ಸೇನಾ ಹೆಲಿಕಾಪ್ಟರ್ ಪತನ- ಮೂವರು ಅಧಿಕಾರಿಗಳ ಸಾವು

ಪಶ್ಚಿಮ ಬಂಗಾಳದ ಸುಕ್ನಾ ಜಿಲ್ಲೆಯಲ್ಲಿ ಸೇನೆಯ  ಹೆಲಿಕಾಪ್ಟರ್ ಪತನಗೊಂಡ ಪರಿಣಾಮ ಮೂವರು ಅಧಿಕಾರಿಗಳು ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ಚೀತಾ ಎಂಬ ಹೆಸರಿನ ಈ ಸೇನಾ ಹೆಲಿಕಾಪ್ಟರ್ ಬುಧವಾರ  ಬೆಳಗ್ಗೆ ಸುಮಾರು 10.30ರ ವೇಳೆಗೆ ಪತನಗೊಂಡಿದೆ. ಘಟನೆಯಲ್ಲಿ ಮೂವರು ಅಧಿಕಾರಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Comments are closed.