ವಾಟ್ಸಾಪ್ನಲ್ಲಿ ಸೆಂಡ್ ಮೆಸೇಜ್ ಅನ್ಸೆಂಡ್ ಮಾಡೋದು ಗೊತ್ತಾ?

ನಿಮ್ಮ ಕಾಂಟ್ಯಾಕ್ಟ್‌ಗಳಿಗೆ ಆಕಸ್ಮಿಕವಾಗಿ ಯಾರಿಗೋ ಸೆಂಡ್‌ ಅಗಬೇಕಾದ ಮೆಸೇಜ್ ಇನ್ಯಾರಿಗೋ ಸೆಂಡ್‌ ಆದಲ್ಲಿ, ಮೆಸೇಜ್‌ ಅನ್ನು ಅನ್‌ಸೆಂಡ್‌ ಮಾಡಬಹುದು.

ಕೆಲವೊಂದು ಮಾಹಿತಿಗಳನ್ನು ಹೇಳಿಯು, ಹೇಳಿಲ್ಲ ಎಂದು ಸುಳ್ಳು ಹೇಳಬಹುದು. ಆದರೆ ವಾಟ್ಸಾಪ್‌ನಲ್ಲಿ ಸ್ನೇಹಿತರಿಗೆ ಮೆಸೇಜ್‌ ಕಳುಹಿಸಿ, ಅದು ತಪ್ಪಾದ ಮೆಸೇಜ್ ಆಗಿದ್ದಲ್ಲಿ, ನಾನು ಕಳುಹಿಸಿಲ್ಲ ಎಂದು ಎನ್ನಲು ಸಾಧ್ಯವಿಲ್ಲ.ಹೌದು, ಕೆಲವೊಮ್ಮೆ ಯಾರಿಗೋ ಸೆಂಡ್‌ ಮಾಡಬೇಕಾದ ಮೆಸೇಜ್‌ಗಳು ಆಕಸ್ಮಿಕವಾಗಿ ಇನ್ಯಾರಿಗೋ ಸೆಂಡ್‌ ಆಗುತ್ತವೆ. ಇನ್ಯಾರಿಗೋ ಸೆಂಡ್ ಆದಲ್ಲಿ ಅನಾಹುತ ತಪ್ಪಿದಲ್ಲ. ಇಂತಹ ಸಮಯದಲ್ಲಿ ಇನ್ಯಾರಿಗೋ ಸೆಂಡ್ ಮಾಡಿದ ಮೆಸೇಜ್‌ ಅನ್ನು ಅನ್‌ಸೆಂಡ್‌ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಹಲವರನ್ನು ಕಾಡದೇ ಇರದು. ಈ ಪ್ರಶ್ನೆಗೆ ಇಲ್ಲಿದೆ ಉತ್ತರ.

stop-send-message

ಸೆಂಡ್‌ ಮಾಡಿದ ಮೆಸೇಜ್‌ ಅನ್ನು ಅನ್‌ಸೆಂಡ್‌ ಮಾಡಬಹುದೇ?

ಒಮ್ಮೆ ಸೆಂಡ್‌ ಮಾಡಿದ ಮೆಸೇಜ್‌ ಅನ್ನು ಅನ್‌ಸೆಂಡ್‌ ಮಾಡಬಹುದು. ಆದರೆ ಖಚಿತವಾಗಿ ಅನ್‌ಸೆಂಡ್‌ ಮಾಡಬಹುದು ಎಂದು ಹೇಳಲು ಸಾಧ್ಯವಿಲ್ಲ. ಸಾಧ್ಯವಾದಷ್ಟು ಪ್ರಯತ್ನಿಸಿದಲ್ಲಿ ನಿಮ್ಮ ಕಾಂಟ್ಯಾಕ್ಟ್‌ಗಳಿಗೆ ಸೆಂಡ್‌ ಮಾಡಿದ ಮೆಸೇಜ್‌ ಅನ್ನು ಅನ್‌ಸೆಂಡ್‌ ಮಾಡಬಹುದು.

ವಾಟ್ಸಾಪ್ ಮೆಸೇಜ್‌ ಅನ್‌ಸೆಂಡ್ ಹೇಗೆ?
ವಾಟ್ಸಾಪ್‌ನಲ್ಲಿ ನಿಮ್ಮ ಕಾಂಟ್ಯಾಕ್ಟ್‌ಗಳಿಗೆ ಆಕಸ್ಮಿಕವಾಗಿ ಸೆಂಡ್ ಮಾಡಿದ ಮೆಸೇಜ್‌ ಅನ್ನು ಅನ್‌ಸೆಂಡ್ ಮಾಡಲು, ಅವರಿಗೆ ಸೆಂಟ್ ಆಗುವ ಮೊದಲು ವೈಫೈ ಅಥವಾ ಮೊಬೈಲ್ ಡಾಟಾವನ್ನು ತಕ್ಷಣ ಆಫ್‌ ಮಾಡಿ. ಅಂದರೆ ಮೆಸೇಜ್‌ ಟಿಕ್ ಪಡೆಯುವಷ್ಟರಲ್ಲಿ ಮೊಬೈಲ್‌ ಡಾಟಾ ಅಥವಾ ವೈಫೈ ಅನ್ನು ಆಫ್‌ ಮಾಡಿ.

