ಮೋಡಿ ಮಾಡಿರೋ ಟಾಪ್ 10 ಮೋದಿ ಆ್ಯಪ್ ಗಳನ್ನ ನೋಡಿದ್ದೀರಾ..?

ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ದಿಟ್ಟ ಹೆಜ್ಜೆಯಿಂದ ಹಲವು ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳುತ್ತಾ ಪ್ರಧಾನ ಮಂತ್ರಿ ನರೇಂದ್ರ ಮೋದಿ’ರವರು ಅಧಿಕಾರಕ್ಕೆ ಬಂದಾಗಿನಿಂದಲೂ ಭ್ರಷ್ಟರಿಗೆ ಮುಳುವಾಗಿದ್ದಾರೆ. ನವೆಂಬರ್ 8 ರಂದು ಪ್ರಕಟಿಸಿದ 500, 1000 ರೂ ನೋಟುಗಳ ಚಲಾವಣೆ ರದ್ದು ಮಾಡಿರುವುದು ಇವರ ಬಹುದೊಡ್ಡ ನಿರ್ಧಾರ. ಮೋದಿ’ರವರ ಈ ತೀರ್ಮಾನದ ಹೊಡೆತ ಟೆಕ್‌ ಕ್ಷೇತ್ರವನ್ನು ಹಿಂದೆ ಸರಿಸಿಲ್ಲ. ಕಾರಣ, ಮೋದಿ’ರವರ ಪ್ರತಿ ಹೆಜ್ಜೆ ಗಳ ಅಪ್‌ಡೇಟ್‌ ನೀಡಲು ಹಲವು ಆ್ಯಪ್‌ಗಳು ಈಗ ಆ್ಯಪ್‌ ಸ್ಟೋರ್‌ನಲ್ಲಿ ಲಭ್ಯ.

narendra-modi-top-10-app

ಹಲವು ಆ್ಯಪ್‌ಗಳಲ್ಲಿ ಮೋದಿರವರ ಯೋಜನೆಗಳು, ಶೀಘ್ರವಾಗಿ ಯಾವುದಾದರೂ ಕ್ರಮಗಳನ್ನು ಕೈಗೊಂಡಲ್ಲಿ ಅದರ ಅಪ್‌ಡೇಟ್ ನೀಡುವ ಹಲವು ಉಪಯುಕ್ತವಾಗಿವೆ. ನರೇಂದ್ರ ಮೋದಿಯವ್ರ ಅಂತಹ ಟಾಪ್ 10 ಆ್ಯಪ್‌ಗಳನ್ನು ಇಂದಿನ ಲೇಖನದಲ್ಲಿ ಪರಿಚಯಿಸುತ್ತಿದ್ದೇವೆ. ಅವುಗಳು ಯಾವುವು ಎಂದು ಮುಂದೆ ಓದಿ.

ನರೇಂದ್ರ ಮೋದಿ
‘ನರೇಂದ್ರ ಮೋದಿ’ ಆ್ಯಪ್‌ ಇತ್ತೀಚಿನ ಮಾಹಿತಿಗಳು ಮತ್ತು ದೇಶದಾದ್ಯಂತ ಜರುಗುತ್ತಿರುವ ಪ್ರಮುಖ ಘಟನೆಗಳ ಬಗ್ಗೆ, ಹಾಗೂ ಪ್ರಧಾನ ಮಂತ್ರಿ’ರವರ ಕಛೇರಿಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಅಪ್‌ಡೇಟ್ ನೀಡುತ್ತದೆ.

ಮೋದಿ ಕೀನೋಟ್
‘ಮೋದಿ ಕೀನೋಟ್’ ಒಂದು entertaining ಆ್ಯಪ್‌ ಆಗಿದೆ. 2,000 ಮತ್ತು 500 ರೂ ನೋಟುಗಳನ್ನು ಸ್ಕ್ಯಾನ್ ಮಾಡಿದ್ದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ’ರವರು ಕಪ್ಪು ಹಣದ ಕುರಿತು ಮಾತನಾಡಿರುವ ಭಾಷಣ ಕೇಳಬಹುದು. ಈ ಆ್ಯಪ್‌ನಿಂದ 2000 ನೋಟು ಸ್ಕ್ಯಾನ್‌ ಮಾಡಿ ಮೋದಿ ಭಾಷಣ ಕೇಳಲು ಇಂಟರ್ನೆಟ್ ಬೇಕಿಲ್ಲ!

modi-10appಮೋದಿ ಗವರ್ನಮೆಂಟ್ ಯೋಜನಾ
‘ಮೋದಿ ಗವರ್ನಮೆಂಟ್ ಯೋಜನಾ’ ಆ್ಯಪ್‌ ಭಾರತ ಸರ್ಕಾರ ಕೈಗೊಂಡ ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತದೆ. ಹಾಗು ಇತರೆ ಪ್ರಸ್ತುತ ಸರ್ಕಾರಿ ಯೋಜನೆಗಳನ್ನ ಪರಿಚಯಿಸುತ್ತದೆ.

