ಬರ ಪರಿಹಾರಕ್ಕಾಗಿ ಹಣ ಬಿಡುಗಡೆ

amend -break -decision -Advisory Committee -meeting -thematic -debate

ವಿಧಾನಸಭೆ ಸ್ಪೀಕರ್ ಕೋಳಿವಾಡ ನೇತೃತ್ವದಲ್ಲಿ ಕಲಾಪ ಸಲಹಾ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸೇರಿ ಹಲವು ನಾಯಕರು ಭಾಗವಹಿಸಿದ್ದರು.

ಈ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು   ಕೈಗೊಳ್ಳಲಾಗಿದೆ. ಕಲಾಪದ ಎರಡು ದಿನಗಳಲ್ಲಿ ರಾಜ್ಯದಲ್ಲಿ ಆವರಿಸಿರುವ ಬರ ಪರಿಸ್ಥಿತಿ ಕುರಿತು ಚರ್ಚಿಸಲಾಗುವುದು. ನಂತರ ಬುಧವಾರ ಬೆಳಿಗ್ಗೆ ಸರ್ಕಾರ ಬರದ ಮೇಲಿನ ಚರ್ಚೆಗೆ ಉತ್ತರ ನೀಡಲಿದೆ.

ಕರ್ನಾಟಕ ರಾಜ್ಯದ 26 ಜಿಲ್ಲೆಗಳ 139 ತಾಲೂಕುಗಳನ್ನು ಈಗಾಗಲೇ ಬರಪೀಡಿತ ತಾಲೂಕುಗಳೆಂದು ಘೋಷಸಿಲಾಗಿದ್ದು, ಬರ ಪರಿಹಾರ ಕಾಮಗಾರಿಗಳಿಗಾಗಿ 254 ಕೋಟಿ ರೂ ಗಳನ್ನು ಕಂದಾಯ ಸಚಿವ ವಿಧಾನಸಭೆಯಲ್ಲಿ ತಿಳಿಸಿದರು.ಬರ ಪರಿಹಾರ ಕಾಮಗಾರಿಗಳ ಕುರಿತು ಶಾಸಕ ಯು.ಬಿ. ಬಣಕಾರ್ ಅವರು ಕೇಳಿದ ಪ್ರೆಶ್ನಗೆ ಉತ್ತರಿಸಿದ ಸಚಿವರು ತುರ್ತು  ಕುಡಿಯುವ ನೀರು ಪೂರೈಕೆ,ಜಾನುವಾರು ಸಂರಕ್ಷಣೆ ಹಾಗೂ ಮಹಾತ್ಮಾ ಗಾಂಧಿ ರಾಷ್ರೀಯ  ಉದ್ಯೋಗ  ಯೋಜನೆಯಡಿ ಉದ್ಯೋಗ ಕಲ್ಪಸಲು ಸೂಚನೆ ನೀಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ 1903.93 ಕೋಟಿ ಬಿಡುಗಡೆ ಮಾಡಲಾಗಿದೆ. ಬರ ಪರಿಹಾರ  ಕಾಯ್ರಗಳಿಗೆ 4702.54 ಕೋಟಿ ಬಿಡಿಗಡೆವ ಮಾಡುವಂತೆ  ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ.ಈ ಕುರಿತು ಕೇಂದ್ರ ಸರ್ಕಾರದ  ಅಂತರ್ ಇಲಾಖಾ ಅಧಿಕಾರಿಗಳ ತಂಡ ನವಂಬರ್ 2 ರಿಂದ 5 ರ ವರೆಗೆ ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು,ಕೇಂದ್ರ ಸರ್ಕಾರದ ಅನುಧಾನವನ್ನು ನಿರೀಕ್ಷೀಸಲಾಗಿದೆ ಎಂದು ಉತ್ತರಿಸಿದರು.

ಬಳಿಕ ಎರಡು ದಿನಗಳ ಕಾಲ ಮಹದಾಯಿ ನದಿ ನೀರು ಹಂಚಿಕೆ ವಿವಾದ ಕುರಿತು ಎರಡು ದಿನಗಳ ಕಾಲ ಚರ್ಚಿಸಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ.

Comments are closed.