ಇದು ಹೋರಾಟಕ್ಕೆ ಸಿಕ್ಕ ಸುಂದರ ರಸ್ತೆ

ಕ್ರೆಡಿಟ್ ಯಾರಾದರೂ ತೆಗೆದುಕೊಳ್ಳಲ್ಲಿ. ಅಂತೂ ಹೋರಾಟವೊಂದಕ್ಕೆ ಜಯ ಸಿಕ್ಕಿತು. ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ 15 ಎಫ್ ಬಸ್ ಸ್ಟ್ಯಾಂಡ್ ರಸ್ತೆ ಅಂದಗೊಂಡಿತು. ಇನ್ನು ಯಾರಾದರೂ ಈ ಶ್ರೇಯ ತೆಗೆದುಕೊಳ್ಳಲಿ, ವೀ ಡೋಂಟ್ ಕೇರ್! ಅದೆಷ್ಟು ಜನರು ದ್ವಿಚಕ್ರ ವಾಹನದಲ್ಲಿ ಬಂದು ಮುಗ್ಗರಿಸಿ ಬಿದ್ದಿದ್ದರು. ಫುಟ್‍ಪಾತ್ ಎನ್ನುವುದೇ ಇಲ್ಲದಂತೆ ಆಗಿತ್ತು. ಹೆಸರಿಗೆ ಮಾತ್ರ ಎನ್ನುವಂತೆ ಇದ್ದ ಫುಟ್‍ಪಾತ್ ಈಗ ನಿಜವಾಗಿಯೂ ಫುಟ್‍ಪಾತ್ ಆಗಿದೆ. ವರ್ಷಾನುಗಟ್ಟಲೆ ಕಿತ್ತು ಹೋಗಿದ್ದ ರಸ್ತೆ ಈಗ ಟಾರ್ ಕಂಡಿದೆ. ಇದಕ್ಕೆ ಸಣ್ಣದೊಂದು ಹೋರಾಟ ಕಾರಣ. ಎಲ್ಲವೂ ಆದ ನಂತರ ಕ್ರೆಡಿಟ್ ತೆಗೆದುಕೊಳ್ಳಲು ಬರುವ ಜನರು ಹೆಚ್ಚು. ಅವರಿಗೂ ಖಂಡಿತ ಕೃತಜ್ಞತೆ. ಅಂತೂ ಈಗಿನ ಕ್ರೆಡಿಟ್‍ಗೆ ಮುಂದೆ ಅವರು ಡೆಬಿಟ್ ಆಗಿ ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸ ಮೂಡಿದೆ. ಹೀಗೂ ಮಾಡಬಹುದೆಂದು ಟೀ-ಕಾಫಿ ಕುಡಿಸಿ “ನಾವು ಇನ್ನು ಮುಂದೆ ನಿಮ್ಮ ಜತೆಗೆ ಇರುತ್ತೇವ್ರಿ,  ಏನಾದರೂ ಕೆಲಸ ಇದ್ದರೆ ಹೇಳಿ” ಎಂದು ಹೇಳುವ ಉದಾರ ಮನಸ್ಸಿನ ಪರಿವರ್ತನೆಯು ಜೈ ಭೀಮ್ ಎನ್ನುವಂತೆ ಮಾಡಿದೆ.

