ಜನರಿಗೆ ಚಾಕಲೇಟ್, ಮದ್ಯ, ಲೈಂಗಿಕತೆಗಿಂತ ಇದೇ ಬೇಕಂತೆ !

ಜನರು ದಿನನಿತ್ಯ ಜೀವನದಲ್ಲಿ ಯಾವ ವಸ್ತುವಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ ಎಂದು ಕೇಳಿದರೆ ಯಾರ್ಯಾರು ಏನೇನು ಹೇಳುತ್ತಾರೋ ಗೊತ್ತಿಲ್ಲಾ? ಆದರೆ ಇತ್ತೀಚೆಗೆ ಕೈಗೊಂಡ ಅಧ್ಯಯನದ ಪ್ರಕಾರ ಹೆಚ್ಚಿನ ಜನರು ತಮ್ಮ ನಿತ್ಯ ಜೀವನದ ಅಗತ್ಯಾಂಶಗಳಲ್ಲಿ ವೈಫೈಗೆ ಹೆಚ್ಚು ಪ್ರಾಧಾನ್ಯತೆ ನೀಡಿದ್ದಾರೆ. ಹೌದು ಹತ್ತು ಜನರಲ್ಲಿ ನಾಲ್ಕರಷ್ಟು ಜನರು ಲೈಂಗಿಕತೆ, ಚಾಕೋಲೇಟ್, ಮದ್ಯಗಳಿಗಿಂತ ಹೆಚ್ಚಿನ ಪ್ರಾಧಾನ್ಯತೆಯನ್ನು ವೈಫೈಗೆ ನೀಡಿದ್ದಾರೆ.
free_wifi-people_using_chocolate-sex-alcohal_1
ವೈಫೈ ಸಂಪರ್ಕ ಸೇವೆ ನೀಡುವ ‘ಐಪಾಸ್’, ಯೂರೋಪ್‌ ಮತ್ತು ಅಮೆರಿಕದಲ್ಲಿನ 1,700 ವೃತ್ತಿಪರ ಉದ್ಯೋಗಿಗಳಲ್ಲಿ, ಅವರ ಸಂಪರ್ಕ ಹವ್ಯಾಸದ ಬಗ್ಗೆ ಸಮೀಕ್ಷೆ ಮಾಡಲಾಗಿತ್ತು. ಈ ಸಮೀಕ್ಷೆಯಲ್ಲಿ ಪಾಲ್ಗೊಂಡವರಿಗೆ ಮಾನವ ಐಷಾರಾಮಿ ಮತ್ತು ಅಗತ್ಯತೆಗಳಿಗೆ  ಶ್ರೇಣಿ ನೀಡಲು ಹೇಳಲಾಗಿತ್ತು. ಚಾಕೋಲೇಟ್, ಮದ್ಯ, ಸೆಕ್ಸ್, ವೈಫೈ ಈ ನಾಲ್ಕು ಅಂಶಗಳಲ್ಲಿ ಒಂದಕ್ಕೆ ಪ್ರಾಮುಖ್ಯತೆ ನೀಡಲು ಸೂಚಿಸಲಾಗಿತ್ತು.

ಈ ಸಮೀಕ್ಷೆಯಲ್ಲಿ ಶೇ.40.2 ರಷ್ಟು ಜನರು ವೈಫೈ ಅನ್ನು ಗುರುತಿಸಿ ಪ್ರತಿಕ್ರಿಯೆ ನೀಡಿದ್ದರು. ಇತರೆ ಪ್ರಾಧಾನ್ಯತೆಗಳಾದ ಲೈಂಗಿಕತೆ (ಶೇ.36.6), ಚಾಕೋಲೇಟ್ (ಶೇ.14.3), ಮದ್ಯಪಾನ ದಿನನಿತ್ಯದ ಅಂಗತ್ಯಾಂಶವಾಗಿ ಕೇವಲ ಶೇ.8.9 ರಷ್ಟು ಜನರು ಜನರು ಪ್ರತಿಕ್ರಿಯೆ ನೀಡಿದ್ದಾರೆ ಎಂದು ಇಂಟರ್‌ನ್ಯಾಷನಲ್ ಬ್ಯುಸಿನೆಸ್ ಟೈಮ್ಸ್ ವರದಿ ಮಾಡಿದೆ.

Colorful WiFi symbol in three dimensional shape

“ವೈಫೈ, ಇಂಟರ್ನೆಟ್ ಸಂಪರ್ಕ ಪಡೆಯುವ ಪ್ರಖ್ಯಾತ ಮಾದರಿ ಏನು ಅಲ್ಲಾ. ಆದರೆ ಮಾನವನ ಇತರೆ ಐಷಾರಾಮಿ ಅಗತ್ಯತೆಗಳನ್ನು ಇದು ಮೀರಿಸಿದೆ” ಎಂದು ‘ಐಪಾಸ್‌’ನ ಮುಖ್ಯ ವಾಣಿಜ್ಯ ಅಧಿಕಾರಿ ‘ಪ್ಯಾಟ್‌ ಹ್ಯೂಮ್’ ಹೇಳಿದ್ದಾರೆ. ವೈಫೈ ಸಂಪರ್ಕ ಪರಿಕಲ್ಪನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇಂದು ವೈಫೈ ಸಂಪರ್ಕ ಎಂಬುದು ಮಾನವನ ಲೈಂಗಿಕತೆ, ಮದ್ಯ ಸೇವನೆ ಇತರೆ ಐಷಾರಾಮಿ ಪ್ರಾಧಾನ್ಯತೆಗಳಿಗಿಂತ ಹೆಚ್ಚಾಗಿರುವುದು ಎಲ್ಲರ ಹುಬ್ಬೇರಿಸಿದೆ.

ಅಧ್ಯಯನದ ಪ್ರಕಾರ, ಬಹುಸಂಖ್ಯಾತ ಜನರು ಇತ್ತೀಚಿನ ದಿನಗಳಲ್ಲಿ ತಾವು ಹೋಗುವ ಪ್ರವಾಸ ಸ್ಥಳಗಳ ಹೋಟೆಲ್ ಮತ್ತು ತಂಗುವ ಸ್ಥಳಗಳಲ್ಲಿ ವೈಫೈ ಸಂಪರ್ಕ ಸೇವೆ ಹೊಂದಿದೆಯೇ ಎಂದು ಮೊದಲು ತಿಳಿದುಕೊಳ್ತಿದ್ದಾರೆ.  ಹೀಗಾಗಿ ಮುಂದಿನ ದಿನಗಳಲ್ಲಿ ಜನರು ಬೇರೊಂದು ವಸ್ತುವಿಗೆ ಪ್ರಾಧಾನ್ಯತೆ ನೀಡಿದರೂ ಆಶ್ಚರ್ಯ ಪಡಬೇಕಿಲ್ಲ.

-ಸುಜಿತ್ ಕಳಸ

Comments are closed.

Social Media Auto Publish Powered By : XYZScripts.com