whatsapp-send-unsend

ಕಡಿಮೆ ವೇಗದ ಇಂಟರ್ನೆಟ್
ಕಡಿಮೆ ವೇಗದ ಇಂಟರ್ನೆಟ್ ಸಂಪರ್ಕ ಹೊಂದಿದ್ದಲ್ಲಿ, ಇತರರಿಗೆ ಸೆಂಡ್ ಮಾಡಿದ ಮೆಸೇಜ್‌ಗಳನ್ನು ಅನ್‌ಸೆಂಡ್ ಮಾಡುವುದು ಸುಲಭ ಹಾಗೂ ಯಶಸ್ವಿಯಾಗಿ ಅನ್‌ಸೆಂಡ್ ಮಾಡಬಹುದು. ವಾಟ್ಸಾಪ್ ಹೆಚ್ಚು ವೇಗವಾಗಿದ್ದು, ಅದರ ಸರ್ವರ್‌ಗೆ ಮೆಸೇಜ್‌ ಬಹುಬೇಗ ತಲುಪುತ್ತದೆ.

ಸಂಪರ್ಕ ಬ್ಲಾಕ್‌ ಮಾಡಿ

ಆಕಸ್ಮಿಕವಾಗಿ ಯಾರಿಗೋ ಸೆಂಡ್ ಆದ ಮೆಸೇಜ್‌ ಕೇವಲ ಒಂದು ಸರಿ ಟಿಕ್ ಅನ್ನು ಪಡೆದಿದ್ದಲ್ಲಿ, ಆ ಕಾಂಟ್ಯಾಕ್‌ ಅನ್ನು ಬ್ಲಾಕ್ ಮಾಡಿ. ಎರಡು ಸರಿ ಟಿಕ್ ಪಡೆದಲ್ಲಿ ಮೆಸೇಜ್‌ ಅವರಿಗೆ ಡೆಲಿವರಿ ಆಗಿದೆ ಎಂದರ್ಥ. ಆದ್ದರಿಂದ ಅದಕ್ಕೂ ಮುನ್ನ ಅವರನ್ನು ಬ್ಲಾಕ್‌ ಮಾಡಿ ನಂತರ ಸುಲಭವಾಗಿ ಅನ್‌ಬ್ಲಾಕ್ ಮಾಡಬಹುದು. ಈ ರೀತಿಯು ಸಹ ಮೆಸೇಜ್‌ ಅನ್‌ಸೆಂಡ್ ಆಗುವಂತೆ ಮಾಡಬಹುದು.

ಮೆಸೇಜ್‌ 30 ದಿನ ಸರ್ವರ್‌ನಲ್ಲಿರುತ್ತದೆ

ಮೆಸೇಜ್‌ ಅನ್ನು ಅನ್‌ಸೆಂಡ್ ಮಾಡಲು ಕಾಂಟ್ಯಾಕ್ಟ್‌ ಅನ್ನು ಬ್ಲಾಕ್‌ ಮಾಡಬಹುದು. ಆದರೆ ಮೆಸೇಜ್‌ ಡೆಲಿವರಿ ಆಗದಿದ್ದಲ್ಲಿ, 30 ದಿನಗಳ ಕಾಲ ವಾಟ್ಸಾಪ್‌ ಸರ್ವರ್‌ನಲ್ಲಿ ಇರುತ್ತದೆ. ಈ ಸಮಯದಲ್ಲಿ ಅವರನ್ನು ಅನ್‌ಬ್ಲಾಕ್‌ ಮಾಡಿದರೆ ಮೆಸೇಜ್ ಪುನಃ ಡೆಲಿವರಿ ಆಗುವ ಸಂಭವವಿರುತ್ತದೆ. ಯಾವುದಕ್ಕೂ ಮೆಸೇಜ್ ಕಳ್ಸೋ ಮುನ್ನ ಸರಿಯಾದ ವ್ಯಕ್ತಿಗೆ ಕಳಿಸಿದರೆ ಇಂಥ ಸರ್ಕಸ್ ಮಾಡಬೇಕಿಲ್ಲ.

Comments are closed.

Social Media Auto Publish Powered By : XYZScripts.com