ಮಾಸ್ತಿಗುಡಿ ದುರಂತ ಪ್ರಕರಣ; ಒಬ್ಬನಿಗೆ ಜಾಮೀನು

ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಖಳನಟ ಅನಿಲ್ ಹಾಗೂ ಉದಯ್ ಹೆಲಿಕಾಪ್ಟರ್ ನಿಂದ ತಿಪ್ಪಗೊಂಡನಹಳ್ಳಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದರು. ಈ ಘಟನೆಗೆ ಸಂಬದಿಸಿದಂತೆ ಪ್ರಕರಣದಲ್ಲಿ ಐವರು ಆರೋಪಿಗಳ ಪೈಕಿ ಸಿನಿಮಾದ ಸಹ ನಿರ್ದೇಶಕ ಸಿದ್ದುಗೆ ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯ ಇಂದು ಜಾಮೀನು ನೀಡಿದೆ.

mastigudi

ಆದರೆ ಉಳಿದ ಆರೋಪಿಗಳಾದ  ಮಾಸ್ತಿಗುಡಿ ಸಿನಿಮಾದ ನಿರ್ದೇಶಕ ನಾಗಶೇಖರ್, ನಿರ್ಮಾಪಕ ಸುಂದರ್ ಪಿ ಗೌಡ, ಫೈಟ್ ಮಾಸ್ಟರ್ ರವಿವರ್ಮಾ ಹಾಗೂ ಯುನಿಟ್  ಮ್ಯಾ ನೇಜರ್ ಭರತ್ ಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ ಎಂದು ಹೇಳಲಾಗುತ್ತಿದೆ.

ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಡಿ 3 ರವರೆಗೆ ಮುಂದುವರೆಯಲಿದೆ. .

Comments are closed.

Social Media Auto Publish Powered By : XYZScripts.com