ ಸಿನಿಮಾ ಸ್ವಲ್ಪ ಮಟ್ಟಿಗೆ ಮುಂದಕ್ಕೆ ಹೋಗಿದೆ. ಹೊಸ ವರ್ಷಕ್ಕೆ ಇಲ್ಲ ಅದಕ್ಕಿಂತ ಮೊದಲೇ ಮೋಸ್ಟ್ ಎಕ್ಸ್ ಪೆಕ್ಟೆಟ್ ಸಿನಿಮಾ ಸೆಟ್ಟೇರಬಹುದು.

Comments are closed.