ರೋಬೊ ಚಿಟ್ಟಿ ಎದಿರು ಮಂಡಿವೂರಿದ ಬಾಹುಬಲಿ

ಕಳೆದ ಭಾನುವಾರ ರಿವೀಲ್ ಆದ 2.o ಸಿನಿಮಾ ಫಸ್ಟ್ ಲುಕ್ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಈ ಫಸ್ಟ್ ಲುಕ್ ಪೋಸ್ಟರ್‍ನ್ನ ಬಾಹುಬಲಿ ದಿ ಕನ್‍ಕ್ಲ್ಯೂಷನ್ ಸಿನಿಮಾ ಫಸ್ಟ್ ಲುಕ್ ಜೊತೆಗೆ ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೀತಿದೆ. ಕೆಲವರು ರಜಿನಿಕಾಂತ್ ಮತ್ತು ಅಕ್ಷಯ್ ಕುಮಾರ್ 2.o ಫಸ್ಟ್ ಲುಕ್ ಸೂಪರ್ ಅಂತಿದ್ರೆ, ಮತ್ತೆ ಕೆಲವರು ಬಾಹುಬಲಿ ಸೀಕ್ವೆಲ್‍ನಲ್ಲಿ ಶಿವುಡು ಫ್ರಭಾಸ್ ಲುಕ್ ಬೊಂಬಾಟ್ ಅಂತಿದ್ದಾರೆ.

rajani2.0andbahubali

2.o ಮತ್ತು ಬಾಹುಬಲಿ-2 ಫಸ್ಟ್ ಲುಕ್ ಪೋಸ್ಟರ್‍ಗಳು ಹೆಚ್ಚು ಕಡಿಮೆ ಒಂದೇ ರೀತಿ ಕಾಣುತ್ತವೆ. ಅದರ ಗ್ರಾಫಿಕ್ಸ್, ಡಿಸೈನ್, ಥೀಮ್ ಹೆಚ್ಚು ಕಡಿಮೆ ಒಂದೇ ರೀತಿ ಇದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆಯನ್ನ ಆಧರಿಸಿ ಆಂಗ್ಲ ವೆಬ್‍ಸೈಟ್‍ವೊಂದು ಸರ್ವೆಯನ್ನ ನಡೆಸಿದೆ. ಅದರ ಪ್ರಕಾರ ಶೇಕಡಾ 62ರಷ್ಟು ಮಂದಿ 2.o ಸಿನಿಮಾ ಫಸ್ಟ್ ಲುಕ್‍ಗೆ ಮಾರು ಹೋಗಿದ್ದಾರೆ. ಇನ್ನುಳಿದ 32ರಷ್ಟು ಮಂದಿ ಮಾತ್ರ ಬಾಹುಬಲಿ ಪೋಸ್ಟರ್‍ನ್ನ ಮೆಚ್ಚಿಕೊಂಡಿದ್ದಾರೆ.

firstlook2.0

ಎರಡೂ ಸೌತ್ ಸಿನಿಮಾಗಳೇ ಆದ್ರೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಗಿಟ್ಟಿಸಬೇಕು ಅಂತ ಅದ್ದೂರಿಯಾಗಿ ಮುಂಬೈನಲ್ಲಿ ಎರಡು ಸಿನಿಮಾ ಫಸ್ಟ್ ಲುಕ್‍ಗಳನ್ನ ಅನಾವರಣ ಮಾಡಲಾಗಿತ್ತು.. ಇನ್ನೂ 2.o ಸಿನಿಮಾ ಪೋಸ್ಟರ್‍ನಲ್ಲಿ ಚಿಟ್ಟಿ ರೋಬೊ ರಜಿನಿಕಾಂತ್‍ಗಿಂತ ಖಳ ನಟ ಅಕ್ಷಯ್ ಕುಮಾರ್ ಲುಕ್ ಎಲ್ಲರ ಮನಗೆದ್ದಿದೆ. ಡಾ. ರಿಚರ್ಡ್ ಪಾತ್ರದಲ್ಲಿ ಅಕ್ಕಿ ಣeಡಿಡಿiಜಿಥಿiಟಿg ಲುಕ್‍ನಲ್ಲಿ ಅಕ್ಷಯ್ ಕುಮಾರ್ ಕಮಾಲ್ ಮಾಡ್ತಿದ್ದಾರೆ. ಇವರಿಬ್ಬರ ಮ್ಯಾಜಿಕ್ ಮುಂದೆ ಬಾಹುಬಲಿ ಪ್ರಭಾಸ್ ಆಟ ನಡೀತಿಲ್ಲ..

firstlook poster 2.0

2.0 ಹಾಗೂ ಬಾಹುಬಲಿ ದಿ ಕನ್‍ಕ್ಲ್ಯೂಷನ್ ಎರಡೂ ಕೂಡ ಸೀಕ್ವೆಲ್ ಸಿನಿಮಾಗಳೇ. 2010ರ ಎಂದಿರನ್ ಸಿನಿಮಾ ಸೀಕ್ವೆಲ್ ಈ 2.o. ಅದೇ ರೀತಿ ಕಳೆದ ವರ್ಷ ಬಾಕ್ಸಾಫೀಸ್ ಕೊಳ್ಳೆ ಹೊಡೆದ `ಬಾಹುಲಿ ದಿ ಬಿಗಿನಿಂಗ್’ ಚಿತ್ರದ ಮುಂದುವರೆದ ಭಾಗ `ಬಾಹುಬಲಿ ದಿ ಕನ್‍ಕ್ಲ್ಯೂಷನ್’. ಈ ಹಿಂದೆ ಈ ಎರಡೂ ಸಿನಿಮಾಗಳು ಏಕಕಾಲಕ್ಕೆ ತೆರೆಗಪ್ಪಳಿಸಿ ಗಲ್ಲಾಪೆಟ್ಟಿಗೆಯಲ್ಲಿ ಸೆಣಸಲಿವೆ ಅನ್ನೋ ಸುದ್ದಿಯಿತ್ತು. ಆದರೆ 2.o ಸಿನಿಮಾವನ್ನ ಮುಂದಿನ ದೀಪಾವಲಿಗೆ ರಿಲೀಸ್ ಮಾಡೋದಾಗಿ ಚಿತ್ರತಂಡ ಹೇಳಿದ್ಮೇಲೆ ಈ ಸುದ್ದಿ ತೆರೆ ಬಿದ್ದಿದೆ.

Comments are closed.