ಜಿಂಕೆ ಮಾಂಸದಾಸೆಗೆ ತಂದೆಗೆ ಗುಂಡಿಕ್ಕಿದ ಮಗ!

ಯುವಕನೋರ್ವ ಜಿಂಕೆ ಮಾಂಸ ತಿನ್ನೋ ಆಸೆಗೆ ಬಿದ್ದು ತಂದೆಯನ್ನೇ ಕೊಂದ ಘಟನೆಯಿದು. ಇಂತಾದೊಂದು ವಿಚಿತ್ರ ಘಟನೆ ಕಳೆದ ವಾರ ದೂರದ ನ್ಯೂಯಾಕರ್್ನಲ್ಲಿ ವರದಿಯಾಗಿದೆ. ಅಷ್ಟಕ್ಕೂ ಆಗಿದ್ದು ಇಷ್ಟೆ. ನ್ಯೂಯಾರ್ಕ್ ನ ಕ್ರಿಸ್ಟೋಫರ್ ಪಾರೊ ಅನ್ನೋ ಯುವಕ ಜಿಂಕೆಯನ್ನ ಬೇಟೆಯಾಡೊ ಸಮಯದಲ್ಲಿ ಜಿಂಕೆಯೆಂದು ಭಾವಿಸಿ ತನ್ನ ತಂದೆಗೆ ಶೂಟ್ ಮಾಡಿದ್ದಾನೆ. ಈ ವೇಳೆ ಅದೇ ಜಿಂಕೆಯನ್ನ ಬೇಟೆಯಾಡೋಕೆ ಹೋಗಿದ್ದ ತಂದೆ ಕೆವಿನ್ ಪಾರೊಗೆ ಆ ಗುಂಡು ತಗುಲಿ ಆತ ಕೊನೆಯುಸಿರೆಳೆದಿದ್ದಾನೆ.

deer-1

ಆ ದಿನ ತನ್ನ ಮನೆಗೆ ಸಮೀಪದಲ್ಲಿದ್ದ ಅರಣ್ಯದಲ್ಲಿ ಕ್ರಿಸ್ಟೋಫರ್ ಜಿಂಕೆ ಬೇಟೆಗೆ ಹೋಗಿದ್ದ. ಆ ವೇಳೆ ಆತನ ಕಣ್ಣಿಗೆ ಜಿಂಕೆಯೊಂದು ಕಂಡಿದೆ. ಕೂಡಲೇ ಅದನ್ನ ಬೇಟೆಯಾಡೋಕೆ ಅಲ್ಲೇ ಇದ್ದ ಮರ ಏರಿ ಅದಕ್ಕೆ ಗುರಿಯಿಟ್ಟು ಗುಂಡಿಕ್ಕಿ ಕೊಲ್ಲೋಕೆ ಮುಂದಾಗಿದ್ದಾನೆ. ಅದೇ ಆತನ ತಂದೆ ಸಾವಿಗೆ ಕಾರಣವಾಗಿದೆ. ಜಿಂಕೆ ಸಂಚರಿಸುತ್ತಿದ್ದ ಜಾಗದಲ್ಲಿ ದೂರದಿಂದಲೇ ಗುಂಡಿನ ದಾಳಿ ನಡೆಸಿದ್ದಾನೆ. ಈ ದಾಳಿಯಲ್ಲಿ ಮಗನಿಗೆ ತಿಳಿಯದೇ ಜಿಂಕೆ ಬೇಟೆಗೆ ತೆರಳಿದ್ದ ಆತನ ತಂದೆಗೆ ಆ ಗುಂಡು ತಗುಲಿದೆ.

ಕ್ರಿಸ್ಟೋಫರ್ ಗೂ ಮೊದಲೇ ಜಿಂಕೆಯ ಸಮೀಪಕ್ಕೆ ತೆರಳಿದ್ದ ಆತನ ತಂದೆ ಅಲ್ಲೇ ಪೊದೆಯಲ್ಲಿ ಅಡಗಿ ಕೂತು ಜಿಂಕೆಯನ್ನ ಬೇಟೆಯಾಡೋಕೆ ಮುಂದಾಗಿದ್ದ. ಆದರೆ ಆತನಿಂದ ದೂರದಲ್ಲಿದ್ದ ಮಗನ ಬಂದೂಕಿನಿಂದ ಬಂದ ಗುಂಡು ಕಿವಿನ್ ಪಾರೊ ಎದೆಗೆ ತಗುಲಿದೆ. ಕೂಡಲೇ ಆತನನ್ನ ಆಸ್ಪತ್ರೆಗೆ ಸೇರಿಸಲಾಯಿತಾದ್ರೂ ಪ್ರಯೋಜನವಾಗಲಿಲ್ಲ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ.

Comments are closed.