ನರೇಂದ್ರ ಮೋದಿ ಜಿ
ಈ ‘ನರೇಂದ್ರ ಮೋದಿ’ ಆ್ಯಪ್‌ ಡೌನ್‌ಲೋಡ್ ಮಾಡಿ ಮೋದಿ’ರವರ ಲೇಟೆಸ್ಟ್ ಪ್ಲಾನ್‌ಗಳು ಯಾವುವು ಎಂಬ ಬಗ್ಗೆ ಮಾಹಿತಿ ಪಡೆಯಬಹುದು. ಈ ಆ್ಯಪ್‌ ಬಳಸಿ ನಿಮ್ಮ ಕೊಡುಗೆಗಳನ್ನು ನೀಡಿ, ಬ್ಯಾಡ್ಜ್‌ಗಳನ್ನು ಪಡೆಯಬಹುದು.

 

ಮೋದಿ ರೂಪೀಸ್  ಸರ್ಜಿಕಲ್‌ಸ್ಟ್ರೈಕ್‌
‌’ಮೋದಿ ರೂಪೀಸ್ ಸರ್ಜಿಕಲ್‌ಸ್ಟ್ರೈಕ್’, ಆ್ಯಪ್‌ ಮೂಲಕ ಕಪ್ಪು ಹಣ ಸರ್ಜಿಕಲ್ ಸ್ಟ್ರೈಕ್’ ಕ್ರಮದ ಚಾಲನೆಯಲ್ಲಿ ನೀವು ಭಾಗಿಯಾಗಬಹುದು. ಆದರೆ ಇದೊಂದು ಕುತೂಹಲಕಾರಿ ಗೇಮ್‌ ಆ್ಯಪ್‌ ಆಗಿದ್ದು, ಕಪ್ಪು ಹಣ ನಾಶದ ಬಗ್ಗೆ ಗೇಮ್‌ ಆಡಬಹುದು.

ಸೆಲ್ಫಿ ವಿತ್‌ ನರೇಂದ್ರ ಮೋದಿ
ಈ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಬಹುದು. ಫೋಟೋ ಈಗಾಗಲೇ ಸಾಮಾಜಿಕ ತಾಣದಲ್ಲಿ ಶೇರ್ ಆಗಿದೆ. ನಿಮ್ಮ ಫೋನ್‌ ಕ್ಯಾಮೆರಾದಿಂದ ಸೆಲ್ಫಿಯನ್ನು ಪೊರ್ಟ್ರೇಟ್ ಮೋಡ್‌ನಲ್ಲಿ ಕ್ಲಿಕ್ಕಿಸಿ.

ಪಿಎಂಓ ಇಂಡಿಯಾ
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ’ರವರ ಅಧಿಕೃತ ಆ್ಯಪ್‌ ಇದು. ಈ ಆ್ಯಪ್‌ ಮಾಹಿತಿ ಹಾಗು ಅಪ್‌ಡೇಟ್‌ಗಳನ್ನ ಇಮೇಲ್‌ ಮತ್ತು ನೋಟಿಫಿಕೇಶನ್‌ ಮೂಲಕ ಸೆಂಡ್ ಮಾಡುತ್ತದೆ. ಈ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡಲ್ಲಿ ಇತ್ತೀಚಿನ ಮಾಹಿತಿಗಳು ಮತ್ತು ಸುದ್ದಿಗಳನ್ನು ಪಡೆಯಬಹುದು.

ನರೇಂದ್ರ ಮೋದಿ ವಾಲ್‌ಪೇಪರ್ ಫ್ರೀ
ಹೆಸರೇ ಹೇಳುವಂತೆ ಈ ಆಪ್‌ ಮೋದಿ’ರವರ ಫೋಟೋಗಳನ್ನು ಫೋನ್‌ನ ವಾಲ್‌ಪೇಪರ್‌ ಆಗಿ ಸೆಟ್ ಮಾಡಲು ಅವಕಾಶ ನೀಡುತ್ತದೆ. ಈ ಆಪ್‌ನಲ್ಲಿ ಮೋದಿ’ರವರ ವಿವಿಧ ಫೋಟೋಗಳು ಲಭ್ಯವಿರುತ್ತದೆ.

ನಮೋ ಮೋದಿ ಕೋಟ್ಸ್
‘ನಮೋ ಮೋದಿ ಕೋಟ್ಸ್’ ಆಪ್‌ ಡೌನ್‌ಲೋಡ್ ಮಾಡಿಕೊಳ್ಳುವುದರಿಂದ ಮೋದಿ’ರವರ quotes ಸ್ವೀಕರಿಸಬಹುದು. ಜೊತೆಗೆ ವಾಲ್‌ಪೇಪರ್‌ಗಳು ಸಹ ಲಭ್ಯ. Quotesಗಳನ್ನು ಸ್ನೇಹಿತರೊಂದಿಗೆ ಶೇರ್‌ ಸಹ ಮಾಡಬಹುದು.

ನರೇಂದ್ರ ಮೋದಿ ಪಿ ಎಂ ಓ
ನರೇಂದ್ರ ಮೋದಿ ಆಪ್‌ ಮೂಲಕ ವಿವಿಧ ಸರ್ಕಾರಿ ಆನ್‌ಲೈನ್ ಪೋರ್ಟ್‌ಗಳ ಆಕ್ಸೆಸ್ ಮಾಡಬಹುದು. ಅಲ್ಲದೇ ನೇರವಾಗಿ ಪಿಎಂಓ’ಗೆ ಸಂಪರ್ಕ ಪಡೆದು ಪ್ರಧಾನ ಮಂತ್ರಿ’ರವರ ಬಗ್ಗೆ ಸುಲಭವಾಗಿ ಮಾಹಿತಿ ಪಡೆಯಬಹುದು.

Comments are closed.