ಮುಂಬೈ ದಾಳಿಗೆ 8 ವರ್ಷ: ಹುತಾತ್ಮರ ಸ್ಮರಣೆ.

ದೇಶದ ಆರ್ಥಿಕ ರಾಜಧಾನಿ ಎಂದೇ ಕರೆಯಲ್ಪಡುವ ಮುಂಬೈ ಮೇಲೆ ಉಗ್ರರ ದಾಳಿ ನಡೆದು ಇಂದಿಗೆ 8 ವರ್ಷ. ಈ ದುರಂತದಲ್ಲಿ ಉಗ್ರರ ವಿರುದ್ಧ ಹೋರಾಡಿ ಮಡಿದ ವೀರ ಸೇನಾನಿಗಳು ಸೇರಿದಂತೆ ಈ ದುರಂತದಲ್ಲಿ ಮಡಿದ ಒಟ್ಟು 166 ಜನರನ್ನು ಇಂದು ಸ್ಮರಿಸಲಾಯಿತು.
mumbai-photo
ಮಹಾರಾಷ್ಟ್ರದ ಪೊಲೀಸ್ ಜಿಮ್‌ಖಾನಾದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಸಿ.ವಿ ರಾವ್‌ , ಸಿಎಂ ದೇವೇಂದ್ರ ಫಡ್ನವೀಸ್, ಡಿಜಿಪಿ ಸತೀಶ್‌ ಮಥುರ್‌, ಮುಂಬೈ ಪೊಲೀಸ್ ಕಮೀಷನರ್ ದತ್ತಾ ಪಡ್ಸಲಗಿಕರ್‌, ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ದುರಂತದಲ್ಲಿ ಪ್ರಾಣ ಕಳೆದುಕೊಂಡವರಿಗೆ ನಮನ ಸಲ್ಲಿಸಿದರು.

2008ರ ನವಂಬರ್‌ 26ರಂದು ಅರಬ್ಬಿ ಸಮುದ್ರದದ ಮೂಲಕ ಮುಂಬೈ ಪ್ರವೇಶಿಸಿದ್ದ ಉಗ್ರರು ನಗರದ ಛತ್ರಪತಿ ಶವಾಜಿ ಟರ್ಮಿನಸ್‌, ಹೊಟೇಲ್‌ ತಾಜ್‌, ಹೊಟೇಲ್‌ ಟ್ರಿಡೆಂಟ್- ಒಬೇರಾಯ್‌, ನಾರಿಮನ್ ಹೌಸ್‌, ಲಿಯೋಪೊಲ್ಡ್‌ ಕೆಫೆ ಈ ಸ್ಥಳಗಳಲ್ಲಿ ರಕ್ತದೋಕುಳಿಯನ್ನೇ ಹರಿಸಿದ್ದರು.

Comments are closed.

Social Media Auto Publish Powered By : XYZScripts.com