ಸರಣಿ ಮುನ್ನಡೆ ಸಾಧಿಸಿದ ಭಾರತ ಇಂಗ್ಲೆಂಡ್ ಗೆ ಸೋಲು

ವಿಶಾಖಪಟ್ಟಣಂ:ನ-21: ವಿಶಾಖಪಟ್ಟಣಂ ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಭಾರತ 246 ರನ್ ಗಳ ಅಂತರದ ಭರ್ಜರಿ ಜಯ ದಾಖಲಿಸಿದೆ.

c-photo1

 

ಭಾರತ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ನ ಡಾ.ವೈ.ಆರ್.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ನಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಕೊನೆಯ ದಿನದಾಟದಲ್ಲಿ ವಿರಾಟ ಕೊಹ್ಲಿ ಸಾರಥ್ಯದಲ್ಲಿ ಬೌಲರ್‍ಗಳು ನಡೆಸಿದ ಸಾಂಘಿಕ ಹೋರಾಟಕ್ಕೆ ಯಶಸ್ಸು ಸಿಕ್ಕಿ ಇಂಗ್ಲೆಂಡ್ ತನ್ನ ದ್ವಿತೀಯ ಇನ್ನಿಂಗ್ಸ್‍ನ್ನು 158 ರನ್‍ಗಳಿಗೆ ಸರ್ವ ಪತನಗೊಂಡು ಹೀನಾಯ ಸೋಲು ಅನುಭವಿಸಿದೆ.

ಭಾರತ ನೀಡಿದ್ದ 405 ರನ್ ಗಳ ಬೃಹತ್ ರನ್ ಗಳ ಗುರಿಯನ್ನು ಬೆನ್ನುಹತ್ತಿದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಕಂಡಿತಾದರೂ ಅಂತಿಮದಿನದಾಟದಲ್ಲಿ 97.3 ಓವರ್ ಗಳಲ್ಲಿ ಕೇವಲ 158 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.

ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ (3-52), ಮೊದಲ ಪಂದ್ಯವಾಡಿದ ಯಾದವ್(3-30) ತಲಾ ಮೂರು ವಿಕೆಟ್ ಉರುಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ತಲಾ ಎರಡು ವಿಕೆಟ್ ಉರುಳಿಸಿದ ವೇಗಿ ಮುಹಮ್ಮದ್ ಶಮಿ (2-30) ಹಾಗೂ ಸ್ಪಿನ್ನರ್ ರವೀಂದ್ರ ಜಡೇಜ (2-35) ಇಂಗ್ಲೆಂಡ್ ಗೆ ಸವಾಲಾಗಿ ಪರಿಣಮಿಸಿದರು.

ನಾಲ್ಕನೇ ದಿನದಂತ್ಯದಲ್ಲಿ ಭಾರತದ ಸ್ಪಿನ್ನರ್ ಅಶ್ವಿನ್ ಅವರ ಮಾರಕ ಬೌಲಿಂಗ್ ಗೆ ತತ್ತರಿಸಿದ್ದ ಇಂಗ್ಲೆಂಡ್ ತಂಡ ಐದನೇ ದಿನದ ಮಧ್ಯಾಹ್ನದ ವೇಳೆಗೇ ಕೇವಲ 158ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಳ್ಳುವ ಮೂಲಕ ಭಾರತ ಎದುರು 246 ರನ್ ಗಳ ಹೀನಾಯ ಸೋಲು ಕಂಡಿತು.

Comments are closed.

Social Media Auto Publish Powered By : XYZScripts.com