road2

ಏನೇ ಆಗಲಿ, ಅಂತೂ ನೋಡುವುದಕ್ಕೆ,  ಓಡಾಡುವುದಕ್ಕೆ ಚೆಂದದ ರಸ್ತೆಯೊಂದು ಉದ್ಯಾನನಗರಿಯ ದಕ್ಷಿಣ ಭಾಗದ ಕುಮಾರಸ್ವಾಮಿ ಬಡಾವಣೆಯಲ್ಲಿ ಸಿದ್ಧವಾಗಿದೆ. ಈ ಭಾಗದ ಜನಪ್ರತಿನಿಧಿ ಆರ್.ಅಶೋಕ್ ಅವರು ಮಾಡಿಸಿದರು  ಅವರಿಗೆ ಕೃತಜ್ಞತೆ. ಆದರೆ ಅದಕ್ಕಾಗಿ ಅನಾಮಿಕವಾಗಿ ನಡೆದ ಹೋರಾಟ ನಿರಂತರ. ರಸ್ತೆಯನ್ನು ಡಾಂಬರೀಕರಣ ಮಾಡುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಡೆದ ಸಂದೇಶ ಹರಡುವಿಕೆಯ ಹೋರಾಟ ನಿರಂತರ. ಹಿರಿಯ ನಾಗರಿಕರು ಕೇಳಿದ್ದ ಫುಟ್‍ಪಾತ್ ಬೇಡಿಕೆ ಕೊನೆಗೂ ನನಸಾಗಿದೆ. ಆದರೂ ಈ ಫುಟ್‍ಪಾತ್ ದುರಾಕ್ರಮಣ ಆಗಬಾರದು, ಅಂಗಡಿಗಳ ಮಾಲಿಕರ ಪ್ರದರ್ಶನ ಫಲಕ ಹಾಗೂ ವಸ್ತುಗಳ ಸಂಗ್ರಹ ತಾಣವಾಗಬಾರದು ಎನ್ನುವುದು ಇನ್ನೂ ಬಾಕಿ ಇರುವ ಕೋರಿಕೆ. ಸದ್ಯಕ್ಕಂತೂ ಎಲ್ಲವೂ ಚೆಂದವಾಗಿದೆ, ಅಂದವಾಗಿದೆ.

ಈ ರಸ್ತೆಯಲ್ಲಿ ಕಳೆದ ವಾರ ಲೆಕ್ಕ ಹಾಕಿದ ಮಟ್ಟಿಗೆ ಸುಮಾರು 89 ದೊಡ್ಡ ಹಾಗೂ 133 ಸಣ್ಣ ಗುಂಡಿಗಳು ಬಿದ್ದಿದ್ದವು. ಅವುಗಳನ್ನು ತುಂಬಲು ರಸ್ತೆಬದಿಯ ಮಣ್ಣು ಹಾಗೂ ಮುರಿದ ಫುಟ್‍ಪಾತ್ ಟೈಲ್ಸ್ ಬಳಸಲಾಗಿತ್ತು. ಈ ಕುರಿತು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವನ್ನು ಹರಿಬಿಡಲಾಗಿತ್ತು. ಅದಕ್ಕೆ ಕೆಲವು ಸಹೃದಯ ಪತ್ರಕರ್ತರು ಸ್ಪಂದಿಸಿದ್ದರು. ಅದರ ಪರಿಣಾಮವಾಗಿ ಆ ಮುರಿದ ಟೈಲ್ಸ್ ಗಳನ್ನು ತೆಗೆದು ಜಲ್ಲಿಕಲ್ಲು ತುಂಬಿ ಮತ್ತೆ ರಸ್ತೆ ಕಾಮಗಾರಿ ಮುಂದುವರಿಯಿತು. ಇದಕ್ಕಾಗಿ ಇದೇ ಭಾಗದ ಕೆಲವು ಪ್ರಜ್ಞಾವಂತರು ಅಧಿಕಾರಿಗಳ ಮೇಲೆ ಒತ್ತಡ ಹೇರುವ ಕೆಲಸವನ್ನು ಕೂಡ ಮಾಡಿದರು. ಅಂತೂ ಈಗ ಸುಂದರವಾದ ಟಾರ್ ರಸ್ತೆ ಸಿದ್ಧವಾಗಿದೆ. ನಡೆಯುವವರು, ವಾಹನ ಓಡಿಸುವವರು “ಅಬ್ಬಾ… ಎಷ್ಟೊಂದು ಚೆನ್ನಾಗಿದೆ” ಎಂದು ಸಂತಸಪಡುತ್ತಿದ್ದಾರೆ.

3 thoughts on “ಇದು ಹೋರಾಟಕ್ಕೆ ಸಿಕ್ಕ ಸುಂದರ ರಸ್ತೆ

 • October 18, 2017 at 1:37 PM
  Permalink

  I love what you guys tend to be up too. Such clever work and reporting! Keep up the amazing works guys I’ve added you guys to my own blogroll.|

 • October 18, 2017 at 3:20 PM
  Permalink

  I always spent my half an hour to read this weblog’s content every day along with a cup of coffee.|

 • October 20, 2017 at 9:52 PM
  Permalink

  Greetings! This is my first visit to your blog! We are a collection of volunteers and starting a new project in a community in the same niche. Your blog provided us valuable information to work on. You have done a outstanding job!|

Comments are closed.